ಮುಸ್ಲಿಮರ ಒಳಿತಿಗಾಗಿ ಅಜಮ್ ಖಾನ್ ಕಾಣಿಕೆ ಶೂನ್ಯ: ಸಯ್ಯದ್ ಅಹ್ಮದ್ ಬುಖಾರಿ

ಸಮಾಜವಾದಿ ಪಕ್ಷ ಅಧಿಕಾರದಲ್ಲಿರುವ ಕಳೆದ ಮೂರು ವರ್ಷಗಳಲ್ಲಿ ಉತ್ತರಪ್ರದೇಶದ ಮಂತ್ರಿ ಅಜಮ್ ಖಾನ್ ಮುಸ್ಲಿಮರ
ಅಜಮ್ ಖಾನ್
ಅಜಮ್ ಖಾನ್
Updated on

ಲಕನೌ: ಸಮಾಜವಾದಿ ಪಕ್ಷ ಅಧಿಕಾರದಲ್ಲಿರುವ ಕಳೆದ ಮೂರು ವರ್ಷಗಳಲ್ಲಿ ಉತ್ತರಪ್ರದೇಶದ ಮಂತ್ರಿ ಅಜಮ್ ಖಾನ್ ಮುಸ್ಲಿಮರ ಒಳಿತಿಗಾಗಿ ಏನೇನು ಮಾಡಿಲ್ಲ ಎಂದು ಜಾಮಾ ಮಸೀದಿಯ ಶಾಹಿ ಇಮಾಮ್ ಮೌಲಾನ ಸಯ್ಯದ ಅಹ್ಮದ್ ಬುಖಾರಿ ಬುಧವಾರ ಹರಿಹಾಯ್ದಿದ್ದಾರೆ.

"ಅಜಮ್ ಖಾನ್ ಮುಸ್ಲಿಮರ ಒಳಿತಿಗಾಗಿ ಏನೇನು ಮಾಡಿಲ್ಲ" ಎಂದು ಗೋರಕಪುರಕ್ಕೆ ತೆರಳುತ್ತಿದ್ದ ಸಮಯದಲ್ಲಿ ವರದಿಗಾರರಿಗೆ ಬುಖಾರಿ ತಿಳಿಸಿದ್ದಾರೆ. ಅಜಮ್ ಹೆಸರಿನಲ್ಲಿ ಮಾತ್ರ ಮುಸ್ಲಿಂ ಮಂತ್ರಿ ಎಂದಿರುವ ಅವರು, ತಮ್ಮ ಕೆಳಗಿನ ಅಧಿಕಾರಿಗಳಿಗೆ ತೊಂದರೆ ಕೊಡುವುದನ್ನು ಬಿಟ್ಟು ಬೇರೆ ಯಾವ ಒಳ್ಳೆಯ ಕೆಲಸವನ್ನು ಮಾಡಿಲ್ಲ ಅವರು ಎಂದಿದ್ದಾರೆ. "ಆದುದರಿಂದಲೇ ಯಾವ ಅಧಿಕಾರಿಯೂ ಅವರ ಜೊತೆ ಕೆಲಸ ಮಾಡಲು ಇಷ್ಟ ಪಡುವುದಿಲ್ಲ" ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com