ಸಿಬಿಐನಿಂದ ಇಂದು ಮಾರನ್ ವಿಚಾರಣೆ

ಚೆನ್ನೈನ ತಮ್ಮ ಬೋಟ್ ಕ್ಲಬ್ ಮನೆಯಲ್ಲಿ ಬಿ ಎಸ್ ಎನ್ ಎಲ್ ಸಂಸ್ಥೆಯ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡಿರುವ ಹಗರಣದ ತನಿಖೆಗೆ ವಿಚಾರಣೆ ನಡೆಸಲು
ಮಾಜಿ ದೂರಸಂಪರ್ಕ ಖಾತೆ ಸಚಿವ ದಯಾನಿಧಿ ಮಾರನ್
ಮಾಜಿ ದೂರಸಂಪರ್ಕ ಖಾತೆ ಸಚಿವ ದಯಾನಿಧಿ ಮಾರನ್
Updated on

ನವದೆಹಲಿ: ಚೆನ್ನೈನ ತಮ್ಮ ಬೋಟ್ ಕ್ಲಬ್ ಮನೆಯಲ್ಲಿ ಬಿ ಎಸ್ ಎನ್ ಎಲ್ ಸಂಸ್ಥೆಯ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡಿರುವ ಹಗರಣದ ತನಿಖೆಗೆ ವಿಚಾರಣೆ ನಡೆಸಲು ಮಾಜಿ ದೂರಸಂಪರ್ಕ ಖಾತೆ ಸಚಿವ ದಯಾನಿಧಿ ಮಾರನ್ ಅವರಿಗೆ ಸಮನ್ಸ್ ನೀಡಿರುವ ಸಿಬಿಐ, ಬುಧವಾರ ದೆಹಲಿಯಲ್ಲಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಸಿಬಿಐ ನ ವಿಶೇಷ ಕಾರ್ಯ ಪಡೆ ತನಿಖೆ ನಡೆಸುತ್ತಿದ್ದು ಮಾರನ್ ಸಿಬಿಐ ಮುಖ್ಯ ಕೇಂದ್ರವನ್ನು ಬುಧವಾರ ಮಧ್ಯಾಹ್ನ ತಲುಪುವ ಸಾಧ್ಯತೆ ಇದೆ ಎಂದಿದ್ದಾರೆ.

ತಮ್ಮ ಒಡೆತನದ ಸನ್ ಟಿವಿ ಯಲ್ಲಿ ಕಾರ್ಯಕ್ರಮಗಳ ವೇಗದ ಪ್ರಸಾರಕ್ಕಾಗಿ ಬಿ ಎಸ್ ಎನ್ ಎಲ್ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಂಡದ್ದನ್ನು ಹಾಗು ಸರ್ಕಾರಿ ಸ್ವಾಮ್ಯದ ಬಿ ಎಸ್ ಎನ್ ಎಲ್ ಸಂಸ್ಥೆಗ ೪೪೦ ಕೋಟಿ ನಷ್ಟ ತಂದೊಡ್ಡಿದ್ದನ್ನು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಬಯಲಿಗೆಳೆದಿತ್ತು.

ಖ್ಯಾತ ತನಿಖಾ ಪತ್ರಕರ್ತ ಮತ್ತು ಅಂಕಣಕಾರ ಎಸ್ ಗುರುಮೂರ್ತಿ ಈ ಹಗರಣವನ್ನು ಮೊದಲ ಬಾರಿಗೆ ೨೦೧೧ರಲ್ಲಿ ಬಯಲಿಗೆಳೆದಿದ್ದರು. ಸನ್ ಟಿವಿ ಗೆ ಉಪಯೋಗವಾಗುವಂತೆ ಬಿ ಎಸ್ ಎನ್ ಎಲ್ ಪ್ರಧಾನ ನಿರ್ವಾಹಕ ಹೇಗೆ ದಯಾನಿಧಿ ಮಾರನ್ ಅವರಿಗೆ ಸಹಾಯ ಮಾಡಿದ್ದರು ಎಂದು ಎಕ್ಸ್ಪ್ರೆಸ್ ನಲ್ಲಿ ಗುರುಮೂರ್ತಿ ಸರಣಿ ಲೇಖನಗಳನ್ನು ಬರೆದು, ಮಾರನ್ ಅವರ ಹಗರಣಗಳನ್ನು ಬೆತ್ತಲೆ ಮಾಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com