ಆಸ್ಟ್ರೇಲಿಯಾ ಮೂಲನಿವಾಸಿಗಳನ್ನು ಭೇಟಿಮಾಡಿದ ದಲೈಲಾಮ

೧೦ ದಿನಗಳ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ದಲೈಲಾಮ ಉಲುರುನಲ್ಲಿ ಅಲ್ಲಿನ ಮೂಲನಿವಾಸಿಗಳು, ಸಾಂಪ್ರದಾಯಿಕ ಮಾಲಿಕರೊಂದಿಗೆ ಭೇಟಿ ಮಾಡಿ
ಆಧ್ಯಾತ್ಮ ಗುರು ದಲೈಲಾಮ
ಆಧ್ಯಾತ್ಮ ಗುರು ದಲೈಲಾಮ

ಕ್ಯಾನ್ಬೆರ್ರಾ: ೧೦ ದಿನಗಳ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ದಲೈಲಾಮ ಉಲುರುನಲ್ಲಿ ಅಲ್ಲಿನ ಮೂಲನಿವಾಸಿಗಳು, ಸಾಂಪ್ರದಾಯಿಕ ಮಾಲಿಕರೊಂದಿಗೆ ಭೇಟಿ ಮಾಡಿ ಮೂಲನಿವಾಸಿಗಳ ಸಂಸ್ಕೃತಿ ಉಳಿಸಲು ಹೆಚ್ಚಿನ ಕೆಲಸವಾಗಬೇಕಿದೆ ಎಂದಿದ್ದಾರೆ.

ಅಲೈಸ್ ಸ್ಪ್ರಿಂಗ್ಸ್ ನಗರದಿಂದ ೪೫೦ ಕಿಮೀ ದೂರದಲ್ಲಿರುವ ಉತ್ತರ ಪ್ರಾಂತದ ಕೆಂಪು ಕೆಂದ್ರದ ಮರುಭೂಮಿಯ ಉಲುರು ಅಥವಾ ಆಯೆರ್ಸ್ ಕಲ್ಲು ೭೦೦ ವರ್ಷಗಳಷ್ಟು ಪ್ರಾಚೀನವಾದದ್ದು ಮತ್ತು ಮೂಲನಿವಾಸಿಗಳಿಗೆ ಪವಿತ್ರವಾದದ್ದು ಎಂಬ ನಂಬಿಕೆಯಿದೆ.

ಉರುಲುಗೆ ಪ್ರಥಮ ಭೇಟಿ ನೀಡಿರುವ ೭೯ ವರ್ಷದ ದಲೈಲಾಮಾ ಪವಿತ್ರ ಪ್ರದೇಶ ಮತ್ತು ಸಂಸ್ಕೃತಿಯನ್ನು ಗೌರವಿಸಬೇಕು ಎಂದು ಕರೆಕೊಟ್ಟಿದ್ದಾರೆ.

ಪ್ರಾದೇಶಿಕ ಸಂಸ್ಕೃತಿಯ ಸಂಕೀರ್ಣತೆಯನ್ನು ಕಂಡು ಆಶ್ಚರ್ಯಚಕಿತನಾದೆ ಎಂದು ಭಾರತದಲ್ಲಿ ರಾಜಕೀಯ ಆಶ್ರಯ ಪಡೆದಿರುವ ಟಿಬೆಟ್ ಆಧ್ಯಾತ್ಮ ಗುರು ದಲೈಲಾಮ ತಿಳಿಸಿದ್ದು, ಅಪೂರ್ವ ಮೂಲನಿವಾಸಿಗಳ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ರಕ್ಷಿಸಲು ನೆರೆದವರೆಲ್ಲ ಶ್ರಮ ಪಡಬೇಕು ಮತ್ತು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸಾಂಪ್ರದಾಯಿಕ ಜ್ಞಾನವನ್ನು ಉಳಿಸಿಕೊಳ್ಳಬೇಕು ಎಂದಿದ್ದಾರೆ.

ಸಾಂಪ್ರದಾಯಿಕ ಹೆಸರುಗಳನ್ನು ಕೂಡ ಉಳಿಸಿಕೊಳ್ಳುವಂತೆ ಅವರು ಮೂಲನಿವಾಸಿಗಳಲ್ಲಿ ಕೇಳಿಕೊಂಡಿದ್ದಾರೆ.

ಸೋಮವಾರ ಪರ್ತ್ ಗೆ ಭೇಟಿ ನೀಡುವ ಮೂಲಕ ದಲೈಲಾಮ ತಮ್ಮ ಆಸ್ಟ್ರೇಲಿಯಾ ಪ್ರವಾಸವನ್ನು ಮುಗಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com