ಆರ್‌ಎಸ್‌ಎಸ್ ನಾಯಕರನ್ನು ಮೆಚ್ಚಿಸಲು ನನ್ನ ಕಾರ್ಯದರ್ಶಿ ಬಂಧನ: ಮಾರನ್

ತಮಿಳುನಾಡು ಆರ್‌ಎಸ್‌ಎಸ್ ನಾಯಕರನ್ನು ಮೆಚ್ಚಿಸಲು ಕೇಂದ್ರ ಸರ್ಕಾರ ಸಿಬಿಐ ಮೂಲಕ ನನ್ನ ಆಪ್ತ ಕಾರ್ಯದರ್ಶಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಟೆಲಿಕಾಂ ಹಗರಣದ ಪ್ರಮುಖ...
ದಯಾನಿಧಿ ಮಾರನ್
ದಯಾನಿಧಿ ಮಾರನ್

ಚೆನ್ನೈ: ತಮಿಳುನಾಡು ಆರ್‌ಎಸ್‌ಎಸ್ ನಾಯಕರನ್ನು ಮೆಚ್ಚಿಸಲು ಕೇಂದ್ರ ಸರ್ಕಾರ ಸಿಬಿಐ ಮೂಲಕ ನನ್ನ ಆಪ್ತ ಕಾರ್ಯದರ್ಶಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಟೆಲಿಕಾಂ ಹಗರಣದ ಪ್ರಮುಖ ಆರೋಪಿ ಹಾಗೂ ಮಾಜಿ ಕೇಂದ್ರ ಸಚಿವ ದಯಾನಿಧಿ ಮಾರನ್ ಅವರು ಗುರುವಾರ ಆರೋಪಿಸಿದ್ದಾರೆ.

ಅಕ್ರಮ ಟೆಲಿಫೋನ್ ಎಕ್ಸ್‌ಚೇಂಜ್ ಸ್ಥಾಪನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸಿಬಿಐ ಮಾರನ್ ಅವರ ಮಾಜಿ ಆಪ್ತ ಕಾರ್ಯದರ್ಶಿ ಕಣ್ಣನ್ ಸೇರಿದಂತೆ ಸನ್ ಟಿವಿಯ ಮೂವರು ಸಿಬ್ಬಂದಿಯನ್ನು ನಿನ್ನೆ ತಡ ರಾತ್ರಿ ಸಿಬಿಐ ಬಂಧಿಸಿತ್ತು. ಈ ಬಗ್ಗೆ ಇಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಮಾರನ್, ಆರ್‌ಎಸ್‌ಎಸ್ ನಾಯಕರನ್ನು ತೃಪ್ತಿಪಡಿಸಲು ತಮ್ಮ ಕಾರ್ಯದರ್ಶಿ ಹಾಗೂ ಇತರರನ್ನು ಬಂಧಿಸಲಾಗಿದೆ ಎಂದು ಆರೋಪಿಸಿದ್ದಾರೆ.

ತನ್ನ ವಿರುದ್ಧ ಹೇಳಿಕೆ ನೀಡುವಂತೆ ಬಂಧಿತರಿಗೆ ಥರ್ಡ್ ಡಿಗ್ರಿ ಟ್ರೀಟ್‌ಮೆಂಟ್ ನೀಡಿ, ಹಿಂಸಿಸಲಾಗುತ್ತಿದೆ ಎಂದು ಆರೋಪಿಸಿರುವ ಮಾರನ್ ಈ ಕುರಿತು ಸಿಬಿಐ ನಿರ್ದೇಶಕರಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

ಮಾಜಿ ಟೆಲಿಕಾಂ ಸಚಿವ ದಯಾನಿಧಿ ಮಾರನ್ ಮನೆಯಲ್ಲಿ ಅಕ್ರಮ ಟೆಲಿಫೋನ್ ಎಕ್ಸ್‌ಚೇಂಜ್ ಸ್ಥಾಪಿಸುವ ಮೂಲಕ ಡೇಟಾ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿತ್ತೆಂದು ಆರೋಪಿಸಲಾಗಿದೆ. ಈ ಉದ್ದೇಶಕ್ಕಾಗಿ ಅಧಿಕ ವೇಗದ ಟೆಲಿಫೋನ್ ಮಾರ್ಗಗಳನ್ನು ಮಂಜೂರು ಮಾಡಿದ ಬಿಎಸ್ಎನ್‌ಎಲ್ ಅಧಿಕಾರಿಗಳು ಮತ್ತು ಮಾರನ್ ವಿರುದ್ಧ ಕೇಸು ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com