ದೆಹಲಿ ರಸ್ತೆ ಅಪಘಾತದಲ್ಲಿ ತಮಿಳುನಾಡಿನ ಮೂವರ ಸಾವು

ರಸ್ತೆ ಬೇಧಕಕ್ಕೆ ಢಿಕ್ಕಿ ಹೊಡೆದ ಪರಿಣಾಮವಾಗಿ ದ್ವಿಚಕ್ರವಾಹನದ ಮೇಲೆ ಚಲಿಸುತ್ತಿದ್ದ ತಮಿಳುನಾಡಿನ ಮೂವರು ವ್ಯಕ್ತಿಗಳು ದೆಹಲಿಯ ದೌಲಾ ಖಾನ್ ಮೇಲುಸೇತುವೆ ಬಳಿ ಅಸುನೀಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ರಸ್ತೆ ಬೇಧಕಕ್ಕೆ ಢಿಕ್ಕಿ ಹೊಡೆದ ಪರಿಣಾಮವಾಗಿ ದ್ವಿಚಕ್ರವಾಹನದ ಮೇಲೆ ಚಲಿಸುತ್ತಿದ್ದ ತಮಿಳುನಾಡಿನ ಮೂವರು ವ್ಯಕ್ತಿಗಳು ದೆಹಲಿಯ ದೌಲಾ ಖಾನ್ ಮೇಲುಸೇತುವೆ ಬಳಿ ಅಸುನೀಗಿದ್ದಾರೆ.

ಇವರನ್ನು ಸುರೇಶ್(೨೬), ಎಂ ಸೆಂಥಿಲ್ (೨೫) ಮತ್ತು ಬಿ ಸ್ವಾಮಿ (೩೫) ಎಂದು ಗುರುತಿಸಲಾಗಿದೆ.

ಈ ಎಲ್ಲ ಮೂವರು ಮೋತಿ ಭಾಗ ನ ಜೆ ಜೆ ಕ್ಲಸ್ಟರ್ ನ ನಿವಾಸಿಗಳಾಗಿದ್ದು, ನರೈನಾದಿಂದ ಸಿನೆಮಾ ನೋಡಿ ಹಿಂದಿರುಗುತ್ತಿದ್ದರು ಎಂದು ತಿಳಿದುಬಂದಿದೆ. ಯಾರೊಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ ಎಂದು ತಿಳಿಸಿರುವ ಪೊಲೀಸರು, ಮೇಲು ಸೇತುವೆ ಬಳಿ ತಪ್ಪು ದಿಕ್ಕಿನಿಂದ ಯು-ಟರ್ನ್ ತೆಗೆದುಕೊಳ್ಳುವಾಗ ಡಿವೈಡರ್ ಗೆ ಢಿಕ್ಕಿ ಹೊಡೆದಿರುವುದು ಈ ಅಪಘಾತಕ್ಕೆ ಕಾರಣ ಎಂದು ತಿಳಿಸಿದ್ದಾರೆ.

"ದ್ವಿಚಕ್ರ ವಾಹನಕ್ಕೆ ಮುಂಭಾಗ ಮಾತ್ರ ಹಾನಿಯಾಗಿದ್ದು, ಇದು ವೇಗದ ಚಾಲನೆಯನ್ನು ಸೂಚಿಸುತ್ತದೆ. ಮೃತಪಟ್ಟವರ ಕುಟುಂಬ ವರ್ಗಕ್ಕೆ ಮಾಹಿತಿ ನೀಡಲಾಗಿದೆ ಹಾಗು ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹಗಳನ್ನು ಕಳುಹಿಸಲಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಧ್ಯರಾತ್ರಿ ಸುಮಾರು ೨:೫೦ ಕ್ಕೆ ಹತ್ತಿರದ ನಿವಾಸಿಗಳು ಪೊಲೀಸರಿಗೆ ಕರೆ ಮಾಡಿದ್ದು, ಎಲ್ಲರನ್ನು ಎ ಐ ಐ ಎಂ ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ, ಅಲ್ಲಿ ಅವರು ಮೃತಪಟ್ಟಿರುವುದನ್ನು ಘೋಷಿಸಲಾಗಿದೆ.

ಸೆಂಥಿಲ್ ಗಾಡಿ ಚಲಾಯಿಸುತ್ತಿದ್ದು, ಬೈಕ್ ಡಿವೈಡರ್ ಗೆ ಗುದ್ದಿದಾಗ, ಸೆಂಥಿಲ್ ಅಲ್ಲಿದ್ದ ಕಂಬಿಗೆ ತಲೆ ಹೊಡೆದುಕೊಂಡಿದ್ದಾರೆ. ಸುರೇಶ್ ಅವರಿಗೂ ತಲೆಗೆ ಪೆಟ್ಟಾಗಿದ್ದು, ಸ್ವಾಮಿ ಬೆನ್ನು ಮೂಳೆ ಮತ್ತು ಕತ್ತಿನ ಗಾಯದಿಂದ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮೂವರೂ ತಮಿಳುನಾಡಿನ ಸೇಲಂನವರಾಗಿದ್ದು, ಎಲ್ಲರೂ ತಮ್ಮ ಕುಟುಂಬಗಳ ಜೊತೆಗೆ ದೆಹಲಿಯಲ್ಲಿ ವಾಸವಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com