ಕರಾಚಿಯಲ್ಲಿ ತಾಪಗಾಳಿ: ೨೦೭ ಸಾವು

ಪಾಕಿಸ್ತಾನದ ಬಂದರು ನಗರ ಕರಾಚಿಯಲ್ಲಿ ಉಷ್ಣಹವೆಯಿಂದ ಕಳೆದ ವಾರಾಂತ್ಯ ಕನಿಷ್ಠ ೨೦೭ ಜನ ಮೃತಪಟ್ಟಿದ್ದಾರೆ ಎಂದು ಮಾಧ್ಯಮವೊಂದು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಸ್ಲಮಾಬಾದ್: ಪಾಕಿಸ್ತಾನದ ಬಂದರು ನಗರ ಕರಾಚಿಯಲ್ಲಿ ಉಷ್ಣಹವೆಯಿಂದ ಕಳೆದ ವಾರಾಂತ್ಯ ಕನಿಷ್ಠ ೨೦೭ ಜನ ಮೃತಪಟ್ಟಿದ್ದಾರೆ ಎಂದು ಮಾಧ್ಯಮವೊಂದು ಸೋಮವಾರ ವರದಿ ಮಾಡಿದೆ.

ಸೋಮವಾರ ಏಳು ಜನ ಮೃತಪಟ್ಟಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಶನಿವಾರ ಈ ವರ್ಷ ಕರಾಚಿಯ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದ್ದು, ಉಷ್ಣಮಾಪಕ ೪೫ ಡಿಗ್ರೀ ಸೆಲ್ಷಿಯಸ್ ಗರಿಷ್ಠ ಉಷ್ಣಾಂಶ ದಾಖಲು ಮಾಡಿದೆ ಎಂದು ವರದಿ ಮಾಡಲಾಹಿದೆ.

ಶನಿವಾರ ಸಿಂಧ್, ಜಾಕೋಬಾಬಾದ್, ಲರ್ಕಾನ ಮತ್ತು ಸುಕ್ಕೂರ್ ಜಿಲ್ಲೆಗಳಲ್ಲಿ ಗರಿಷ್ಟ ಉಷ್ಣಾಂಶ ೪೮ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com