
ಬೀಜಿಂಗ್: ಚೈನಾ ಪ್ರೀಮಿಯರ್ ಲಿ ಕಿಕ್ವ್ಯಾಂಗ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಕ್ಲಿಕ್ಕಿಸಿದ ಸೆಲ್ಫಿ ವಿಶ್ವದ ಅತಿ ಜನಪ್ರಿಯ ಸೆಲ್ಫಿ ಎಂದು ಪಶ್ಚಿಮ ದೇಶಗಳ ಮಾಧ್ಯಮಗಳು ಬಣ್ಣಿಸಿವೆ. ಈ ಸೆಲ್ಫಿ ಚೈನಾ ಸಾಮಾಜಿಕ ಜಾಲತಾಣ ವಿಯಿಬೋದಲ್ಲಿ ೩೧.೮ ದಶಲಕ್ಷ ಜನ ನೋಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಜನಪ್ರಿಯ ವಿಶ್ವನಾಯಕರಲ್ಲಿ ಒಬ್ಬರಾದ ಮೋದಿ ಅವರಿಗೆ ಟ್ವಿಟ್ಟರ್ ಒಂದರಲ್ಲೇ ೧೨.೩ ಮಿಲಿಯನ್ ಅನುಯಾಯಿಗಳಿದ್ದಾರೆ. ತಮ್ಮ ಚೈನಾ ಪ್ರವಾಸಕ್ಕೂ ಮುಂಚೆ ಚೈನಾದ ಅಂತರ್ಜಾಲ ಸಾಮಾಜಿಕ ಜಾಲತಾಣಕ್ಕೆ ಮೋದಿ ಪಾದಾರ್ಪಣೆ ಮಾಡಿದ್ದರು.
ವಿಯಿಬೋದಲ್ಲಿ ಮೋದಿ ಅವರ ಬೆಂಬಲಿಗರ ಸಂಖ್ಯೆ ೧.೬೫ ಲಕ್ಷಕ್ಕೂ ಹೆಚ್ಚಾಗಿದೆ ಎಂದು ಭಾರತೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯೋಗ-ತೈ ಚಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಲಿ ಅವರೊಂದಿಗೆ ತೆಗೆದಿದ್ದ ಈ ಸೆಲ್ಫಿಯನ್ನು ವಿಯಿಬೋ ಜಾಲತಾಣದಲ್ಲಿ ಪ್ರಕಟಿಸಿದ ಮೇಲೆ ಇದು ೩೧.೮೫ ದಶಲಕ್ಷ ಹಿಟ್ ಪಡೆದಿದೆ ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬಟ್ ಅವರೊಂದಿಗೂ ಮೋದಿ ಸೆಲ್ಫಿ ಕ್ಲಿಕ್ ಮಾಡಿದ್ದರು.
Advertisement