ನ್ಯಾ ಸದಾಶಿವ, ಸಾಧು ಕೋಕಿಲ ಸೇರಿ 60 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ

ಸಾಹಿತ್ಯದಿಂದ ಜಿನದತ್ತ ದೇಸಾಯಿ, ಜಾನಪದದಿಂದ ಅಪ್ಪಗೆರೆ ತಿಮ್ಮರಾಜು, ಚಿತ್ರಕಲೆಯಿಂದ ಮರಿಸ್ವಾಮಿ, ಸಿನಿಮಾದಿಂದ ಸದಾಶಿವ ಬ್ರಹ್ಮಾವರ
ನಟ ನಿರ್ದೇಶಕ ಸಾಧುಕೋಕಿಲ, ನ್ಯಾಯಮೂರ್ತಿ ಸದಾಶಿವ ಹಾಗೂ ಕ್ರಿಕಿಟಿಗ ವಿನಯ್ ಕುಮಾರ್ (ಸಂಗ್ರಹ ಚಿತ್ರ)
ನಟ ನಿರ್ದೇಶಕ ಸಾಧುಕೋಕಿಲ, ನ್ಯಾಯಮೂರ್ತಿ ಸದಾಶಿವ ಹಾಗೂ ಕ್ರಿಕಿಟಿಗ ವಿನಯ್ ಕುಮಾರ್ (ಸಂಗ್ರಹ ಚಿತ್ರ)
Updated on

ಬೆಂಗಳೂರು: ನಿವೃತ್ತ ನ್ಯಾ.ಎ.ಜೆ. ಸದಾಶಿವ, ಕ್ರಿಕೆಟಿಗ ವಿನಯಕುಮಾರ್, ನಟ ನಿರ್ದೇಶಕ ಸಾಧು ಕೋಕಿಲ, ಸಾಹಿತಿ ಎಚ್.ಎಲ್.ಕೇಶವಮೂರ್ತಿ, ಹಿರಿಯ ಸಿನಿಮಾ ನಟರಾದ ಸದಾಶಿವ ಬ್ರಹ್ಮಾವರ ಹಾಗೂ ಶನಿಮಹ ದೇವಪ್ಪ ಸೇರಿದಂತೆ ವಿವಿಧ ಕ್ಷೇತ್ರಗಳ 60 ಮಂದಿ ಗಣ್ಯರು ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರಾಜ್ಯೋತ್ಸವದ ಅಂಗವಾಗಿ ಭಾನುವಾರ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಾಹಿತ್ಯದಿಂದ ಐವರು, ರಂಗಭೂಮಿಯಿಂದ ಐವರು, ಸಂಗೀತ-ನೃತ್ಯ ಕ್ಷೇತ್ರದಿಂದ ಐವರು, ಚಿತ್ರಕಲೆ- ಶಿಲ್ಪಕಲೆಯಿಂದ ನಾಲ್ಕು ಮಂದಿ, ಯಕ್ಷಗಾನ ಬಯಲಾಟದಿಂದ ನಾಲ್ವರು, ಕೃಷಿ-ಪರಿಸರ ಕ್ಷೇತ್ರದಿಂದ ನಾಲ್ವರು, ವಿಜ್ಞಾನ ಕ್ಷೇತ್ರದಿಂದ ಇಬ್ಬರು, ವೈದ್ಯಕೀಯದಿಂದ ಒಬ್ಬರು, ಸಿನಿಮಾ- ಕಿರುತೆರೆಯಿಂದ ನಾಲ್ವರು, ಸಂಕೀರ್ಣದಲ್ಲಿ ನಾಲ್ವರು, ಹೊರನಾಡು ಕನ್ನಡಿಗ ಕೋಟಾದಲ್ಲಿ ಒಬ್ಬರು, ಸಮಾಜ ಸೇವೆಯಲ್ಲಿ ಐವರು, ನ್ಯಾಯಾಂಗ ಕ್ಷೇತ್ರದಿಂದ ಒಬ್ಬರು, ಜಾನಪದ ಕ್ಷೇತ್ರದಿಂದ 6 ಮಂದಿ, ಮಾಧ್ಯಮ ಕ್ಷೇತ್ರದಿಂದ ಐವರು, ಕ್ರೀಡಾ ವಲಯದಿಂದ ಮೂವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಸಿನೆಮಾ- ಕಿರುತೆರೆ: ಸಾವಕಾರ್ ಜಾನಕಿ-ಬೆಂಗಳೂರು, ಸದಾಶಿವ ಬ್ರಹ್ಮಾವರ್- ಧಾರವಾಡ, ಸಾಧು ಕೋಕಿಲ- ಬೆಂಗಳೂರು, ಶನಿ ಮಹಾದೇವಪ್ಪ-ಮಂಡ್ಯ
ಸಂಕೀರ್ಣ: ಎಚ್.ಎಸ್. ಪಾಟೀಲ- ಕೊಪ್ಪಳ, ಲಕ್ಷ್ಮಣ್ ತೆಲಗಾವಿ- ಚಿತ್ರದುರ್ಗ, ಫಕೀರಪ್ಪ ರೆಡ್ಡಿ ಬಸಪ್ಪ ರೆಡ್ಡಿ ಗದ್ದನಕೇರಿ- ಗದಗ, ಎಸ್. ತಿಪ್ಪೇಸ್ವಾಮಿ- ಮೈಸೂರು

