ರಾತ್ರೋರಾತ್ರಿ ತಮಿಳುನಾಡಿಗೆ ಕಬಿನಿ ನೀರು?

ಮಳೆ ಇಲ್ಲದೆ ಇಡೀ ರಾಜ್ಯ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ. ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲ ಎಂದು ಜನರೆದುರು ಹೇಳಿ...
ಕಬಿನಿ ಜಲಾಶಯ
ಕಬಿನಿ ಜಲಾಶಯ
ಬೆಂಗಳೂರು: ಮಳೆ ಇಲ್ಲದೆ ಇಡೀ ರಾಜ್ಯ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ. ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲ ಎಂದು ಜನರೆದುರು ಹೇಳುತ್ತಿರುವ ಅಧಿಕಾರಿಗಳು ಇದೀಗ ಯಾವುದೇ ಸುಳಿವು ನೀಡದೇ ಯಾರಿಗೂ ತಿಳಿಯದಂತೆ ಸುಮಾರು 4000 ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಬಿಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.
ಈವರೆಗೆ 600 ಕ್ಯುಸೆಕ್ ನೀರನ್ನು ಬಿಡುತ್ತಿದ್ದ ಅಧಿಕಾರಿಗಳು, ಶನಿವಾರ ರಾತ್ರಿ ಕಬಿನಿ ಜಲಾಶಯದ ಗೇಟ್ ಗಳ ಬದಲಿಗೆ ವಿದ್ಯುತ್ ಘಟಕದ ಮೂಲಕ ಸುಮಾರು 4000 ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಬಿಟ್ಟಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಇಂದು ಜಲಾಶಯದ ನೀರಿನ ಮಟ್ಟ 75 ಅಡಿಗೆ ಬಂದು ನಿಂತಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳು ಬರಪೀಡಿತ ಪ್ರದೇಶಗಳಾಗಿ ಪರಿವರ್ತಿತವಾಗುತ್ತಿವೆ. ಇಂತಹ ಸಮಯದಲ್ಲಿ ರಾಜ್ಯ ಸರ್ಕಾರದ ಈ ನಡೆ ಆತಂಕ ಹುಟ್ಟಿಸುವಂತಿದೆ.
ಒಂದೆಡೆ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಮಾಧ್ಯಮದೆದುರು ಹೇಳಿಕೊಳ್ಳುತ್ತಿದ್ದರೆ ಮತ್ತೊಂದೆಡೆ ಜನರಿಗೆ ತಿಳಿಯದಂತೆ ಪ್ರತಿನಿಧಿಗಳು ರಾಜಾರೋಷವಾಗಿ ನೀರನ್ನು ಹರಿಯ ಬಿಡುತ್ತಿದೆ. ಈ ನಡೆ ಇದೇ ರೀತಿ ಮುಂದುವರೆದರೆ ಭೀಕರ ಬರದಿಂದ ನಲುಗುವುದಂತೂ ಸತ್ಯ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com