
ವಾಶಿಂಗ್ಟನ್: ತಮ್ಮ ಶಸ್ತ್ರಾಗಾರದಲ್ಲಿ ಪಾಕಿಸ್ತಾನ 120 ಅಣ್ವಸ್ತ್ರಗಳನ್ನು ಕಳೆದ ವರ್ಷ ಹೊಂದಿತ್ತು ಅದು ಭಾರತಕ್ಕಿಂತಲೂ 10 ಹೆಚ್ಚು ಎಂದು ಅಣು ವಿಜ್ಞಾನದ ಪತ್ರಿಕೆಯೊಂದು ನಡೆಸಿದ ಹೊಸ ಇನ್ಫೋಗ್ರಾಫಿಕ್ ಅಧ್ಯಯನವೊಂದು ತಿಳಿಸಿದೆ.
ಮೊದಲ ಅಣ್ವಸ್ತ್ರ ಬಾಂಬ್ ತಯಾರಿಸಿದ ಶಿಕಾಗೋ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ರಚಿಸಿದ್ದ ಈ ಇನ್ಫೋಗ್ರಾಫಿಕ್ ತಂತ್ರಜ್ಞಾನದಲ್ಲಿ ಅಣ್ವಸ್ತ ಶಸ್ತ್ರಾಗಾರಗಳ ಇತಿಹಾಸ ಮತ್ತು ಸಂಖ್ಯೆಯನ್ನು ಕಂಡುಹಿಡಿಯುಬಹುದು.
೧೯೮೦ ರಲ್ಲಿ ೬೫೦೦೦ ಅಣ್ವಸ್ತ್ರಗಳಿದ್ದ ಸಮಯದಿಂದ ಈಗ ೧೦೦೦೦ ಅಣ್ವಸ್ತ ಶಸ್ತ್ರಾಸ್ತಗಳಿಗೆ ಇಳಿದಿದೆ ಆದರೆ ಹೆಚ್ಚು ದೇಶಗಳು ಇವುಗಳನ್ನು ಹೊಂದಿವೆ ಎನ್ನುತ್ತದೆ ಅಧ್ಯಯನ.
ಈ ಇನ್ಫೋಗ್ರಾಫಿಕ್ ನ ಪ್ರಕಾರ ಅಮೇರಿಕಾ ಮತ್ತು ರಷಿಯಾ ಇಬ್ಬರೂ ೫೦೦೦ ಅಣ್ವಸ್ತ್ರಗಳನ್ನು ಪ್ರತ್ಯೇಕವಾಗಿ ಹೊಂದಿವೆ. ಫ್ರಾನ್ಸ್ 300, ಚೈನಾ ೨೫೦, ಇಂಗ್ಲೆಂಡ್ ೨೨೫ ಮತ್ತು ಇಸ್ರೇಲ್ ೮೦ ಅಣ್ವಸ್ತ್ರ ಸಾಧನಗಳನ್ನು ಹೊಂದಿರುವ ದೇಶಗಳು.
Advertisement