
ನವದೆಹಲಿ: ಭಾರತ ಮತ್ತು ಶ್ರೀಲಂಕಾದ ಸಂಬಂಧಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ನಾಗರಿಕ ಅಣುಒಪ್ಪಂದಕ್ಕೆ ಸಹಿ ಹಾಕಿದ್ದಲ್ಲದೆ ರಕ್ಷಣೆ ಮತ್ತು ಭದ್ರತಾ ಸಂಬಂಧವನ್ನು ವೃದ್ಧಿಸಿಕೊಳ್ಳಲು ಎರಡೂ ದೇಶಗಳು ನಿರ್ಧರಿಸಿವೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರ ಮಾತುಕತೆಯ ನಂತರ ಈ ಘೋಷಣೆಯನ್ನು ಮಾಡಲಾಯಿತು. ಮೀನುಗಾಗರ ಸಮಸ್ಯೆಯನ್ನು ಮಾನವೀಯತೆಯ ನಡೆಯಿಂದ ಬಗೆಹರಿಸಿಕೊಳ್ಳಲು ಎರಡೂ ದೇಶದ ನಾಯಕರು ತಮ್ಮ ಬದ್ಧತೆಯನ್ನು ಚರ್ಚಿಸಿದರು.
"ನಾಗರಿಕ ಅಣು ಒಪ್ಪಂದದಲ್ಲಿನ ದ್ವಿಪಕ್ಷೀಯ ಸಂಬಂಧ ಎರಡೂ ದೇಶಗಳ ಪರಸ್ಪರ ನಂಬಿಕೆಯನ್ನು ವ್ಯಕ್ತಪಡಿಸುತ್ತದೆ. ಶ್ರೀಲಂಕಾ ಸಹಿ ಮಾಡಿರುವ ಈ ಮಟ್ಟದ ಮೊದಲ ಒಪ್ಪಂದ ಇದು. ಇದು ಕೃಷಿ, ಆರೋಗ್ಯ ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳಲ್ಲಿ ಹೊಸ ಭರವಸೆ ಹುಟ್ಟಿಸುತ್ತದೆ" ಎಂದು ಪ್ರಧಾನಿ ಮೋದಿ ಚರ್ಚೆಯ ನಂತರ ವರದಿಗಾರರಿಗೆ ತಿಳಿಸಿದ್ದಾರೆ.
Advertisement