
ಲಂಡನ್: 3 ದಿನಗಳ ಬ್ರಿಟನ್ ಪ್ರವಾಸದಲ್ಲಿರುವ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಇಂಗ್ಲೆಂಡ್ ಪ್ರಧಾನಿ ಡೇವಿಡ್ ಕೆಮರೂನ್ ಅವರು, ಬರೊಬ್ಬರಿ 9 ಬಿಲಿಯನ್ ವಾಣಿಜ್ಯಾತ್ಮಕ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ಮೂಲಗಳ ಪ್ರಕಾರ ಉಭಯ ದೇಶಗಳ ನಾಯಕರು ನಾಗರಿಕ ಪರಮಾಣು ಒಪ್ಪಂದ, ಮಿಲಿಟರಿ ತಂತ್ರಜ್ಞಾನದಲ್ಲಿ ಸಹಭಾಗಿತ್ವ ಮತ್ತು ಸೈಬರ್ ಭದ್ರತೆ ಕುರಿತಂತೆ ವಿವಿಧ ಕ್ಷೇತ್ರಗಳಲ್ಲಿ ಒಟ್ಟು 9 ಬಿಲಿಯನ್ ಪೌಂಡ್ಸ್ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಇದಲ್ಲದೆ ರೈಲ್ವೇ ರುಪಾಯಿ ಬಾಂಡ್ ಪ್ರಾರಂಭಿಸುವ ಕುರಿತು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಉಭಯ ದೇಶಗಳ ನಡುವಿನ ಈ ಒಪ್ಪಂದವನ್ನು ಇಂಗ್ಲೆಂಡ್ ಪ್ರಧಾನಿ ಡೇವಿಡ್ ಕೆಮರೂನ್ ಅವರು, ಹೊಸ ಕ್ರಿಯಾತ್ಮಕ ಆಧುನಿಕ ಪಾಲುದಾರಿಕೆ ಎಂದು ಬಣ್ಣಿಸಿದ್ದಾರೆ.
ಇದೇ ವೇಳೆ ಇಂಗ್ಲೆಂಡ್ ಭಾರತದಲ್ಲಿ ಹೂಡುವ ಎಫ್ ಡಿಐ ಪ್ರಮಾಣವನ್ನು 8.5ಕ್ಕೇ ಏರಿಕೆ ಮಾಡಿದ್ದು, ಇಂಡೋ-ಯುಕೆ ನಡುವಿನ ಈ ನೂತನ ಒಪ್ಪಂದದಿಂದಾಗಿ ಭಾರತದಲ್ಲಿ ಒಟ್ಟು 1 ಲಕ್ಷದ 10 ಸಾವಿರ ಮಂದಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ತಿಳಿದುಬಂದಿದೆ. ಇನ್ನು ಇಂಗ್ಲೆಂಡ್ ನ ಹೆಚ್ ಎಸ್ ಬಿಸಿ ಬ್ಯಾಂಕ್ ಭಾರತದಲ್ಲಿ 10 ಮಿಲಿಯನ್ ಪೌಂಡ್ ವೆಚ್ಚದಲ್ಲಿ ಸ್ಕಿಲ್ ಫಾರ್ ಇಂಡಿಯಾ ಎಂಬ ನೂತನ ಕಾರ್ಯಕ್ರಮ ಆಯೋಜನೆ ಮಾಡಲಿದ್ದು, ಈ ನೂತನ ಕಾರ್ಯಕ್ರಮದಿಂದಾಗಿ ಭಾರತದಲ್ಲಿರುವ ಸುಮಾರು 75 ಸಾವಿರ ಅಂಗವಿಕಲ ಯುವಕರಿಗೆ ಮತ್ತು 5 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಕೌಶಲ್ಯ ತರಬೇತಿ ನೀಡಲಾಗುತ್ತದೆ.
ಇದಲ್ಲದೆ ವಿಮಾ ಯೋಜನೆಯಲ್ಲಿ ಇಂಗ್ಲೆಂಡ್ ನ ಸಹ ಭಾಗಿತ್ವ ಮುಂದುವರೆಯಲಿದ್ದು, ಮಿಮೆ ಮೇಲಿರುವ ಎಫ್ ಡಿಐ ಪ್ರಮಾಣವನ್ನು ಯುಕೆ ಸರ್ಕಾರ ಏರಿಕೆ ಮಾಡಿದೆ. ಇನ್ನು ಪೆಂಷನ್ ವಿಭಾದಲ್ಲಿನ ಎಫ್ ಡಿಐ ಅನ್ನು ಶೇ.49ಕ್ಕೇ ಏರಿಕೆ ಮಾಡಲಾಗಿದೆ.
Advertisement