ಬಿಬಿಎಂಪಿ: ಹಿಂದೆ ಹಗರಣ, ಮುಂದೆ ಝಣಝಣ

ಬಿಬಿಎಂಪಿಯ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಕ್ಕೆ ಆದ್ಯತೆ, ಮಾರುಕಟ್ಟೆಗಳನ್ನು ಸೂಕ್ತವಾಗಿ ನಿರ್ವಹಿಸಿ ಕಾಲಕಾಲಕ್ಕೆ ಬಾಡಿಗೆ ವಸೂಲಿ, ಪಾರ್ಕಿಂಗ್ ಸಮಸ್ಯೆಗೆ ಪರಿಹಾರ, ವಾಹನ ದಟ್ಟಣೆ ನಿವಾರಣೆಗೆ ಪ್ರಯತ್ನ, ಅನಧಿಕೃತ ಜಾಹೀರಾತು ಹಾಗೂ ಕಟ್ಟಡಗಳಿಗೆ ಕಡಿವಾಣ ಇವು ಬೆಂಗಳೂರು ಮಹಾನಗರ ಪಾಲಿಕೆಯ...
ಬೆಂಗಳೂರು ಮಹಾನಗರ ಪಾಲಿಕೆಯ 16ನೇ ಅವಧಿಯ ಮೇಯರ್ ಆಗಿ ಆಯ್ಕೆಯಾದ ಕಾಂಗ್ರೆಸ್ ನ ಬಿ.ಎನ್.ಮಂಜುನಾಥ ರೆಡ್ಡಿ  (ಫೋಟೋ ಕೃಪೆ: ಕೆಪಿಎನ್)
ಬೆಂಗಳೂರು ಮಹಾನಗರ ಪಾಲಿಕೆಯ 16ನೇ ಅವಧಿಯ ಮೇಯರ್ ಆಗಿ ಆಯ್ಕೆಯಾದ ಕಾಂಗ್ರೆಸ್ ನ ಬಿ.ಎನ್.ಮಂಜುನಾಥ ರೆಡ್ಡಿ (ಫೋಟೋ ಕೃಪೆ: ಕೆಪಿಎನ್)
Updated on

ಬೆಂಗಳೂರು: ಬಿಬಿಎಂಪಿಯ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಕ್ಕೆ ಆದ್ಯತೆ, ಮಾರುಕಟ್ಟೆಗಳನ್ನು ಸೂಕ್ತವಾಗಿ ನಿರ್ವಹಿಸಿ ಕಾಲಕಾಲಕ್ಕೆ ಬಾಡಿಗೆ ವಸೂಲಿ, ಪಾರ್ಕಿಂಗ್ ಸಮಸ್ಯೆಗೆ ಪರಿಹಾರ, ವಾಹನ ದಟ್ಟಣೆ ನಿವಾರಣೆಗೆ ಪ್ರಯತ್ನ, ಅನಧಿಕೃತ ಜಾಹೀರಾತು ಹಾಗೂ ಕಟ್ಟಡಗಳಿಗೆ ಕಡಿವಾಣ ಇವು ಬೆಂಗಳೂರು ಮಹಾನಗರ ಪಾಲಿಕೆಯ 16ನೇ ಅವಧಿಯ ಮೇಯರ್ ಆಗಿ ಆಯ್ಕೆಯಾಗಿದ ಕಾಂಗ್ರೆಸ್ ನ ಬಿ.ಎನ್.ಮಂಜುನಾಥ ರೆಡ್ಡಿ ಅವರ ಕಾರ್ಯಸೂಚಿ ಹಾಗೂ ಭರವಸೆ.

ಮೇಯರ್ ಚುನಾವಣೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಅವಧಿ ಹಗರಣಗಳ ಅವಧಿ ಎನ್ನುವುದಕ್ಕಿಂತ ಸಮಸ್ಯೆಗಳ ಬೀಡಾಗಿತ್ತು. ಪಾಲಿಕೆಯಲ್ಲಿ ಆರ್ಥಿಕ ಸಮಸ್ಯೆ ಬಿಗಡಾಯಿಸಿದೆ. ಪ್ರತಿ ತಿಂಗಳು ಬಿಲ್ ಪಾವತಿಸುವ ವೇಳೆ ಹಣದ ಸಮಸ್ಯೆ ಕಂಡು ಬರುತ್ತದೆ. ಪಾಲಿಕೆಯಲ್ಲಿ ಆದಾಯ ಹೆಚ್ಚಿಸುವುದಕ್ಕೆ ಮೊದಲ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ. ಕಸದ ಸಮಸ್ಯೆಯೂ ಪ್ರಮುಖವಾಗಿದ್ದು, ರಾಜ್ಯ ಸರ್ಕಾರ ಪ್ರತ್ಯೇಕ ಐಎಎಸ್ ಅಧಿಕಾರಿ ನೇಮಿಸಿ ಸುಧಾರಣೆ ತಂದಿದೆ. ಕಸ ವಿಲೇವಾರಿಗೆ ಒತ್ತು ನೀಡಲಾಗುವುದ ಎಂದರು.

