ಮೋದಿ ಸರ್ಕಾರ ಬ್ರಾಹ್ಮಣವಾದ ಪ್ರಚಾರ ಮಾಡುತ್ತಿದೆ: ಆರುಂಧತಿ ರಾಯ್

ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಹಿಂದೂ ರಾಷ್ಟ್ರ ನಿರ್ಮಾಣದ ಹೆಸರಲ್ಲಿ ಬ್ರಾಹ್ಮಣವಾದವನ್ನು ಪ್ರಚಾರ ಮಾಡುತ್ತಿದೆ ಎಂದು ಖ್ಯಾತ ಲೇಖಕಿ ಆರುಂಧತಿ...
ಆರುಂಧತಿ ರಾಯ್
ಆರುಂಧತಿ ರಾಯ್
Updated on

ಪುಣೆ: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಹಿಂದೂ ರಾಷ್ಟ್ರ ನಿರ್ಮಾಣದ ಹೆಸರಲ್ಲಿ ಬ್ರಾಹ್ಮಣವಾದವನ್ನು ಪ್ರಚಾರ ಮಾಡುತ್ತಿದೆ ಎಂದು ಖ್ಯಾತ ಲೇಖಕಿ ಆರುಂಧತಿ ರಾಯ್ ಆರೋಪಿಸಿದ್ದಾರೆ.

ಇಂದು ಪುಣೆಯಲ್ಲಿ ಸಾಮಾಜಿಕ ಹರಿಕಾರ ಮಹಾತ್ಮ ಜ್ಯೋತಿಬಾ ಫುಲೆ ಅವರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಯ್, ಬಲಪಂಥೀಯ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸುವ ಮೂಲಕ ಅಸಹಿಷ್ಣುತೆ ಹೆಸರಲ್ಲಿ ಯಾರನ್ನ ಬೇಕಾದರೂ ದೇಶ ವಿರೋಧಿಗಳೆಂದು ಬಿಂಬಿಸಲು ಹೊರಟಿದ್ದಾರೆ ಎಂದರು.

ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ, ಸದ್ಯ ದೇಶದಲ್ಲಿ ನೆಲೆಸಿರುವ ಅಲ್ಪಸಂಖ್ಯಾತರು ಭಯದಲ್ಲಿ ಬದುಕುತ್ತಿದ್ದು, ಕೇಂದ್ರ ಸರ್ಕಾರ ಹಿಂದೂತ್ವದ ಹೆಸರಿನಲ್ಲಿ ಬ್ರಾಹ್ಮಣವಾದವನ್ನು ಪ್ರಚಾರ ಮಾಡುತ್ತಿದೆ ಎಂದು ದೂರಿದರು.

ಈ ವೇಳೆ ಸ್ಥಳದಲ್ಲಿದ್ದ ಬಿಜೆಪಿ ವಿದ್ಯಾರ್ಥಿ ಘಟಕ ಹಾಗೂ ಎಬಿವಿಪಿ ಕಾರ್ಯಕರ್ತರು ರಾಯ್ ಹೇಳಿಕೆಯನ್ನು ಖಂಡಿಸಿ ತೀವ್ರವಾಗಿ ಪ್ರತಿಭಟನೆ ನಡೆಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com