ಲಾಟರಿ ಹಗರಣ: ಸಿಐಡಿ ಅಧಿಕಾರಿಗಳಿಂದ ಅಲೋಕ್ ಕುಮಾರ್ ವಿಚಾರಣೆ

ಒಂದಂಕಿ ಲಾಟರಿ ಹಗರಣದಲ್ಲಿ ಭಾಗಿಯಾದ ಆರೋಪದ ಮೇಲೆ ನಿನ್ನೆಯಷ್ಟೇ ಅಮಾನತುಗೊಂಡ ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ...
ಅಲೋಕ್ ಕುಮಾರ್
ಅಲೋಕ್ ಕುಮಾರ್

ಬೆಂಗಳೂರು: ಒಂದಂಕಿ ಲಾಟರಿ ಹಗರಣದಲ್ಲಿ ಭಾಗಿಯಾದ ಆರೋಪದ ಮೇಲೆ ನಿನ್ನೆಯಷ್ಟೇ ಅಮಾನತುಗೊಂಡ ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ರನ್ನು ಸಿಐಡಿ ಅಧಿಕಾರಿಗಳು ಭಾನುವಾರ ವಿಚಾರಣೆಗೊಳಪಡಿಸಿದರು.

ಪ್ರಕರಣ ಸಂಬಂಧ ಈ ಹಿಂದೆಯೇ ಅಮಾನತುಗೊಂಡಿದ್ದ ಅಬಕಾರಿ ಮತ್ತು ಲಾಟರಿ ವಿಚಕ್ಷಣ ದಳದ ಎಸ್‌ಪಿ ಧರಣೇಶ್ ಅವರನ್ನು ಕೂಡ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದರು. ಬೆಳಗ್ಗೆ 11 ಗಂಟೆಗೆ ಸಿಐಡಿ ಕಚೇರಿಗೆ ಬಂದ ಅಲೋಕ್‌ಕುಮಾರ್ ಹಾಗೂ ಧರಣೇಶ್ ಅವರನ್ನು ಸತತ 6 ಗಂಟೆಗಳ ಕಾಲ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಅಕ್ರಮ ಲಾಟರಿ ದಂಧೆ ಆರೋಪಿ ಪಾರಿರಾಜನ್ ಜತೆ ಸಂಪರ್ಕ ಹೊಂದಿದ ಆರೋಪದ ಮೇಲೆ ಅಲೋಕ್‌ಕುಮಾರ್ ಅವರನ್ನು ನಿನ್ನೆ ಸರ್ಕಾರ ಅಮಾನತು ಮಾಡಿ ಆದೇಶ ಹೊರಡಿಸಿತ್ತು. ಪಾರಿ ಜತೆ ಅಲೋಕ್‌ಕುಮಾರ್ ಅವರು ತಮ್ಮ ಮೊಬೈಲ್ ದೂರವಾಣಿ ಹಾಗೂ ಕಚೇರಿ ದೂರವಾಣಿಯಿಂದ ಕರೆ ಮಾಡಿರುವುದು ಸಿಐಡಿ ತನಿಖೆ ವೇಳೆ ಬೆಳಕಿಗೆ ಬಂದಿದ್ದ ಹಿನ್ನೆಲೆ ಮತ್ತು ಅಲೋಕ್‌ಕುಮಾರ್ ಅವರೇ ಸ್ವತಃ ಪಾರಿರಾಜನ್ ಅವರು ನನ್ನ ಹಿತೈಷಿ ಎಂದು ಹೇಳಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದ ಸಿಐಡಿ ಅಧಿಕಾರಿಗಳು ಅಲೋಕ್‌ಕುಮಾರ್ ಅವರನ್ನು ತೀವ್ರ ವಿಚಾರಣೆ ನಡೆಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com