ಹೊಸ ಗೂಢಲಿಪೀಕರಣ ನೀತಿಯಿಂದ ವಾಟ್ಸ್ ಆ್ಯಪ್, ಸಾಮಾಜಿಕ ತಾಣಕ್ಕೆ ವಿನಾಯ್ತಿ

`ವಾಟ್ಸ್‍ಆ್ಯಪ್ ಸಂದೇಶಗಳ ಗೂಢಲಿಪೀಕರಣಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ, ವಾಟ್ಸ್‍ಆ್ಯಪ್, ಎಸ್ಎಂಎಸ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: `ವಾಟ್ಸ್‍ಆ್ಯಪ್ ಸಂದೇಶಗಳ ಗೂಢಲಿಪೀಕರಣಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ, ವಾಟ್ಸ್‍ಆ್ಯಪ್, ಎಸ್ಎಂಎಸ್ ಹಾಗೂ ಇ-ಮೇಲ್ ಸೇರಿದಂತೆ ಸಾಮಾಜಿಕ ತಾಣಗಳನ್ನು ರಾಷ್ಟ್ರೀಯ ಗೂಢಲಿಪೀಕರಣ ನೀತಿಯಿಂದ ವಿನಾಯ್ತಿ ನೀಡಲಾಗಿದೆ ಎಂದು ಹೇಳಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ವಿದ್ಯುನ್ಮಾನ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ, ವಾಟ್ಸ್‍ಆ್ಯಪ್, ಫೇಸ್ ಬುಕ್, ಟ್ವಿಟರ್ ಗಳನ್ನು ಹೊಸ ನ್ಯಾಷನಲ್ ಎನ್‍ಕ್ರಿಪ್ಶನ್ ಪಾಲಿಸಿ(ರಾಷ್ಟ್ರೀಯ ಗೂಢ ಲಿಪೀಕರಣ ನೀತಿ)ಯ ಕರಡುನಿಂದ ಹೊರಗಿಡಲಾಗಿದೆ ಎಂದು ಹೇಳಿದೆ.

ನಿನ್ನೆಯಷ್ಟೆ ವಾಟ್ಸ್‍ಆ್ಯಪ್‍ಗೆ ಬರುವ ಸಂದೇಶಗಳನ್ನು ಡಿಲೀಟ್ ಮಾಡುವುದು ಕಾನೂನು ಬಾಹಿರ. ಸಂದೇಶ ಸ್ವೀಕರಿಸಿದ 90 ದಿನಗಳವರೆಗೆ ನೀವದನ್ನು ಡಿಲೀಟ್ ಮಾಡುವಂತಿಲ್ಲ. ಯಾವುದೇ ಕ್ಷಣದಲ್ಲೂ ಪೊಲೀಸರು ಬಂದು ಕೇಳಿದರೆ, ನೀವು ಆ ಸಂದೇಶವನ್ನು ತೋರಿಸಬೇಕು ಎಂಬ ಪ್ರಸ್ತಾವನೆಯನ್ನು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ(ಡೈಟಿ) ಸರ್ಕಾರದ ಮುಂದಿಟ್ಟಿತ್ತು. ಅಲ್ಲದೆ ಈ ಬಗ್ಗೆ ಸಾರ್ವಜನಿಕರಿಂದ ಪ್ರತಿಕ್ರಿಯೆ ಕೋರಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com