
ಬೆಂಗಳೂರು: ಬೆಳಗ್ಗೆಯಿಂದಲೇ ಶುರುವಾದ ತುಂತುರು ಮಳೆಯಿಂದಾಗಿ ಭಾನುವಾರ ನಗರದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ರಜೆ ಇದ್ದುದರಿಂದ ಸಂಚಾರ ದಟ್ಟಣೆ
ಆಗಲಿಲ್ಲ. ಆದರೆ, ರಜೆಯ ಮೋಜು ಸವಿಯಲು ಮಳೆ ಬಿಡಲಿಲ್ಲ. ತಮ್ಮ ವ್ಯಾಪಾರಕ್ಕೆ ಮಳೆ ಅಡ್ಡಿಯಾಯಿತು ಎಂದು ವ್ಯಾಪಾರಿಗಳೂ ಗೊಣಗುವಂತಾಯಿತು.
ಹಾಗೆ ನೋಡಿದರೆ ಭಾನುವಾರ ನಗರದಲ್ಲಿ ಸುರಿದಿದ್ದು ಕೇವಲ 5 ಮಿ.ಮೀ. ಮಳೆ ಮಾತ್ರ. ಆದರೆ, ಚಳಿಯ ಪ್ರಮಾಣ ಹೆಚ್ಚಿತ್ತು. ಮೋಡ ಕವಿದುಕೊಂಡಿದ್ದರಿಂದ ಮಂಕು ವಾತಾವರಣ ತುಂಬಿಕೊಂಡಿತ್ತು. ಬಂಗಾಳಕೊಲ್ಲಿಯ ವಾಯುಭಾರ ಕುಸಿತ ಪ್ರಭಾವ ನಗರವನ್ನು ಇನ್ನೂ ಮೂರು ದಿನಗಳ ಕಾಲ ಕಾಡಲಿದ್ದು, ಸೋಮವಾರ ಜೋರು ಮಳೆ ಬರುವ ಸಾಧ್ಯತೆಯಿದೆ.
ದಿಢೀರ್ ಬದಲಾದ ವಾತಾವರಣದಿಂದಾಗಿ ನಗರದಲ್ಲಿ ನೆಗಡಿ, ಕೆಮ್ಮು ಹೆಚ್ಚಿದ್ದು, ವಾತಾವರಣ ಹೀಗೆ ಮುಂದುವರಿದರೆ, ಶೀತಬಾಧೆಗೆ ಸಿಲುಕುವವರ ಸಂಖ್ಯೆ ಹೆಚ್ಚಲಿದೆ ಎನ್ನುತ್ತಾರೆ ತಜ್ಞರು.
Advertisement