ಭೂ ಸ್ವಾಧೀನ ಕಾಯ್ದೆ ಸುಗ್ರೀವಾಜ್ಞೆ: ತಿದ್ದುಪಡಿಗೆ ಮುಂದಾದ ಎನ್ ಡಿ ಎ ಸರ್ಕಾರ

ಸಿಡಿದೆದ್ದಿರುವ ಮೈತ್ರಿ ಪಕ್ಷಗಳನ್ನು ಹಾಗೂ ಪ್ರತಿಭಟನ ನಿರತ ವಿಪಕ್ಷಗಳನ್ನು ಜೊತೆಗೆ ಕೊಂಡೊಯ್ಯಲು ಬಿಜೆಪಿ ನಾಯಕತ್ವದ ಎನ್ ಡಿ ಎ ಸರ್ಕಾರ, ವಿವಾದಾತ್ಮಕ ಭೂ
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಸಿಡಿದೆದ್ದಿರುವ ಮೈತ್ರಿ ಪಕ್ಷಗಳನ್ನು ಹಾಗೂ ಪ್ರತಿಭಟನ ನಿರತ ವಿಪಕ್ಷಗಳನ್ನು ಜೊತೆಗೆ ಕೊಂಡೊಯ್ಯಲು ಬಿಜೆಪಿ ನಾಯಕತ್ವದ ಎನ್ ಡಿ ಎ ಸರ್ಕಾರ, ವಿವಾದಾತ್ಮಕ ಭೂ ಸ್ವಾಧೀನ ಕಾಯ್ದೆಗೆ ಸೋಮವಾರ ತಿದ್ದುಪಡಿ ತರಲು ಮುಂದಾಗಿದೆ. ನಂತರ ಇದರ ಮಂಜೂರಾತಿಗೆ ಲೋಕಸಭೆಯಲ್ಲಿ ಚರ್ಚೆಗೆ ಎತ್ತಿಕೊಳ್ಳಲಾಗುವುದು. ರೈತರ ಕಳವಳವನ್ನು ಈ ತಿದ್ದುಪಡಿಯಲ್ಲಿ ನಿವಾರಿಸಲಾಗುವುದು ಎನ್ನುತ್ತವೆ ಸರ್ಕಾರದ ಮೂಲಗಳು.

"ಹಿರಿಯ ಸಚಿವರಾದ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ನಿತಿನ್ ಗಡ್ಕರಿ ಮತ್ತು ವೆಂಕಯ್ಯ ನಾಯ್ಡು ಅವರನ್ನು ಇತರ ಪಕ್ಷಗಳ ಬೆಂಬಲ ಪಡೆಯಲು ಕೆಲಸಕ್ಕೆ ಹಚ್ಚಲಾಗಿದೆ. ಈ ನಾಯಕರು ಇತರ ಪಕ್ಷಗಳ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ. ಗುರುವಾರ ಅಮೆರಿಕಾದಿಂದ ಹಿಂದಿರುಗುವ ಜೇಟ್ಲಿ ಈ ಮಸೂದೆ ಬಗ್ಗೆ ಕಾಂಗ್ರೆಸ್ ಪಕ್ಷದ ಜೊತೆ ಬೆಂಬಲಕ್ಕೆ ಮಾತುಕತೆ ನಡೆಸಲಿದ್ದಾರೆ" ಎಂದು ಸರ್ಕಾರದ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ರೈತರ ಕಳವಳಗಳನ್ನು ನಿವಾರಿಸುವ ತಿದ್ದುಪಡಿಯ ನಂತರ ಸಿಟ್ಟು ಮಾಡಿಕೊಂಡಿರುವ ಮೈತ್ರಿ ಪಕ್ಷಗಳಾದ ಶಿವಸೇನೆ ಮತ್ತು ಅಕಾಲಿ ದಳ ಜೊತೆಗೆ ಬರಲಿದ್ದಾರೆ ಎನ್ನಲಾಗಿದೆ. ಆದರೂ ಈ ತಿದ್ದುಪಡಿ ರೈತರ ಜಮೀನನ್ನು ಸುಲಭವಾಗಿ ಸ್ವಾಧೀನಪಡಿಸಿಕೊಳ್ಳಲು ಮಾಡಿರುವ ಕಾಯ್ದೆಯ ಕೇಂದ್ರ ಅಂಶಕ್ಕೆ ಯಾವುದೇ ಬದಲಾವಣೆಯಾಗುವುದಿಲ್ಲ ಎಂಬುದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com