ಸರಣಿ ಸಾವು, ಮಾಹಿತಿ ಕೇಳಿದ ರಾಜ್ಯ ಸರ್ಕಾರ

ವಿಜಯನಗರ ವೈದ್ಯಕೀಯ ಶಿಕ್ಷಣ ಸಂಸ್ಥೆ (ವಿಮ್ಸ್)ಯಲ್ಲಿ ತಿಂಗಳೊಳಗೆ 41 ಮಕ್ಕಳ ಸಾವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಈ ಕುರಿತು ಅಧೀಕ್ಷಕರಿಂದ ವರದಿ ಕೇಳಿದೆ. ವೈದ್ಯಕೀಯ ಇಲಾಖೆ ಹಿರಿಯ ಅಧಿಕಾರಿಗಳು, ಸಚಿವರಿಗೆ ಮಾಹಿತಿಯನ್ನು ಈಗಾಗಲೇ ಕಳುಹಿಸಿಕೊಡಲಾಗಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬಳ್ಳಾರಿ: ವಿಜಯನಗರ ವೈದ್ಯಕೀಯ ಶಿಕ್ಷಣ ಸಂಸ್ಥೆ (ವಿಮ್ಸ್)ಯಲ್ಲಿ ತಿಂಗಳೊಳಗೆ 41 ಮಕ್ಕಳ ಸಾವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಈ ಕುರಿತು ಅಧೀಕ್ಷಕರಿಂದ ವರದಿ ಕೇಳಿದೆ. ವೈದ್ಯಕೀಯ ಇಲಾಖೆ ಹಿರಿಯ ಅಧಿಕಾರಿಗಳು, ಸಚಿವರಿಗೆ ಮಾಹಿತಿಯನ್ನು ಈಗಾಗಲೇ ಕಳುಹಿಸಿಕೊಡಲಾಗಿದೆ ಎಂದು ವಿಮ್ಸ್ ಅಧೀಕ್ಷಕ ಡಾ. ಡಿ. ಶ್ರೀನಿವಾಸಲು ಹೇಳಿದ್ದಾರೆ.

ಯುನಿಸೆಫ್ ಹಾಗೂ ರಾಷ್ಟ್ರೀಯ ಗ್ರಾಮೀಣ ಹೆಲ್ತ್ ಮಿಷನ್ (ಎನ್ ಆರ್‍ಎಚ್‍ಎಂ)ಗೂ ಅವರು ಕೇಳಿದ ಮಾಹಿತಿ ಕೊಡಲಾಗಿದೆ ಎಂದು ಶ್ರೀನಿವಾಸಲು ತಿಳಿಸಿದ್ದಾರೆ.

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳ ಸಾವಿನ ಸರಾಸರಿ ಪ್ರಮಾಣಕ್ಕೆ ಹೋಲಿಸಿದರೆ, ವಿಮ್ಸ್ ನಲ್ಲಿ ನಾನಾ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಸಾವಿನ ಸಂಖ್ಯೆ ಕಡಿಮೆ ಇದೆ ಎಂಬ ವಾದವನ್ನು ಪುನರುಚ್ಚರಿಸಿರುವ ಶ್ರೀನಿವಾಸಲು, ರಾಜ್ಯದಲ್ಲಿ ಶೇ. 28ರಷ್ಟು ಮಕ್ಕಳು ಮೃತಪಟ್ಟರೆ, ವಿಮ್ಸ್ ನಲ್ಲಿ ಆ ಪ್ರಮಾಣ ಕೇವಲ ಶೇ. 17.5ರಷ್ಟು ಮಾತ್ರ. ಈ  ವಾಸ್ತವಾಂಶವನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟಿರುವ ವರದಿಯಲ್ಲೂ ಉಲ್ಲೇಖಿಸಲಾಗಿದೆ ಎಂದಿದ್ದಾರೆ.

