"ಮುಂಬೈ ಸರಣಿ ಸ್ಫೋಟ" ತೀರ್ಪು ಪ್ರಕಟ: 12 ಮಂದಿ ತಪ್ಪಿತಸ್ಥರು, ಓರ್ವನ ಖುಲಾಸೆ

2006 7/11 ಮುಂಬೈ ಸರಣಿ ಸ್ಫೋಟ ಪ್ರಕರಣದ ತೀರ್ಪು ಪ್ರಕಟವಾಗಿದ್ದು, ಪ್ರಕರಣದಲ್ಲಿ ಬಂಧಿಸಲಾಗಿದ್ದ 13 ಮಂದಿಯ ಪೈಕಿ 12 ಮಂದಿಯನ್ನು ನ್ಯಾಯಾಲಯ ಅಪರಾಧಿಗಳೆಂದು ತೀರ್ಪು ನೀಡಿದೆ...
ಮುಂಬೈ ಸರಣಿ ಸ್ಫೋಟದ ಭೀಕರ ದೃಶ್ಯ (ಸಂಗ್ರಹ ಚಿತ್ರ)
ಮುಂಬೈ ಸರಣಿ ಸ್ಫೋಟದ ಭೀಕರ ದೃಶ್ಯ (ಸಂಗ್ರಹ ಚಿತ್ರ)
Updated on

ಮುಂಬೈ: 2006 7/11 ಮುಂಬೈ ಸರಣಿ ಸ್ಫೋಟ ಪ್ರಕರಣದ ತೀರ್ಪು ಪ್ರಕಟವಾಗಿದ್ದು, ಪ್ರಕರಣದಲ್ಲಿ ಬಂಧಿಸಲಾಗಿದ್ದ 13 ಮಂದಿಯ ಪೈಕಿ 12 ಮಂದಿಯನ್ನು ನ್ಯಾಯಾಲಯ ಅಪರಾಧಿಗಳೆಂದು ತೀರ್ಪು ನೀಡಿದೆ. ಅಲ್ಲದೆ ಓರ್ವ ಆರೋಪಿಯ ಅಪರಾಧ ಸಾಬೀತಾಗದ ಹಿನ್ನಲೆಯಲ್ಲಿ ಆತನನ್ನು ಖುಲಾಸೆಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಸತತ 9 ವರ್ಷಗಳ ಸುದೀರ್ಘ ವಿಚಾರಣೆ ನಂತರ ಜುಲೈ 11 2006 ರಲ್ಲಿ ಮುಂಬಯಿ ಉಪನಗರ ರೈಲಿನಲ್ಲಿ ಬಾಂಬ್ ಸ್ಫೋಟಿಸಿ 188 ಮಂದಿ ದಾರುಣವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಹಾರಾಷ್ಟ್ರ ಕಂಟ್ರೋಲ್ ಆಫ್ ಆರ್ಗನೈಸಡ್  ಕ್ರೈಮ್ ಆ್ಯಕ್ಟ್ ನ ವಿಶೇಷ ನ್ಯಾಯಾಲಯ ತನ್ನ ಅಂತಿಮ ತೀರ್ಪು ಪ್ರಕಟಿಸಿದೆ. ಮೋಕಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಯತಿನ್ ಡಿ ಶಿಂಧೆ ಅವರು ಪ್ರಕರಣ ಸಂಬಂಧ 192 ಸಾಕ್ಷಿಗಳನ್ನು ವಿಚಾರಣೆ ನಡೆಸಿ 2014 ರ ಆಗಸ್ಟ್ 19 ರಂದು ವಿಚಾರಣೆ ಮುಕ್ತಾಯಗೊಳಿಸಿದ್ದರು.  ಘಟನೆ ನಡೆದ 8 ವರ್ಷಗಳ ನಂತರ ಇಂದು ಅಪರಾಧಿಗಳ ವಿರುದ್ಧ ತೀರ್ಪು ಪ್ರಕಟಿಸಿದ್ದಾರೆ.

