ಬಿಹಾರ ಮಂತ್ರಿಮಂಡಲ ಸಭೆ ಇಂದು, ವಿಧಾನಸಭೆ ವಿಸರ್ಜನೆ ಶಿಫಾರಸ್ಸಿಗೆ ಮಾಂಝಿ ಸಿದ್ಧ

ವಿರುದ್ಧ ಕ್ಯಾಂಪಿನ ಇಬ್ಬರು ಮಂತ್ರಿಗಳನ್ನು ರದ್ದು ಮಾಡಿರುವ ಬಿಹಾರದ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ
ಜಿತನ್ ರಾಮ್ ಮಾಂಝಿ
ಜಿತನ್ ರಾಮ್ ಮಾಂಝಿ

ಅಪ್ಡೇಟ್: ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಇಂದು ಕರೆದಿದ್ದ ಮಂತ್ರಿಮಂಡಲದ ಸಭೆಯಲ್ಲಿ ೨೮ ಮಂತ್ರಿಗಳಲ್ಲಿ ೭ ಜನ ವಿಧಾನಸಭೆಯ ವಿಸರ್ಜನೆಯನ್ನು ಬೆಂಬಲಿಸಿದ್ದು ಇನ್ನುಳಿದ ನಿತೀಶ್ ಕುಮಾರ್ ಬಣದ ಬೆಂಬಲಿಗರು ಸಭೆಯಿಂದ ಹೊರನಡೆದಿದ್ದಾರೆ. ಇದರ ಹೊರತಾಗಿಯೂ ಮಾಂಝಿ ರಾಜ್ಯಪಾಲರನ್ನು ಭೇಟಿ ಮಾಡಿ ವಿಧಾನಸಭೆ ವಿಸರ್ಜನೆಗೆ ಶಿಫಾರಸ್ಸು ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಪಾಟ್ನಾ
: ವಿರುದ್ಧ ಕ್ಯಾಂಪಿನ ಇಬ್ಬರು ಮಂತ್ರಿಗಳನ್ನು ರದ್ದು ಮಾಡಿರುವ ಬಿಹಾರದ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಇಂದು ಮಂತ್ರಿಮಂಡಲದ ಸಭೆ ಕರೆದಿದ್ದು ರಾಜ್ಯದ ವಿಧಾನಸಭೆಯನ್ನು ವಿಸರ್ಜಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಸಭೆಯನ್ನು ಮಧ್ಯಾಹ್ನ ೨ ಘಂಟೆಗೆ ಕರೆಯಲಾಗಿದೆ.

ಇದಕ್ಕೂ ಮುಂಚೆ ಜೆಡಿಯು ಪಕ್ಷದ ಅಧ್ಯಕ್ಷ ಶರದ್ ಯಾದವ್ ಎಲ್ಲ ಶಾಸಕರ ಸಭೆಯನ್ನು ೪ ಘಂಟೆಗೆ ನಡೆಸುವುದಾಗಿ ಘೋಷಿಸಿದ್ದರು. ಆ ಸಭೆಯಲ್ಲಿ ಮುಖ್ಯಮಂತ್ರಿಯವರನ್ನು ಬದಲಿಸಬಹುದೆಂದು ಊಹಿಸಲಾಗಿತ್ತು. ಈಗ ಮುಖ್ಯಮಂತ್ರಿಗಳು ಅದಕ್ಕೂ ಮುಂಚಿತವಾಗಿ ಸಭೆ ಕರೆದಿರುವುದು ರಾಜಕೀಯ ಪಂಡಿತರ ಕುತೂಹಲ ಕೆರಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com