ಬಾಡಿಗೆ ಪಕ್ಕಾ, ಎಲ್ಲದಕ್ಕೂ ಲೆಕ್ಕ:
ನಗರದ ಮಾರುಕಟ್ಟೆಯಲ್ಲಿ ಹಲವು ವಾಣಿಜ್ಯ ಸಂಕೀರ್ಣಗಳಿದ್ದು, ಇಲ್ಲಿ ಬಾಡಿಗೆ ನೀಡದೆ ಮಳಿಗೆ ನಿರ್ಮಿಸಿಕೊಳ್ಳಲಾಗಿದೆ. ವಿದ್ಯುತ್, ನೀರು ಸೇರಿದಂತೆ ಎಲ್ಲ ವೆಚ್ಚವನ್ನು ಬಿಬಿಎಂಪಿ ಭರಿಸುತ್ತಿದ್ದರೆ, ಬೇರೆ ಯಾರೋ ಮಳಿಗೆ ಮಾಡಿಕೊಂಡು ಹಣ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಿ ಸೂಕ್ತ ನಿರ್ವಹಣೆ ಮಾಡಲಾಗುವುದು. ವಾಹನ ದಟ್ಟಣೆ ಅಧಿಕಾವಾಗಿದ್ದು, ರಸ್ತೆಗಳನ್ನು ವಿಸ್ತರಿಸುವ ಅವಶ್ಯಕತೆಯಿದೆ. ಕಳೆದ ಬಾರಿ 93 ರಸ್ತೆಗಳ ಅಗಲೀಕರಣಕ್ಕೆ ಯೋಜನೆ ರೂಪಿಸಿ ಕೇವಲ 4 ರಸ್ತೆಗಳಲ್ಲಿ ಅರ್ಥ ಕಾಮಗಾರಿ ಮಾಡಲಾಗಿತ್ತು.

ಕೆಲವೆಡೆ ಭೂಸ್ವಾಧೀನದ ಸಮಸ್ಯೆಯಿದೆ. ಟಿಡಿಆರ್ ಸೇರಿದಂತೆ ಹಲವು ಕ್ರಮಗಳ ಮೂಲಕ ರಸ್ತೆ ಅಗಲೀಕರಣಕ್ಕೆ ಚಾಲನೆ ನೀಡಲಾಗುವುದು. ಮಳೆಗಾಲದಲ್ಲಿ ರಾಜಕಾಲುವೆಗಳಿಂದ ನೀರು ಹೊರ ಹರಿಯುವ ಸಮಸ್ಯೆಗಳನ್ನೂ ಪರಿಹಾರ ಮಾಡಲಾಗುವುದು. 110 ಹಳ್ಳಿಗಳಲ್ಲಿ ಹೆಚ್ಚಿನ ಕಡೆ ರಾಜಕಾಲುವೆ ಒತ್ತುವರಿಯಾಗಿದ್ದು, ಸಮೀಕ್ಷೆ ಮಾಡಿ, ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಹೊಸ ಸದಸ್ಯರಿಗೆ ತರಬೇತಿ: ಪಾಲಿಕೆಯಲ್ಲಿ ಸುಮಾರು 40 ಸದಸ್ಯರು ಮಾತ್ರ ಹಳಬರಿದ್ದಾರೆ. ಹೊಸ ಸದಸ್ಯರು ಪಾಲಿಕೆಯ ಬಗ್ಗೆ ತಿಳಿಯಬೇಕಿದೆ. ಹೀಗಾಗಿ ಕೆಎಂಸಿ ಕಾಯ್ದೆ, ಕೌನ್ಸಿಲ್ ಬಗ್ಗೆ ಸದಸ್ಯರಿಗೆ ತರಬೇತಿ ನೀಡಲಾಗುವುದು. ಪಾರ್ಕಿಂಗ ಲಾಟ್ ಮಾಡುವುದು ಈಗ ಮಾಫಿಯಾಯಾ ಆಗಿದೆ. ರಸ್ತೆಗಳಲ್ಲಿ ಪಾರ್ಕಿಂಗ್ ಲಾಟ್ ಮಾಡುವ ಯೋಜನೆ ಬಗ್ಗೆ ಮಾಹಿತಿ ಪಡೆದು ಶುಲ್ಕ ದರ ಕಡಿಮೆಗೊಳಿಸಲು ಪ್ರಯತ್ನಿಸುತ್ತೇನೆ ಎಂದರು.