ಜುಲೈ 11 ರಂದು ಮುಂಬಯಿ ಉಪನಗರ ರೈಲು ನಿಲ್ದಾಣದ ಪ್ರಥಮ ದರ್ಜೆ ಕೋಚ್ ನಲ್ಲಿ 7 ಆರ್ ಡಿಎಕ್ಸ್ ಬಾಂಬ್ ಇರಿಸಿ ಸ್ಫೋಟಿಸಲಾಗಿತ್ತು. ಜುಲೈ 11ರ ಸಂಜೆ ಸುಮಾರು 6.23ರ ವೇಳೆಯಲ್ಲಿ ಸತತ 7 ಬಾಂಬ್ ಗಳು ಸ್ಫೋಟಗೊಂಡಿದ್ದವು. ಮಾತುಂಗಾ ರಸ್ತೆ, ಮಾಹಿಮ್, ಬಾಂದ್ರಾ, ಖಾರ್ ರಸ್ತೆ, ಜೋಗೇಶ್ವರಿ, ಬಿರೋವಲ್ಲಿ ಮತ್ತು ಮೀರಾರಸ್ತೆಯ ರೈಲು ನಿಲ್ದಾಣಗಳಲ್ಲಿ ಸರಣಿ ಸ್ಫೋಟ ಸಂಭವಿಸಿತ್ತು. ಸ್ಫೋಟದಲ್ಲಿ 188 ಮಂದಿ ಸಾವನ್ನಪ್ಪಿ 829 ಜನ ತೀವ್ರವಾಗಿ ಗಾಯಗೊಂಡಿದ್ದರು. ಈ ಸಂಬಂಧ 2 ಐಪಿಎಸ್,  5, ಐಎಎಸ್ ಅಧಿಕಾರಿಗಳು, 18 ವೈದ್ಯರನ್ನು  ಸೇರಿ ಒಟ್ಟು 193 ಸಾಕ್ಷಿಗಳ ವಿಚಾರಣೆ ನಡೆದಿತ್ತು. 5.500 ಪುಟಗಳ ತೀರ್ಪನ್ನು ಇಂದು ನ್ಯಾಯಾಲಯ ಪ್ರಕಟಿಸಲಾಗಿದೆ.

ಸೋಮವಾರ ಶಿಕ್ಷೆ ಪ್ರಮಾಣ ಪ್ರಕಟ
ಇದೇ ವೇಳೆ ಪ್ರಕರಣದಲ್ಲಿ ಭಾಗಿಯಾದ ಎಲ್ಲ ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ಸೋಮವಾರ ಪ್ರಕಟಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಸರಣಿ ಸ್ಫೋಟದ ಅಪರಾಧಿಗಳ ಪಟ್ಟಿ ಇಂತಿವೆ.
ಕಮಲ್ ಅಹ್ಮದ್ ಅನ್ಸಾರಿ (37 ವರ್ಷ), ತನ್ವೀರ್ ಅಹ್ಮದ್ ಅನ್ಸಾರಿ (37 ವರ್ಷ), ಮಹಮದ್ ಫೈಸಲ್ ಶೇಖ್ (36 ವರ್ಷ), ಇಹ್ತೇಶಮ್ ಸಿದ್ದಿಕಿ (30 ವರ್ಷ), ಮಹಮದ್ ಮಜಿದ್ ಷಫಿ (32 ವರ್ಷ), ಶೇಖ್ ಅಲಮ್ ಶೇಖ್ (41 ವರ್ಷ), ಮಹಮದ್ ಸಾಜಿದ್ ಅನ್ಸಾರಿ (34 ವರ್ಷ), ಮುಜಾಮಿಲ್ ಶೇಖ್ (27 ವರ್ಷ), ಸೊಹೇಲ್ ಮೆಹಮೂದ್ ಶೇಖ್ (43 ವರ್ಷ), ಜಮೀರ್ ಅಹ್ಮದ್ ಶೇಖ್ (36 ವರ್ಷ), ನವೀದ್ ಹುಸೇನ್ ಖಾನ್ (30 ವರ್ಷ), ಆಸಿಫ್ ಖಾನ್ (38 ವರ್ಷ).

ಖುಲಾಸೆಗೊಂಡ ಆರೋಪಿ

ಅಬ್ದುಲ್ ವಾಹಿದ್ ಶೇಖ್ (34 ವರ್ಷ)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com