
ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರದ ಮೊದಲ ದಿನವಾದ ಇಂದು ದೆಹಲಿ ಸೆಕ್ರೆಟರಿಯಟ್ ಗೆ ಮಾಧ್ಯಮ ಪ್ರವೇಶವನ್ನು ನಿರಾಕರಿಸಲಾಗಿದೆ.
ದಿನಪತ್ರಿಕೆ ಮತ್ತು ಟಿ ವಿ ಮಾಧ್ಯಮದ ಪತ್ರಕರ್ತರಿಬ್ಬರಿಗೂ ಪ್ರವೇಶ ನಿರಾಕರಿಸಲಾಯಿತು.
"ಪತ್ರಕರ್ತರನ್ನು ಒಳಗೆ ಬಿಡದಂತೆ ನಮಗೆ ಸರ್ಕಾರದ ಹಿರಿಯ ಅಧಿಕಾರಿಗಳಿಂದ ಆದೇಶವಿದೆ" ಎಂದು ಭದ್ರತಾ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದಾರೆ. ಈ ಆದೇಶ ಮಾತಿನ ಆದೇಶ ಎಂದು ಅವರು ತಿಳಿಸಿದ್ದಾರೆ.
ಇದರ ಪ್ರತಿಕ್ರಿಯೆಗಾಗಿ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ.
ಸರ್ಕಾರ ಸುಮಾರು ೪:೩೦ ಘಂಟೆಗೆ ಸಭೆ ಸೇರಲಿದ್ದು ಕೂಡಲೆ ಮಾಡಬೇಕಾದ ಕೆಲಸಗಳ ಬಗ್ಗೆ ಸಂಪುಟ ಸದಸ್ಯರು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಸಭೆಯ ನಂತರ ಉಪಮುಖ್ಯಮಂತ್ರಿ ಮನೀಶ್ ಸಿಸೋದಿಯಾ ಪತ್ರಿಕಾ ಗೋಷ್ಠಿ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಮಧ್ಯೆ ದೆಹಲಿ ಪೊಲೀಸ್ ಆಯುಕ್ತ ಬಿ ಎಸ್ ಬಸ್ಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೆಕ್ರೆಟರಿಯಟ್ ನಲ್ಲಿ ೧೧:೪೫ಕ್ಕೆ ಭೇಟಿ ಮಾಡಿದ್ದಾರೆ.
Advertisement