ಸರ್ಕಾರಿ ವಕೀಲರ ನೇಮಕಾತಿ: ಎಜಿ ಸ್ಥಾನಕ್ಕೆ ರವಿವರ್ಮ ಕುಮಾರ್ ರಾಜಿನಾಮೆ

ಸರ್ಕಾರಿ ವಕೀಲರ ನೇಮಕಾತಿ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಅಡ್ವೊಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ...
ರವಿವರ್ಮ ಕುಮಾರ್
ರವಿವರ್ಮ ಕುಮಾರ್
ಬೆಂಗಳೂರು: ಸರ್ಕಾರಿ ವಕೀಲರ ನೇಮಕಾತಿ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಅಡ್ವೊಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ರಾಜ್ಯ ಸರ್ಕಾರ ಮೂರು ತಿಂಗಳ ಹಿಂದೆ ಕಲಬುರಗಿ ಎಎಜಿಯಾಗಿ ರಾಘವೇಂದ್ರ ನಾಡಗೌಡ ಹಾಗೂ ದೆಹಲಿ ಎಎಜಿಯಾಗಿ ದೇವದತ್ ಕಾಮತ್ ಎಂಬುವರನ್ನು ನೇಮಕ ಮಾಡಿತ್ತು. ಇತ್ತೀಚೆಗಷ್ಟೆ ಈ ಇಬ್ಬರು ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಬೇಸರಗೊಂಡ ಪ್ರೊ. ರವಿವರ್ಮ ಕುಮಾರ್ ಮತ್ತೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. 
ರವಿವರ್ಮ ಕುಮಾರ್ ಅವರು ತಮ್ಮ ರಾಜಿನಾಮೆ ಪತ್ರವನ್ನು ಮುಖ್ಯಮಂತ್ರಿ ಕಚೇರಿಗೆ ನೀಡಿದ್ದಾರೆ. ರಾಜಿನಾಮೆ ಅಂಗೀಕಾರದ ಕುರಿತು ಮಾಹಿತಿ ಇಲ್ಲ. 
ರಾಜ್ಯ ಸರ್ಕಾರ ಈ ಕ್ರಮವನ್ನು ಕುರಿತು 3 ತಿಂಗಳ ಹಿಂದೆ ವಿರೋಧಿಸಿದ್ದ ಪ್ರೊ. ರವಿವರ್ಮ ಕುಮಾರ್ ಅಂದೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಮನವೊಲಿಕೆ ಬಳಿಕ ರಾಜಿನಾಮೆಯನ್ನು ಹಿಂಪಡೆದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com