ಹಂದಿ ಜ್ವರ: ದೆಹಲಿಯಲ್ಲಿ ಇನ್ನೊಂದು ಸಾವು

ಶುಕ್ರವಾರ ದೆಹಲಿಯಲ್ಲಿ 38ರ ಹರೆಯದ ಮಹಿಳೆಯೊಬ್ಬರು ಹೆಚ್1 ಎನ್ 1 ವೈರೆಸ್ ಸೋಂಕು ತಗಲಿ ಸಾವನ್ನಪ್ಪಿರುವ...
ಹೆಚ್1 ಎನ್ 1 ವೈರೆಸ್ ಸೋಂಕು  (ಸಾಂದರ್ಭಿಕ ಚಿತ್ರ)
ಹೆಚ್1 ಎನ್ 1 ವೈರೆಸ್ ಸೋಂಕು (ಸಾಂದರ್ಭಿಕ ಚಿತ್ರ)
Updated on

ನವದೆಹಲಿ: ಶುಕ್ರವಾರ ದೆಹಲಿಯಲ್ಲಿ 38ರ ಹರೆಯದ ಮಹಿಳೆಯೊಬ್ಬರು ಹೆಚ್1 ಎನ್ 1 ವೈರೆಸ್ ಸೋಂಕು ತಗಲಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.  

ಉತ್ತಮ್ ನಗರ  ನಿವಾಸಿಯಾದ ಆ ಮಹಿಳೆಯನ್ನು ಕೆಲ ದಿನಗಳ ಹಿಂದೆ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಾಗಿದ್ದು, ಶುಕ್ರವಾರ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.

ಈ ಮಹಿಳೆಯ ಸಾವಿನೊಂದಿಗೆ ಇದೀಗ ರಾಜಧಾನಿ ದೆಹಲಿಯಲ್ಲಿ ಹಂದಿಜ್ವರಕ್ಕೆ ಬಲಿಯಾದವರ ಸಂಖ್ಯೆ 5 ಆಗಿದೆ.

ಅದೇ ವೇಳೆ ಇನ್ನು 5 ಹೊಸ ಪ್ರಕರಣಗಳು ಕೂಡಾ ಬೆಳಕಿಗೆ ಬಂದಿವೆ. ನಾಲ್ಕು ಜನ ಪುರುಷರು ಹಾಗು ಓರ್ವ ಮಹಿಳೆಗೆ ಹೆಚ್1 ಎನ್ 1 ಸೋಂಕು ತಗಲಿದೆ ಎಂದು ಹೇಳಲಾಗುತ್ತಿದೆ.

ಕಳೆದ ಮೂರು ವಾರಗಳಲ್ಲಿ  ದೆಹಲಿಯಲ್ಲಿ  ಹೆಚ್ 1 ಎನ್1 ವೈರೆಸ್ ತಗಲಿರುವವರ ಸಂಖ್ಯೆ 4ಕ್ಕೇರಿದೆ ಎಂದು ಬಲ್ಲಮೂಲಗಳು ಹೇಳಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com