ಕೇಸ್‍ಶೀಟ್‍ನಲ್ಲಿ ನಾನಾ ಕಾರಣ:
ಮಕ್ಕಳ ಸಾವಿಗೆ ಸಂಬಂಧಿಸಿ ಕೇಸ್ ಶೀಟ್‍ನಲ್ಲಿ ಮಾಹಿತಿ ಇದ್ದರೂ 9 ತಿಂಗಳು ತುಂಬುವ ಮೊದಲೇ ಹುಟ್ಟಿದ್ದು, ನಿರ್ದಿಷ್ಟ ತೂಕದ ಕೊರತೆ, ಹೊರಗಡೆ ಹೆರಿಗೆಯಾದಾಗ ನಿರ್ದಿಷ್ಟ ಮುನ್ಸೂಚನೆ ತೆಗೆದುಕೊಳ್ಳದಿರುವುದು, ಉಸಿರಾಟ ತೊಂದರೆ, ಕಾಯಿಲೆಯಿಂದ ಬಳಲುತ್ತಿದ್ದ ಮಗು ವಿಮï್ಸಗೆ ದಾಖಲಾಗಿ, ಚಿಕಿತ್ಸೆ ಫಲಿಸದಿರುವುದು ಇವೇ ಮುಂತಾದ ಕಾರಣಗಳನ್ನು ನೀಡಲಾಗಿದೆ

ಔಷಧಕ್ಕಾಗಿ ಚೀಟಿ ಕೊಡುತ್ತಾರೆ!

ಯಾವುದೇ ಔಷಧ ಕೊರತೆ ಇಲ್ಲ ಎಂದು ಸರ್ಕಾರ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಹೇಳುತ್ತಾರಾದರೂ ವಿಮ್ಸ್ ನಲ್ಲಿ ಬಡ ರೋಗಿಗಳು ಖಾಸಗಿ ಔಷಧ ಅಂಗಡಿಗಳಿಂದ ಔಷಧ ಖರೀದಿಸುವುದು ತಪ್ಪಿಲ್ಲ. ಪ್ರತಿಯೊಂದಕ್ಕೂ ಹೊರಗೆ ಚೀಟಿ ಬರೆದುಕೊಡುತ್ತಾರೆ. ಮಗುವಿನ ಜೀವ ಉಳಿದರೆ ಸಾಕು ಎಂದು ಔಷಧ ತರುತ್ತೇವೆ. ನಮ್ಮ ಪರಿಸ್ಥಿತಿಯ ಲಾಭ ಪಡೆಯುವ ಸಿಬ್ಬಂದಿ `ಕೂಡಲೇ ಈ ಔಷಧ ತಂದು ಕೊಡಿ' ಎಂದು ಚೀಟಿ ಮುಂದಿಡುತ್ತಾರೆ. ಔಷಧವಿದೆ ಎಂದಿದ್ದರೂ ವಿಮï್ಸನಲ್ಲಿ ಹಣ ತೆರುವುದು ತಪ್ಪಿಲ್ಲ ಎಂದು ರೋಗಿಗಳು ಗೋಳಿಡುತ್ತಾರೆ.

ಹೆಣಗಾಟ: ಪೋಷಕರು ಬಹಳ ದಿನಗಳಿಂದ ಇಲ್ಲೇ ದಾಖಲಾಗಿ ದ್ದೇವೆ, ಏನಾಗಿದೆ ಎಂದು ವೈದ್ಯರು ಹೇಳುತ್ತಿಲ್ಲ. ಮಗುವಿನ ಅನಾರೋಗ್ಯದಿಂದ ಇಡೀ ಕುಟುಂಬವೇ ದಿಗಿಲುಗೊಂಡಿದೆ. ಕೂಲಿ, ನಾಲಿ ಮಾಡುವುದು ಬಿಟ್ಟು, ಮಗುವಿನ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ವಿಮ್ಸ್ ನಲ್ಲಿದ್ದೇವೆ. ಇನ್ನೂ ಎಷ್ಟು ದಿನ ಇರಬೇಕೋ ಗೊತ್ತಿಲ್ಲ. ವೈದ್ಯರು ಹೇಳುವ ವರೆಗೆ ಹೋಗುವಂತಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ತೋರಿಸಲು ನಮ್ಮ ಬಳಿ ದುಡ್ಡಿಲ್ಲ. ಇಲ್ಲಿ ಬರೆದುಕೊಡುವ ಔಷಧ ತರಲೂ ಪರದಾಡುತ್ತಿದ್ದೇವೆ ಎಂಬುದು ಇಲ್ಲಿ ದಾಖಲಾಗಿರುವ ಮಕ್ಕಳ ಬಹುತೇಕ ಪೋಷಕರ ಅಳಲು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com