ನೂತನ ಮೇಯರ್ ಹೇಳಿದ್ದು....

ಫ್ಲೆಕ್ಸ್ ಹಾಕಬೇಡಿ
ಅನಧಿಕೃತ ಜಾಹೀರಾತು ಫಲಕ ಹೆಚ್ಚಿದ್ದು, ನಗರದಲ್ಲಿ 22 ಸಾವಿರಕ್ಕೂ ಅಧಿಕ ಅನಧಿಕೃತ ಫಲಕಗಳಿವೆ ಎಂದು ಅಂದಾಜಿಸಲಾಗಿದೆ. ಇವನ್ನು ತಪಾಸಣೆ ಮಾಡಿ ಬಿಬಿಎಂಪಿಗೆ ಆದಾಯ
ಬರುವಂತೆ ಮಾಡಲಾಗುವುದು. ಎಲ್ಲ ಪಕ್ಷಗಳ ಹಿರಿಯ ಮುಖಂಡರೂ ಸಹಕಾರ ನೀಡಬೇಕು.

ಎರಡೂವರೆ ವರ್ಷ ಬೇಕು
ಮೇಯರ್‍ಗೆ ಕನಿಷ್ಟ ಎರಡೂವರೆ ವರ್ಷಗಳ ಅಧಿಕಾರಾವಧಿ ನೀಡಿದರೆ ಅಭಿವೃದ್ಧಿ ಸಾಧ್ಯವಾಗುತ್ತದೆ. ನಗರ ಬೃಹತ್ ಆಗಿರುವುದರಿಂದ ಒಂದು ವರ್ಷ ಅಭಿವೃದ್ಧಿಗೆ ಸಾಲುವುದಿಲ್ಲ. ಆದರೆ ಈ ರೀತಿಯ ಅಧಿಕಾರ ನನಗೇ ಬೇಕೆಂದು ಹೇಳುತ್ತಿಲ್ಲ.

ಆಸ್ತಿ ತೆರಿಗೆ ಪರಿಷ್ಕರಣೆ

ಪಾಲಿಕೆಯ ಆರ್ಥಿಕ ಸ್ಥಿತಿ ಉತ್ತಮಗೊಳ್ಳಬೇಕೆಂದರೆ ಆಸ್ತಿ ತೆರಿಗೆ ಪರಿಷ್ಕರಣೆ ಆಗಲೇಬೇಕು. ಆದರೆ, ರಾಜಕೀಯ ಕಾರಣಗಳಿಂದಾಗಿ ಆ ಕೆಲಸವಾಗುತ್ತಿಲ್ಲ. ಕೆಎಂಸಿ ಕಾಯ್ದೆ
ಪ್ರಕಾರ ಮೂರು ವರ್ಷಗಳಿಗೊಮ್ಮೆ ಆಸ್ತಿ ತೆರಿಗೆ ಪರಿಷ್ಕರಣೆಯಾಗಬೇಕು. ಅದಕ್ಕಾಗಿ ಪ್ರಯತ್ನಿಸುತ್ತೇನೆ.

ಕಾಂಗ್ರೆಸ್-ಜೆಡಿಎಸ್ ಒಂದು
ಕಾಂಗ್ರೆಸ್-ಜೆಡಿಎಸ್ ಪ್ರಣಾಳಿಕೆ ಯನ್ನು ಒಂದು ಮಾಡಿಕೊಂಡೇ ಕೆಲಸ ಮಾಡುತ್ತೇವೆ. ಸಮನ್ವಯ ಸಮಿತಿ ಅಗತ್ಯವಿಲ್ಲ. ಮುಂದಿನ ದಿನಗಳಲ್ಲೂ ಎರಡು ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಬರುವ ಸಂಭವವಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com