ನವದೆಹಲಿ: ದೇಶದಲ್ಲಿ ಹೆಚ್ಚಿತ್ತಿರುವ ಅಸಹನೆಗೆ ಕಳವಳ ವ್ಯಕ್ತಪಡಿಸಿ ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿರುವ ಲೇಖಕರು, ಕಲಾವಿದರು ಮತ್ತಿ ವಿಜ್ಞಾನಿಗಳ ಬೆಂಬಲಕ್ಕೆ ನಿಂತಿರುವ ಇನ್ಫೋಸಿಸ್ ಸಂಸ್ಥಾಪಕ ಮತ್ತು ಮಾಜಿ ಸಿ ಇ ಒ ಎನ್ ಆರ್ ನಾರಾಯಣ ಮೂರ್ತಿ, ಅಲ್ಪಸಂಖ್ಯಾತರಲ್ಲಿ ಭಯದ ವಾತಾವರಣ ಇದೆ, ಈ ಭಯವನ್ನು ನಿರ್ಮೂಲನೆ ಮಾಡದ ಹೊರಡು ದೇಶದ ಆರ್ಥಿಕ ಪ್ರಗತಿ ಅಸಾಧ್ಯ ಎಂದಿದ್ದಾರೆ.
ಉದ್ದಿಮೆದಾರರ ಸಮುದಾಯದಿಂದ ಇದು ಮೊದಲ ಪ್ರಮುಖ ವಿರೋಧಿ ಧ್ವನಿಯಾಗಿದೆ.
ಎನ್ ಡಿ ಟಿ ವಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ನಾರಾಯಣಮೂರ್ತಿ ಅವರು ಕೇವಲ ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆಯಷ್ಟೇ ಮಾತನಾಡದೆ, ೧೯೬೭ ರಲ್ಲಿ ದಕ್ಷಿಣ ಭಾರತದವರ ವಿರುದ್ಧ ಮುಂಬೈನಲ್ಲಿ ಶಿವಸೇನೆ ದಾಂಧಲೆ ನಡೆಸಿದ್ದನ್ನು ಕೂಡ ನೆನಪಿಸಿಕೊಂಡಿದ್ದಾರೆ.
ಅಲ್ಪಸಂಖ್ಯಾತರರಲ್ಲಿ ನಂಬಿಕೆ ಮೂಡಿಸುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು. ಆಗಷ್ಟೇ ದೇಶದ ಆರ್ಥಿಕ ಪ್ರಗತಿ ಸಾಧ್ಯ ಎಂದಿದ್ದಾರೆ.
ಈ ಸಂದರ್ಶನ ನಂತರ ನಾರಾಯಣಮೂರ್ತಿ ಹೇಳಿಕೆಗೆ ಸಹಮತ ವ್ಯಕ್ತಪಡಿಸಿ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ ಟ್ವೀಟ್ ಮಾಡಿದ್ದಾರೆ.
Advertisement