ಗೋಹತ್ಯೆ ಆರೋಪಿಸಿ ಮಾರಾಣಾಂತಿಕ ಹಲ್ಲೆ; ಉತ್ತರ ಪ್ರದೇಶದ ಮೈನ್ಪುರಿಯಲ್ಲಿ ಗಲಭೆ

ಆಗ್ರಾದ ಬಳಿಯಿರುವ ಉತ್ತರಪ್ರದೇಶದ ಮೈನ್ಪುರಿ ಜಿಲ್ಲೆಯ ಬಳಿ, ಗೋಹತ್ಯೆ ಮಾಡಿದ್ದಾನೆ ಎಂದು ಆರೋಪಿಸಿ ನಾಲ್ವರನ್ನು ಅಟ್ಟಾಡಿಸಿ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ
ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ ಗಲಭೆಕೋರರು
ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ ಗಲಭೆಕೋರರು

ಆಗ್ರಾದ ಬಳಿಯಿರುವ ಉತ್ತರಪ್ರದೇಶದ ಮೈನ್ಪುರಿ ಜಿಲ್ಲೆಯ ಬಳಿ, ಗೋಹತ್ಯೆ ಮಾಡಿದ್ದಾನೆ ಎಂದು ಆರೋಪಿಸಿ ನಾಲ್ವರನ್ನು ಅಟ್ಟಾಡಿಸಿ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಭದ್ರತಾ ಪಡೆಗಳನ್ನು ಸ್ಥಳಕ್ಕೆ ಕಳುಹಿಸಲಾಗಿದ್ದರೂ ಕಿಡಿಗೇಡಿಗಳು ೧೨ ಕ್ಕೂ ಹೆಚ್ಚು ಅಂಗಡಿಗಳಿಗೆ, ೨ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಗಲಭೆಯಲ್ಲಿ ೭ ಭದ್ರತಾ ಪಡೆಯ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.

ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಆಶ್ರುವಾಯು ಸಿಡಿಸಿದ್ದಾರೆ. ಒಂದು ಕೋಮಿನವರು ಗೋಹತ್ಯೆ ನಡೆಸಿದ್ದಾರೆಂದು ಸುಮಾರು ಬೆಳಗ್ಗೆ ೮ ಘಂಟೆಗೆ ಗುಂಪೊದು ದಾಳಿ ನಡೆಸಿದೆ. ದಾಳಿಗೊಳಗಾದ ನಾಲ್ವರಲ್ಲಿ ಇಬ್ಬರು ತಪ್ಪಿಸಿಕೊಂಡರೆ ಇನ್ನಿಬ್ಬರ ಮೇಲೆ ಈ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಆದರೆ ನಂತರ ಹಸು ಸ್ವಾಭಾವಿಕವಾಗಿಯೇ ಸತ್ತಿದ್ದು, ಅದರ ಮಾಲೀಕ ಈ ನಾಲ್ವರಿಗೆ ಹಸುವನ್ನು ಕೊಂಡೊಯ್ಯಲು ಕರೆದಿದ್ದ ಎಂದು ತಿಳಿದುಬಂದಿದೆ.

೯ ಘಂಟೆಗೆ ಸ್ಥಳದಲ್ಲಿ ನೆರೆದ ಸುಮಾರು ೫೦೦ ಜನರು ಹಸುವನ್ನು ಕೊಂದವರಿಗೆ ಶೀಘ್ರ ಸಾರ್ವಜನಿಕ ನ್ಯಾಯ ನೀಡಬೇಕು ಎಂದು ದಾಂಧಲೆ ನಡೆಸಿದ್ದಾರೆ. ಕಬ್ಬಿಣದ ಸಲಾಕೆ, ಬಿದಿರು ಬೊಂಬುಗಳು, ಬಂದೂಕುಗಳನ್ನು ಹಿಡಿದ ಜನ ರಸ್ತೆಗಳಲ್ಲಿ ನೆರೆದಿದ್ದರು ಎಂದು ತಿಳಿದುಬಂದಿದೆ.

ಈ ಗಲಭೆಗಳಲ್ಲಿ ಎರಡು ಎಫ್ ಐ ಆರ್ ದಾಖಲಾಗಿವೆ. ಒಂದು ಗೋಹತ್ಯೆ ನಡೆಸಿದ್ದಾರೆ ಎಂಬುವವರ ಮೇಲೆ ಹಾಗು ಮತ್ತೊಂದು ಗಲಭೆ ಪ್ರಾರಂಭಸಿದ ಗುರುತು ಪತ್ತೆ ಹಚ್ಚದ ೫೦೦ ಜನರ ಮೇಲೆ. ಈ ಭಾಗದಲ್ಲಿ ಈಗ ಸೆಕ್ಷನ್ ೧೪೪ ಜಾರಿ ಮಾಡಿದ್ದು, ಜನರು ಗುಂಪು ಕಟ್ಟುವುದನ್ನು ನಿಷೇಧಿಸಲಾಗಿದೆ.

ಈ ಪ್ರಕರಣದಲ್ಲಿ ಇಲ್ಲಿಯವರೆಗೂ ೨೦ ಜನರನ್ನು ಬಂಧಿಸಲಾಗಿದ್ದು, ಮೃತ ಹಸುವಿನ ಮಾಲೀಕ ಮತ್ತು ಮಗನನ್ನು ಬಂಧಿಸುವ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com