
ಕೊಲ್ಕೊತ್ತ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹರಿಹಾಯ್ದಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೆಹಲಿಯಲ್ಲಿ ಎಎಪಿ ಪಕ್ಷದ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿ "ಇದು ಸೊಕ್ಕಿಗೆ ದೊರೆತ ಸೋಲಿನ ಪಾಠ" ಎಂದು ಮಂಗಳವಾರ ಬಣ್ಣಿಸಿದ್ದಾರೆ.
"ಇದು ಜನರ ಗೆಲುವು ಹಾಗೂ ಸೊಕ್ಕು ಮತ್ತು ದ್ವೇಷವನ್ನು ಹರಡುತ್ತಿದ್ದವರಿಗೆ ಸಿಕ್ಕ ಸೋಲು" ಎಂದು ಅವರು ಟ್ವೀಟ್ ಮಾಡಿದ್ದಾರೆ.
"ದೆಹಲಿ ಮತದಾರರಿಗೆ ಹಾಗೂ ಎಎಪಿ ಕಾರ್ಯಕರ್ತರು ಮತ್ತು ನಾಯಕರಿಗೆ ನನ್ನ ಅಭಿನಂದನೆಗಳು. ನಮಗೆಲ್ಲಾ ಸಂತಸವಾಗಿದೆ ಎಂದಿದ್ದಾರೆ.
"ದೆಹಲಿ ಚುನಾವಣೆಗಳು ಈಗಿನ ರಾಜಿಕೀಯ ಸ್ಥಿತಿಗೆ ತಿರುವು ನೀಡಿದ ಸಂಗತಿ. ರಾಜಕೀಯ ಪಿತೂರಿಗಳಿಗೆ ಪ್ರಜಾಪ್ರಭುತ್ವದಲ್ಲಿ ಜಾಗವಿಲ್ಲ ಎಂದು ಇದು ತೋರಿಸುತ್ತದೆ. ದೇಶಕ್ಕೆ ಬದಲಾವಣೆಯ ಅಗತ್ಯ ಇತ್ತು" ಎಂದಿದ್ದಾರೆ.
"ದೆಹಲಿ ಚುನಾವಣೆಯನ್ನು ಗೆದ್ದ ಎಎಪಿಗೆ ನನ್ನ ಅಭಿನಂದನೆಗಳು. ಹಾಗು ಹೊಸ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಒಳ್ಳೆಯದಾಗಲಿ" ಎಂದಿದ್ದಾರೆ.
Advertisement