ಮೇಕೆದಾಟು ಅಣೆಕಟ್ಟು ನಿರ್ಮಾಣ ಮಾಡುವ ಯತ್ನಕ್ಕೆ ತಮಿಳುನಾಡು 'ಅಡ್ಡಿ'

ಕಾವೇರಿ ನದಿ
ಕಾವೇರಿ ನದಿ

ಚೆನ್ನೈ: ಮೇಕೆದಾಟು ಮೇಲ್ಭಾಗದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಚೆಕ್-ಡ್ಯಾಮ್ ನಿರ್ಮಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಯತ್ನಕ್ಕೆ ತಮಿಳುನಾಡು ಸರ್ಕಾರ ಈಗ ಅಡ್ಡಗಾಲು ಹಾಕುತ್ತಿದೆ.

ಕಾನೂನು ಹೋರಾಟ ಸೇರಿದಂತೆ ಮೇಕೆದಾಟು ಣೆಕಟ್ಟು ನಿರ್ಮಾಣ ತಡೆಯಲು ಬೇಕಾದ ಎಲ್ಲಾ ರೀತಿಯ ಕ್ರಮಗಳನ್ನು ತಮಿಳುನಾಡು ಸರ್ಕಾರ ತೆಗೆದುಕೊಂಡಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಓ ಪನ್ನೀರ್‌ಸೇಲ್ವಂ ಅವರು ಬುಧವಾರ ಹೇಳಿದ್ದಾರೆ.

ಕಾನೂನು ಬಾಹಿರವಾಗಿ ಮೇಕೆದಾಟು ಚೆಕ್-ಡ್ಯಾಮ್ ನಿರ್ಮಾಣಕ್ಕೆ ಮುಂದಾಗಿರುವ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ತಡೆ ಕೋರಿ ನಮ್ಮ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ ಎಂದು ತಮಿನಾಡು ಸಿಎಂ ಹೇಳಿದರು.

'ಕಾನೂನು ಹೋರಾಟ ಸೇರಿದಂತೆ ಮೇಕೆದಾಟು ಣೆಕಟ್ಟು ನಿರ್ಮಾಣ ತಡೆಯಲು ಬೇಕಾದ ಎಲ್ಲಾ ರೀತಿಯ ಕ್ರಮಗಳನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ' ಎಂದು ಪನ್ನೀರ್‌ಸೇಲ್ವಂ ಅವರು ತಮ್ಮ 2015-16ನೇ ಸಾಲಿನ ಬಜೆಟ್‌ನಲ್ಲಿ ತಿಳಿಸಿದ್ದಾರೆ.

ಈ ಮಧ್ಯೆ ಕರ್ನಾಟಕ ಸರ್ಕಾರ ಸಹ ತನ್ನ ಬಜೆಟ್‌ನಲ್ಲಿ ಮೇಕೆದಾಟು ಣೆಕಟ್ಟು ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವುದಕ್ಕಾಗಿ 25 ಕೋಟಿ ರುಪಾಯಿ ಮೀಸಲಿರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com