ದೆಹಲಿ-ಫರೀದಾಬಾದ್ ಮೆಟ್ರೋ ರೈಲು ಉದ್ಘಾಟಿಸಿದ ಮೋದಿ

ದೆಹಲಿಯ ಬದಾರ್‌ಪುರ್‌ನಿಂದ ಎಸ್ಕೋರ್ಟ್ಸ್ ಮುಜೇಸರ್ (ಫರೀದಾಬಾದ್) ನಡುವಿನ ಮೆಟ್ರೋ ರೈಲು ಸಂಚಾರವನ್ನು ಪ್ರಧಾನಿ ನರೇಂದ್ರ ಮೋದಿ...
ಮೆಟ್ರೋ ರೈಲಿನಲ್ಲಿ ಸಂಚರಿಸುತ್ತಿರುವ ನರೇಂದ್ರ ಮೋದಿ
ಮೆಟ್ರೋ ರೈಲಿನಲ್ಲಿ ಸಂಚರಿಸುತ್ತಿರುವ ನರೇಂದ್ರ ಮೋದಿ

ನವದೆಹಲಿ:  ದೆಹಲಿಯ ಬದಾರ್‌ಪುರ್‌ನಿಂದ ಎಸ್ಕೋರ್ಟ್ಸ್ ಮುಜೇಸರ್ (ಫರೀದಾಬಾದ್) ನಡುವಿನ ಮೆಟ್ರೋ ರೈಲು ಸಂಚಾರವನ್ನು ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಉದ್ಘಾಟಿಸಿದ್ದಾರೆ.

ಹರ್ಯಾಣದ ಕೈಗಾರಿಕಾ ಕೇಂದ್ರವಾಗಿರುವ ಫರೀದಾಬಾದ್‌ಗೆ ದೆಹಲಿಯಿಂದ ಮೆಟ್ರೋ ರೈಲು ಸಂಚಾರವೇರ್ಪಟ್ಟಿರುವುದರಿಂದ ಎರಡೂ ನಗರಗಳ ನಡವೆ ಸುಲಭ ಸಂರ್ಪಕವೇರ್ಪಡಲಿದೆ. ಈ ರೈಲು ಸಂಚಾರದಿಂದಾಗಿ ಸುಮಾರು 200, 000 ಜನರು ಪ್ರತಿನಿತ್ಯ ರೈಲಿನಲ್ಲಿ ಪ್ರಯಾಣಿಸಲಿದ್ದಾರೆ ಎಂದು ಹರ್ಯಾಣ ಸರ್ಕಾರದ ವಕ್ತಾರ ಹೇಳಿದ್ದಾರೆ.

ಬದಾರ್‌ಪುರ್  -ಫರೀದಾಬಾದ್ ನಡುವಿನ ಮೆಟ್ರೋ ಉದ್ಘಾಟನೆಗೆ ಮೋದಿ ರೈಲಿನಲ್ಲೇ ಆಗಮಿಸಿದ್ದರು. ಅವರೊಂದಿಗೆ ಹರ್ಯಾಣ ಸಚಿವ ಸಂಪುಟದ ಸದಸ್ಯರೂ ಭಾಗಿಯಾಗಿದ್ದರು. ರೈಲು  ಪ್ರಯಾಣದ ಮಧ್ಯೆ ಮೋದಿ ಪ್ರಯಾಣಿಕರೊಂದಿಗೆ ಸಂವಾದ ನಡೆಸಿ ಸೆಲ್ಫೀ ತೆಗೆದುಕೊಂಡರು.



(ಮೆಟ್ರೋ ಪ್ರಯಾಣಿಕರೊಬ್ಬರು ಮೋದಿ ಜತೆ ಸೆಲ್ಫೀ ತೆಗೆದುಕೊಳ್ಳುತ್ತಿರುವುದು)

ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಮತ್ತು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟಾರ್ ಜತೆ ಬಟಾ ಚೌಕ್ ಮೆಟ್ರೋ ಸ್ಟೇಷನ್‌ನಲ್ಲಿ ಬಂದಿಳಿದ ಮೋದಿ
ಫರೀದಾಬಾದ್‌ನ ಸ್ಫೋರ್ಟ್ಸ್ ಕಾಂಪ್ಲೆಕ್ಸ್ ಗೆ ಬಂದು ಜನರನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com