
ಮೋತಿಹರಿ: ಬಿಹಾರ ಪೂರ್ವದ ಚಂಪರನ್ ಜಿಲ್ಲೆಯ ಗ್ರಾಮದ ಮುಖಂಡನನ್ನು ಹೆಂಡ, ಶಸ್ತ್ರಾಸ್ತ್ರ ಗಳ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ, ಅವನಲ್ಲಿದ್ದ ೧೫೦ ಬ್ಯಾಂಕ್ ಪಾಸ್ಬುಕ್ ಗಳನ್ನು ವಶಪಡಿಸಿಕೊಂಡು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಜಾನೆ ನಡೆದ ಪೊಲೀಸ್ ದಾಳಿಯಲ್ಲಿ ಪೊಲೀಸರು ಶಂಕರ್ ಸರಿಯಾ (ಉತ್ತರ) ಪಂಚಾಯತ್ ನ ಮುಖ್ಯಸ್ಥನನ್ನು ಬಂಧಿಸಿ, ಬಂದೂಕು, ರಿವಾಲ್ವಾರ್, ೨೫ ಕಾಟ್ರಿಡ್ಜ್ ಗಳು, ೧.೮೫ ಲಕ್ಷ ನಗದು ಹಾಗು ವಿವಿಧ ಬ್ಯಾಂಕುಗಳ ೧೫೦ ಪಾಸ್ಬುಕ್ಕುಗಳನ್ನು ವಶಪಡಿಸಿಕೊಂಡಿದ್ದಾರೆ.
ಅಲ್ಲದೆ ೫೦ ಎ ಟಿ ಎಂ ಕಾರ್ಡುಗಳು, ೨೫೦ ಸಹಿ ಮಾಡಿದ ಚೆಕ್ಕುಗಳು, ಹೆಂಡ ತುಂಬಿದ ದೊಡ್ಡ ಹಂಡೆಯನ್ನು ಕೂಡ, ಕೃಷ್ಣ ಪ್ರಸಾದ್ ಎಂದು ಗುರುತಿಸಲಾಗಿರುವ ಗ್ರಾಮ ಮುಖಂಡನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೂರ್ವ ಚಂಪರನ್ ನ ಸೂಪರಿಂಟೆಂಡೆಂಟ್ ಪೊಲೀಸ್ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದ ಎಂದು ದೂರು ಬಂದ ಹಿನ್ನಲೆಯಲ್ಲಿ ಈ ದಾಳಿ ನಡೆಸಿದ್ದೇವೆ ಎಂದು ಸುನಿಲ್ ಕುಮಾರ್ ತಿಳಿಸಿದ್ದಾರೆ.
Advertisement