
ನವದೆಹಲಿ: ದೆಹಲಿಯ ಆಡಳಿತ ಪಕ್ಷ ಎಎಪಿಯ ಶಾಸಕ ವೇದ ಪ್ರಕಾಶ್ ಮೇಲೆ ಶುಕ್ರವಾರ ಬೆಳಗ್ಗೆ ಕಿಡಿಗೇಡಿಗಳು ಗುಂಡು ಹಾರಿಸಿದ್ದು ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾವಾನದ ಶಾಸಕ ವೇದ ಪ್ರಕಾಶ್ ಅವರು ಈಶ್ವರ್ ಕಾಲೋನಿಯ ತಮ್ಮ ಕಚೇರಿಯ ಮುಂದೆ ಗುಂಡಿನ ದಾಳಿಗೆ ಒಳಗಾಗಿದ್ದಾರೆ.
"ಶಾಸಕ ವೇದ ಪ್ರಕಾಶ್ ಮೇಲೆ ಕೆಲವು ಕಿಡಿಗೇಡಿಗಳು ಅವರ ಕಚೇರಿಯ ಹೊರಗೇ ಗುಂಡು ಹಾರಿಸಿದ್ದಾರೆ" ಎಂದು ಪೋಲಿಸ್ ಅಧಿಕಾರಿ ತಿಳಿಸಿದ್ದಾರೆ.
ಈ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ.
Advertisement