ಶರಣೆಂದು ಬಂದರೆ ಆಡ್ವಾಣಿ ಅಡ್ಡಿ

1993ರಲ್ಲಿ ನಾವು ಭಾರತಕ್ಕೆ ಬರಲು ಸಿದ್ಧರಿದ್ದೆವು. ನೀವು ಮತ್ತು ನಿಮ್ಮ ಸರ್ಕಾರ ಅವಕಾಶ ನೀಡಲಿಲ್ಲ. ಇನ್ನು ನಾವು ಭಾರತಕ್ಕೆ ಬರೋ ಪ್ರಶ್ನೆಯೇ...
ದಾವೂದ್
ದಾವೂದ್

ನವದೆಹಲಿ: ``1993ರಲ್ಲಿ ನಾವು ಭಾರತಕ್ಕೆ ಬರಲು ಸಿದ್ಧರಿದ್ದೆವು. ನೀವು ಮತ್ತು ನಿಮ್ಮ ಸರ್ಕಾರ ಅವಕಾಶ ನೀಡಲಿಲ್ಲ. ಇನ್ನು ನಾವು ಭಾರತಕ್ಕೆ ಬರೋ ಪ್ರಶ್ನೆಯೇ ಇಲ್ಲ'' ಇದು ಕರಾಚಿಯಿಂದ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಎಕ್ಸ್ ಕ್ಲೂಸಿವ್ ದೂರವಾಣಿ ಸಂದರ್ಶನದಲ್ಲಿ ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟ ಛೋಟಾ ಶಕೀಲ್ ಆಡಿದ ಮಾತುಗಳು.
ಕುತೂಹಲಕಾರಿ ಸಂದರ್ಶನದಲ್ಲಿ ತಾವು ಭಾರತಕ್ಕೆ ಬರಲು ಅಡ್ಡಿಪಡಿಸಿದವರ ಬಗ್ಗೆ, ತಾವು ಯಾರೊಂದಿಗೆ ಮಾತಡಿದ್ದೇವೆಂಬ ಬಗ್ಗೆ ಹಾಗೂ ಭೂಗತಜಗತ್ತಿನ ತಮ್ಮ ಶತ್ರು-ಪಾಳಯದವರ ಬಗ್ಗೆ ಹಲವು ಇಂಟರೆಸ್ಟಿಂಗ್ ವಿಷಯಗಳನ್ನು ಹೊರ-ಹಾಕಿದ ಶಕೀಲ್, ಸಂದರ್ಶಕರ ಪ್ರಶ್ನೆಗೆ ಉತ್ತರಿ-ಸುವುದಕ್ಕಿಂತ ತನಗೇನು ಹೇಳಿ-ಕೊಳ್ಳ-ಬೇಕಿತ್ತೋ ಅದಿಷ್ಟನ್ನೂ ಹೇಳಿ-ಕೊಂಡಿದ್ದಾನೆ.
ಆಡ್ವಾಣಿ ಅಡ್ಡಿಯಾದರು : ``1993ರಲ್ಲಿ ಭಾಯ್(ದಾವೂದ್) ಲಂಡನ್ ನಲ್ಲಿ ಜೇಠ್ಮಲಾನಿಯನ್ನು ಭೇಟಿಯಾಗಿ, ಭಾರತಕ್ಕೆ ವಾಪಸ್ಸಾಗುವು ಇರಾದೆ ವ್ಯಕ್ತಪಡಿಸಿದ್ದರು. ಆದರೆ ಆಡ್ವಾಣಿ ಕಡ್ಡಿ ಆಡಿಸಿಬಿಟ್ಟರು. ನಿಮ್ಮ ಸರ್ಕಾರವೇ ಅವಕಾಶ ನೀಡಲಿಲ್ಲ'' ಎಂದು ಶಕೀಲï ತನ್ನ ಮಾತಿನ ಮಧ್ಯೆ ಎಲ್.ಕೆ.ಆಡ್ವಾಣಿಯವರನ್ನು ಎಳೆದು ತಂದಿದ್ದಾನೆ.