ಹೊರನಾಡು:
ಶಾರದಾ ರಾಜಣ್ಣ (ಯುಎಸ್‍ಎ)-ರಾಮನಗರ

ಸಮಾಜ ಸೇವೆ: ಎಂ.ಎಸ್. ಹೆಳವರ್- ಚಿಕ್ಕಮಗಳೂರು, ಡಾ.ಕಾರಿನ್ ಕುಮಾರ್- ಬೆಂಗಳೂರು, ಮೀರಾ ಶ್ರೀನಿವಾಸ್ ಶಾನಭಾಗ್- ಉತ್ತರ ಕನ್ನಡ, ಡಾ.ಆರ್.ಆರ್. ಪದಕಿ- ವಿಜಯಪುರ, ಅಕೈ ಪದ್ಮಶಾಲಿ (ಮಂಗಳಮುಖಿ)- ಬೆಂಗಳೂರು

ನ್ಯಾಯಾಂಗ ವಿಭಾಗ:
ನಿವೃತ್ತ ನ್ಯಾ.ಎ.ಜೆ. ಸದಾಶಿವ-ಮಂಡ್ಯ

ಸಂಘ ಸಂಸ್ಥೆ ವಿಭಾಗ: ಡಾ.ಫಾಗು. ಹಳಕಟ್ಟಿ ಸಂಶೋಧನಾ ಸಂಸ್ಥೆ, ವಿಜಯಪುರ.

ಜಾನಪದ ವಿಭಾಗ: ಮಾಚಾರ್ ಗೋಪಾಲ್ ನಾಯಕ (ಸಿರಿ ಪಡ್ದಾನ)- ದಕ್ಷಿಣ ಕನ್ನಡ, ಅಪ್ಪಗೆರೆ ತಿಮ್ಮರಾಜು (ಗಾಯನ)- ರಾಮನಗರ, ಕೆಂಚಮಾದೇಗೌಡ (ಗೊರವರ ಕುಣಿತ)- ಚಾಮರಾಜನಗರ, ಹನಿಫಾ ಎಂ. ಶೇಖ್ (ತತ್ವಪದ)- ಕಲಬುರ್ಗಿ, ಗುರುಲಿಂಗಪ್ಪ ವೀರ ಸಂಗಪ್ಪ ಕರಡಿ (ಕರಡಿ ಮಜಲು)- ಬಾಗಲಕೋಟೆ, ಮಾರಿಯಮ್ಮ ಬಸಣ್ಣ ಶಿರವಾಟಿ (ಬುರ್ರಕಥಥಾ)- ಯಾದಗಿರಿ

ಮಾಧ್ಯಮ: ಕಲ್ಲೇ ಶಿವೋತ್ತಮಾ ರಾವ್- ಉಡುಪಿ, ಪ್ರೊ.ಎಚ್.ಎಸ್. ಈಶ್ವರ್- ಶಿವಮೊಗ್ಗ, ನಾಗಮಣಿ ಎಸ್. ರಾವ್- ಬೆಂಗಳೂರು, ಹನುಮಂತ ಹೂಗಾರ್- ಧಾರವಾಡ, ನಾಗಣ್ಣ (ಪ್ರಜಾಪ್ರಗತಿ)-ತುಮಕೂರು

