ಶ್ರೀರಾಮ ಸ್ತ್ರೀ ಹಾಗೂ ಶೂದ್ರ ವಿರೋಧಿ: ಭಗವಾನ್‌ ವಿವಾದಾತ್ಮಕ ಹೇಳಿಕೆ

ಶ್ರೀರಾಮ ಸ್ತ್ರೀ ವಿರೋಧಿ ಹಾಗೂ ಶೂದ್ರ ವಿರೋಧಿ ಎಂದು ವಿಚಾರವಾದಿ ಪ್ರೊ. ಕೆ.ಎಸ್ ಭಗವಾನ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ...
ಕೆಎಸ್ ಭಗವಾನ್
ಕೆಎಸ್ ಭಗವಾನ್
ಬೆಂಗಳೂರು: ಶ್ರೀರಾಮ ಸ್ತ್ರೀ ವಿರೋಧಿ ಹಾಗೂ ಶೂದ್ರ ವಿರೋಧಿ ಎಂದು ವಿಚಾರವಾದಿ ಪ್ರೊ. ಕೆ.ಎಸ್ ಭಗವಾನ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 
ದೇವರಾಜು ಅರಸು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 'ನಮಗೆ ರಾಮರಾಜ್ಯ ಬೇಡ, ಭೀಮ ರಾಜ್ಯ ಬೇಕು. ಮನೆಯಲ್ಲಿ ರಾಮನ ಬದಲು ಅಂಬೇಡ್ಕರ್‌ ಫೋಟೋ ಇಡಿ ಎಂದು ಹೇಳಿದ್ದಾರೆ.
ರಾಮ ತುಂಬು ಗರ್ಭಿಣಿ  ಸೀತೆಯನ್ನು ಕಾಡಿಗೆ ಕಳುಹಿಸಿದ ಬಳಿಕ ಅವಳ ಬಗ್ಗೆ ಚಿಂತೆಯೇ  ಮಾಡಿಲ್ಲ. ರಾಮ ಹೆಂಗಸರಿಗೆ ಅಧಿಕಾರ ಕೊಟ್ಟಿಲ್ಲ. ರಾಮನ ಬಗ್ಗೆ ಮಾತನಾಡುವ ಯಾರೂ ವಾಲ್ಮೀಕಿ ಬರೆದ ರಾಮಾಯಣ ಓದಿಲ್ಲ. ಶಂಕರಾಚಾರ್ಯ ಹಾಗೂ ಮಧ್ವಾಚಾರ್ಯರು ಮನುಕುಲದ ವಿರೋಧಿಗಳು. ಇಬ್ಬರೂ ಕೇವಲ ಬ್ರಾಹ್ಮಣರ ಕುರಿತಾಗಿ ಮಾತ್ರ ಕಾಳಜಿ ಹೊಂದಿದ್ದರೆ ಹೊರತು ಮನುಕುಲದ ಕುರಿತಾಗಿ ಕಾಳಜಿ ಹೊಂದಿರಲಿಲ್ಲ' ಎಂದರು.
ವೈದಿಕ ಧರ್ಮದಲ್ಲಿ ಆಧ್ಯಾತ್ಮಿಕತೆ ಇರಲ್ಲಿಲ್ಲ. ಹೀಗಾಗಿ ವೈದಿಕರು ಬುದ್ಧನನ್ನು ದೂರವಿಟ್ಟಿದ್ದರು. ಬುದ್ಧ ಓರ್ವ ಅತ್ಯುತ್ತಮ ಮನಶಾಸ್ತ್ರಜ್ಞನಾಗಿದ್ದ. ಸ್ವಾಮೀ ವಿವೇಕಾನಂದರೂ ಬುದ್ದನನ್ನು ಹೊಗಳಿದ್ದಾರೆ ಎಂದರು. ಎಲ್ಲರೂ ಅಂತರ್ಜಾತಿ ವಿವಾಹಕ್ಕೆ ಮುಂದಾಗಬೇಕು.ಯಾರೂ ನಿಮ್ಮ ಮದುವೆಗೆ ಪೂಜಾರಿಗಳನ್ನು  ಕರೆಯಬೇಡಿ ಎಂದು ಕರೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com