ಸಲಿಂಗ ಮದುವೆ: ಜನಾಭಿಮತ ಸಂಗ್ರಹಕ್ಕೆ ಆಸ್ಟ್ರೇಲಿಯಾ ಪ್ರಧಾನಿ ನಕಾರ

ಐರ್ಲ್ಯಾಂಡಿನಲ್ಲಿ ಅಪಾರ ಜನಾಭಿಮತದಿಂದ ಸಲಿಂಗ ಮದುವೆಗೆ ಕಾನೂನುಮಾನ್ಯತೆ ಸಿಕ್ಕ ಮೇಲೆ ಆಸ್ಟ್ರೇಲಿಯಾದಲ್ಲೂ ಇಂತಹುದೇ ನೇರ ಜನ ಮತದಾನ
ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬಟ್
ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬಟ್

ಕ್ಯಾನ್ಬೆರ್ರಾ: ಐರ್ಲ್ಯಾಂಡಿನಲ್ಲಿ ಅಪಾರ ಜನಾಭಿಮತದಿಂದ ಸಲಿಂಗ ಮದುವೆಗೆ ಕಾನೂನುಮಾನ್ಯತೆ ಸಿಕ್ಕ ಮೇಲೆ ಆಸ್ಟ್ರೇಲಿಯಾದಲ್ಲೂ ಇಂತಹುದೇ ನೇರ ಜನ ಮತದಾನ ನಡೆಸುವ ಒತ್ತಡವಿದ್ದು ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬಟ್ ಈ ಯೋಜನೆಯನ್ನು ತಿರಸ್ಕರಿಸಿದ್ದಾರೆ.

"ಸಂವಿಧಾನವನ್ನು ಬದಲಾಯಿಸುವಾಗ ಮಾತ್ರ ಈ ದೇಶದಲ್ಲಿ ಜನಾಭಿಮತ ಸಂಗ್ರಹಿಸಲಾಗುತ್ತದೆ. ಈ ವಿಷಯದಲ್ಲಿ ಸಂವಿಧಾನ ಬದಲಾಯಿಸಲು ಯಾರೂ ಸಲಹೆ ನೀಡಿಲ್ಲ ಎಂದುಕೊಳ್ಳುತ್ತೇನೆ" ಎಂದು ಟೋನಿ ಅಬಟ್ ತಿಳಿಸಿದ್ದಾರೆ.

ಅಸ್ಟ್ರೇಲಿಯಾದ ಸೆನೆಟರ್ ಜೆಡ್ ಸೇಸೆಲ್ಜಾ ಆವರು ತಾವು ಸಲಿಂಗ ಮದುವೆಗೆ ಬೆಂಬಲ ನೀಡುವುದಿಲ್ಲವಾದರೂ, ಜನಾಭಿಮತ ಸಂಗ್ರಹಿಸುವ ಅವಶ್ಯಕತೆ ಇದೆ ಎಂದು ಹೇಳಿದ್ದರು.

ಐರ್ಲ್ಯಾಂಡಿನ ೪೩ ಕ್ಷೇತ್ರಗಳಲ್ಲಿ ಸುಮಾರು ೧.೨ ದಶಲಕ್ಷ ಜನ ಸಲಿಂಗ ಮದುವೆಯ ಪರವಾಗಿ ಮತ ನೀಡಿದ್ದಕ್ಕೆ ಅಲ್ಲಿ ಕಾನೂನು ಮ್ಮನ್ಯತೆ ಪಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com