ಕ್ರೀಡೆ:
ಪಾಂಡಂಡ ಕುಟ್ಟಪ್ಪ (ಹಾಕಿ)- ಕೊಡಗು, ವಿನಯ್ ಕುಮಾರ್ (ಕ್ರಿಕೆಟ್)- ದಾವಣಗೆರೆ, ಎಂ. ನಿರಂಜನ್ (ಈಜು- ವಿಕಲಚೇತನ)- ಬೆಂಗಳೂರು

ಚಿತ್ರಕಲೆ ಮತ್ತು ಶಿಲ್ಪಕಲೆ: ಎಂ.ಜೆ.ಕಮಲಾಕ್ಷಿ-ಬೆಂಗಳೂರು ಗ್ರಾ, ಪಿ.ಎಸ್.ಕಡೇಮನಿ- ವಿಜಯ ಪುರ, ಮಲ್ಲಪ್ಪ ಮಳಿಯಪ್ಪ ಬಡಿ ಗೇರ- ಬಾಗಲಕೋಟೆ, ಮರಿಸ್ವಾಮಿ- ಬೆಂಗಳೂರು ಗ್ರಾಮಾಂತರ.

ಕೃಷಿ ಪರಿಸರ:
ಡಾ.ಪ್ರಕಾಶ್ ಭಟ್-ಧಾರವಾಡ, ಡಾ.ಮಲ್ಲಣ್ಣ ನಾಗರಾಳ- ಬಾಗಲಕೋಟೆ, ಬನ್ನೂರು ಕೃಷ್ಣಪ್ಪ - ಮೈಸೂರು, ಮುತ್ತಣ್ಣ ಪೂಜಾರ- ಹಾವೇರಿ.

ವಿಜ್ಞಾನ: ಎ.ಎಸ್.ಕಿರಣ್‍ಕುಮಾರ್, ಇಸ್ರೋ- ಚಿಕ್ಕಮ ಗಳೂರು, ಅಬ್ದುಲ್ ಅಜೀಮ್, ಅರ್ಥಶಾಸ್ತ್ರ - ಕೋಲಾರ.

ವೈದ್ಯಕೀಯ: ಡಾ.ಆರ್.ಕೆ.ಸರೋಜ-- ಚಿಕ್ಕಬಳ್ಳಾಪುರ

ಸಾಹಿತ್ಯ: ಡಾ.ಕೆ.ಜಿ.ನಾಗರಾಜಪ್ಪ-ತುಮಕೂರು, ಡಾ.ಜಿನದತ್ತ ದೇಸಾಯಿ-ಬೆಳಗಾವಿ, ಆರ್ಯಾಂಭ ಪಟ್ಟಾಭಿ-ಮೈಸೂರು, ಡಾ.ವೀರೇಂದ್ರ ಸಿಂಪಿ- ಬೀದರ್, ಎಚ್.ಎಲ್.
ಕೇಶವಮೂರ್ತಿ-ಮಂಡ್ಯ

ರಂಗಭೂಮಿ:
ಎಚ್.ಜಿ.ಸೋಮಶೇಖರ ರಾವ್- ಬೆಂಗಳೂರು, ಬಿ.ಕರಿಯಪ್ಪ ಮಾಸ್ತರ್- ರಾಯಚೂರು, ಮುಮಾ್ತಜ್ ಬೇಗಂ- ಗದಗ, ಸಂಜೀವಪ್ಪ ಗಬ್ಬೂರು-ರಾಯಚೂರು, ವೀಣಾ ಆದವಾನಿ- ಬಳ್ಳಾರಿ

ಸಂಗೀತ-ನೃತ್ಯ: ಶ್ರೀರಾಮುಲು, ನಾದಸ್ವರ- ಕೋಲಾರ, ಲೋಕೇಶದಾಸ್, ಹರಿಕಥೆ - ಹಾಸನ, ಖಾಸೀಂ ಸಾಬ್ ಜಮಾದಾರ್, ತಬಲ -ಉ.ಕ, ಶೋಭ ಆರ್.ಹುಯಿಲಗೋಳ,
ಸುಗಮಸಂಗೀತ- ಗದಗ, ಚಿತ್ರಾ ವೇಣುಗೋಪಾಲ್, ನೃತ್ಯ-ಬೆಂಗಳೂರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com