'ಮಾಧ್ಯಮ ಸ್ವಾತಂತ್ರ್ಯ' ಜಾಗತಿಕ ಪಟ್ಟಿ; ಭಾರತಕ್ಕೆ ೧೩೩ನೇ ಸ್ಥಾನ!

ಅಂತರಾಷ್ಟ್ರೀಯ ಕಣ್ಗಾವಲು ಸಂಸ್ಥೆಯೊಂದು ಇತ್ತೀಚಿಗೆ ಬಿಡುಗಡೆ ಮಾಡಿರುವ ಮಾಧ್ಯಮ ಅಭಿವ್ಯಕ್ತಿ ಸ್ವಾತಂತ್ರ್ಯ ೧೮೦ ದೇಶಗಳ ಪಟ್ಟಿಯಲ್ಲಿ ೧೩೩ನೇ ಸ್ಥಾನ ಪಡೆದಿರುವ ಭಾರತ ಪಾತಾಳದಲ್ಲಿದ್ದು,
'ಮಾಧ್ಯಮ ಸ್ವಾತಂತ್ರ್ಯ' ಜಾಗತಿಕ ಪಟ್ಟಿ; ಭಾರತಕ್ಕೆ ೧೩೩ನೇ ಸ್ಥಾನ!
'ಮಾಧ್ಯಮ ಸ್ವಾತಂತ್ರ್ಯ' ಜಾಗತಿಕ ಪಟ್ಟಿ; ಭಾರತಕ್ಕೆ ೧೩೩ನೇ ಸ್ಥಾನ!
Updated on

ವಾಶಿಂಗ್ಟನ್: ಅಂತರಾಷ್ಟ್ರೀಯ ಕಣ್ಗಾವಲು ಸಂಸ್ಥೆಯೊಂದು ಇತ್ತೀಚಿಗೆ ಬಿಡುಗಡೆ ಮಾಡಿರುವ ಮಾಧ್ಯಮ ಅಭಿವ್ಯಕ್ತಿ ಸ್ವಾತಂತ್ರ್ಯ ೧೮೦ ದೇಶಗಳ ಪಟ್ಟಿಯಲ್ಲಿ ೧೩೩ನೇ ಸ್ಥಾನ ಪಡೆದಿರುವ ಭಾರತ ಪಾತಾಳದಲ್ಲಿದ್ದು, ಮಾಧ್ಯಮಗಳ ವಿರುದ್ಧ ಇರುವ ಬೆದರಿಕೆಗೆ ಪ್ರಧಾನಿ ನರೇಂದ್ರ ಮೋದಿ ಅನಾಸಕ್ತಿ ತಳೆದಿದ್ದಾರೆ ಎಂದು ದೂರಿದ್ದಾರೆ.

ಪ್ಯಾರಿಸ್ ಮೂಲದ 'ರಿಪೋರ್ಟರ್ ವಿತೌಟ್ ಬಾರ್ಡರ್ಸ್' (ಗಡಿಯಿಲ್ಲದ ವರದಿಗಾರರು) ನೀಡಿರುವ ಈ ವರದಿಯಲ್ಲಿ, ವಿಶ್ವದಲ್ಲಿ ಮಾಧ್ಯಮದ ಸ್ವಾತಂತ್ರ ಕಳವಳಕಾರಿಯಾಗಿ ಪಾತಾಳ ಹಿಡಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದು, "ಸರ್ಕಾರಗಳು, ಸಿದ್ಧಾಂತಗಳು ಮತ್ತು ಖಾಸಗಿ ಒಡೆತನದ ಸಂಸ್ಥೆಗಳ" ಒತ್ತಡದಿಂದ ಹೀಗಾಗಿದೆ ಎಂದಿದ್ದಾರೆ.

ಭಾರತದ ಬಗ್ಗೆ ೨೦೧೬ ರ ಈ ವರದಿ, ದೇಶದಲ್ಲಿ ಬಲಪಂಥೀಯ ತೀವ್ರಗಾಮಿತ್ವ ಹೆಚ್ಚಳವಾಗಿದೆ ಎಂದಿದ್ದು "ಸುಲಭವಾಗಿ ಕೆರಳುವ ವಿವಿಧ ಧಾರ್ಮಿಕ ಸಂಘಟನೆಗಳಿಂದ" ಪತ್ರಕರರ ಮತ್ತು ಬ್ಲಾಗಿಗರ ಮೇಲೆ ಹಲ್ಲೆಗಳಾಗಿವೆ ಎಂದು ಗುರುತಿಸಿದೆ.

"ಇದೇ ಸಮಯದಲ್ಲಿ ಸರ್ಕಾರ ಅತಿ ಸೂಕ್ಷ್ಮ ಎಂದು ಕಾಣುವ ಕಾಶ್ಮೀರದಿಂದ ವರದಿಗಾರರಿಗೆ ವರದಿ ಮಾಡುವುದು ಕಷ್ಟವಾಗಿದೆ" ಎಂದು ಕೂಡ ವರದಿ ತಿಳಿಸಿದೆ.

"ಈ ತೊಂದರೆಗಳ ಬಗ್ಗೆ, ಬೆದರಿಕೆಗಳ ಬಗ್ಗೆ ಮೋದಿ ಅನಾಸಕ್ತಿ ತೋರಿದ್ದಾರೆ ಮತ್ತು ಪತ್ರಕರ್ತರನ್ನು ರಕ್ಷಿಸುವ ಯಾವುದೇ ಕಾರ್ಯರೂಪು ಇಲ್ಲ. ಬದಲಾಗಿ ಮಾಧ್ಯವನ್ನು ನಿಯಂತ್ರಿಸುವ ಮಹದಾಸೆ ಹೆಚ್ಚುತ್ತಿದೆ ಮತ್ತು ಸರ್ಕಾರ ಅಧಿಕಾರಿಗಳ ನಿಯಂತ್ರಣದಲ್ಲಿರುವ ಪತ್ರಿಕೋದ್ಯಮ ವಿಶ್ವವಿದ್ಯಾಲಯ ಸ್ಥಾಪಿಸುವ ಬಗ್ಗೆ ಮೋದಿ ಚಿಂತಿಸುತ್ತಿದ್ದಾರೆ" ಎಂದು ಕೂಡ ವರದಿ ಹೇಳಿದೆ.

ಪಟ್ಟಿಯಲ್ಲಿ ಕೆಳಗಿರುವ ಇತರ ದೇಶಗಳಿಗೆ ಹೋಲಿಸಿದರೆ ಇಲ್ಲಿದ ಮಾಧ್ಯಮ ಸಕ್ರಿಯವಾಗಿದ್ದು ಪ್ರಜಾಪ್ರಭುತ್ವದ ಕಣ್ಗಾವಲಾಗುವ ಸಾಧ್ಯತೆ ಇದೆ ಆದರೆ ಪರಿಸ್ಥಿತಿ ಬಿಗಡಾಯಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ.

ಬಹುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಕರನ್ನು ರಕ್ಷಿಸುವ ರೂಪುರೇಶೆ ಇವುಗಳ ಆಧಾರದ ಮೇಲೆ ೧೮೦ ದೇಶಗಳ ಪಟ್ಟಿಯನ್ನು ನಿರ್ಧರಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com