ನಮ್ಮನ್ನೇನು ಕುರಿಮರಿ ಅಂದ್ಕೊಂಡಿ-ದೀರಾ?: ``ಯಾವುದೇ ಹೊಸ ಸರ್ಕಾರ ಅಧಿಕಾರಕ್ಕೆ ಬಂದರೂ ಮೊದಲು ಕೊಡುವ ಹೇಳಿಕೆಯೇ ಇದು. ದಾವೂದ್ ರನ್ನು ಭಾರತಕ್ಕೆ ಕರೆತರುತ್ತೇವೆ. ಹುಡುಕಿ ಎಳ್ಕೊಂಡುನ ಬರ್ತೀವಿ ಅಂತಾರೆ. ಏನು ಇದು ಹಲ್ವಾನಾ! ನಮ್ಮನ್ನೇನು ಕುರಿಮರಿ ಅಂದ್ಕೊಂಡಿದಾರಾ? ಎಳೆದು ತರೋದಾದ್ರೆ ಅವನನ್ನು(ಛೋಟಾ ರಾಜನ್) ಎಳೆದುತರಲಿ.'' ಎಂದು ಛೋಟಾ ಶಕೀಲ್ ಭಾರತ ಸರ್ಕಾರಗಳಿಗೆ ಸವಾಲು ಹಾಕಿ ಗೇಲಿ ಮಾಡಿದ್ದಾನೆ.

ಪತ್ರಕರ್ತನ ಬಾಯಿ ಮುಚ್ಚಿಸಿದ ಡಾನ್:
ನಾನು ಉತ್ತರ ಕೊಡ್ತೀನಿ ಅನಿಸೋ ಪ್ರಶ್ನೆ ಮಾತ್ರ ಕೇಳು. ನೀನು ಕೇಳೋ ಪ್ರಶ್ನೆಗೆಲ್ಲ ಉತ್ತರ ಸಿಗುತ್ತೆ ಅಂದ್ಕೋಬೇಡ. ಇಷ್ಟು ದಿನ ನಿಮಗೆ ಸಿಕ್ಕಿರೋ ಮಾಹಿತಿ ಎಲ್ಲ ನಿಜ ಅಲ್ಲ. ಏಜೆನ್ಸಿಗಳಿಗೂ ಗೊತ್ತು. ನಮ್ಮನ್ನು ಕರೆತರೋ ಯಾವು ಕನಸೂ ನನಸಾಗೋದಿಲ್ಲ. ಎಂದ ಶಕೀಲ್ ಪತ್ರಕರ್ತನೆದುರು ಕೆಲವು ಮಾಹಿತಿ ಮಾತ್ರ ಹೊರಗೆಡವಿದ್ದಾನೆ. ಐಪಿಎಲ್ ಮ್ಯಾಚ್ ಫಿಕ್ಸಿಂಗ್ ಬಗ್ಗೆ, ಭಾರತದಲ್ಲಿ ತನ್ನ ವ್ಯವಹಾರ ಮುಂದುವರೆಸೋ ಬಗ್ಗೆ, ತನ್ನ ಬದ್ಧವೈರಿ ಛೋಟಾ ರಾಜನ್ ಬಗ್ಗೆ ಕೂಡ ಖುಲ್ಲಂ ಖುಲ್ಲ ಹೇಳಿಕೊಂಡಿದ್ದಾನೆ.
ಛೋಟಾ ರಾಜನ್‍ಗೆ ಸ್ಕೆಚ್ ರೆಡಿ
``ಭಾರತ ಎರಡು ಗ್ಯಾಂಗ್‍ಗಳ ಮಧ್ಯೆ ತಾರತಮ್ಯ ತೋರುತ್ತಿದೆ. ಮಾತೆತ್ತಿದರೆ ದಾವೂದ್ ಮತ್ತು ಶಕೀಲïರನ್ನು ಹಿಡಿದು ತರ್ತೀವಿ ಅನ್ನೋ ಸರ್ಕಾರ, ಛೋಟಾ ರಾಜನ್ ಮತ್ತು ಸಹಚರರನ್ನು ಹಿಡಿದು ತರೋ ಮಾತೇ ಆಡೋಲ್ಲ ಯಾಕೆ? ಅವನು ಕ್ರಿಮಿನಲ್ ಅಲ್ವಾ? ಅವನು ಹತ್ಯೆ ಮಾಡಿಲ್ವಾ?'' ಎಂದು ಪ್ರಶ್ನಿಸುವ ಶಕೀಲ್, ``ನನಗೆ ಛೋಟಾ ರಾಜನ್ ಇರುವ ಜಾಗದ ಖಚಿತ ಮಾಹಿತಿ ಸಿಕ್ಕಿದೆ.ಆಸ್ಟ್ರೇಲಿಯಾದ ನ್ಯೂ ಕ್ಯಾಸಲïನಲ್ಲಿ ಅವನನ್ನು ಮುಗಿಸೋಕೆ ಸ್ಕೆಚ್ ರೆಡಿಯಾಗಿದೆ'' ಎಂದು ಹೇಳಿ ಹುಬ್ಬೇರುವಂತೆ ಮಾಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com