ಬೆಂಗಳೂರು ಕುಡುಕರು ತುಂಬಾ ಡಿಸೆಂಟ್, ಗಲಾಟೆ ಮಾಡಲ್ಲ: ಸಚಿವ ಮೇಟಿ

ಕುಡುಕರನ್ನು ಎರಡು ವರ್ಗಗಳಾಗಿ ವಿಂಗಡಿಸಿರುವ ಅಬಕಾರಿ ಸಚಿವ ಎಚ್ ವೈ ಮೇಟಿ ಅವರು, ಬೆಂಗಳೂರು ಕುಡುಕರು ಸುಕ್ಷಿತರಾಗಿದ್ದು, ತುಂಬಾ ಡಿಸೆಂಟ್ ಮತ್ತು...
ಎಚ್.ವೈ.ಮೇಟಿ
ಎಚ್.ವೈ.ಮೇಟಿ
Updated on
ಬೆಂಗಳೂರು: ಕುಡುಕರನ್ನು ಎರಡು ವರ್ಗಗಳಾಗಿ ವಿಂಗಡಿಸಿರುವ ಅಬಕಾರಿ ಸಚಿವ ಎಚ್ ವೈ ಮೇಟಿ ಅವರು, ಬೆಂಗಳೂರು ಕುಡುಕರು ಸುಕ್ಷಿತರಾಗಿದ್ದು, ತುಂಬಾ ಡಿಸೆಂಟ್ ಮತ್ತು ಅವರು ಗಲಾಟೆ ಮಾಡಿ ಯಾರಿಗೂ ತೊಂದರೆ ಕೊಡಲ್ಲ ಎಂದು ಮಂಗಳವಾರ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮೇಟಿ, ಮಧ್ಯ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಬೆಂಗಳೂರಿನ ಜನ ಒತ್ತಡದಲ್ಲಿರುತ್ತಾರೆ. ಹಾಗಾಗಿ ಬೆಂಗಳೂರಿನಲ್ಲಿ ರಾತ್ರಿ ಒಂದು ಗಂಟೆಯವರೆಗೂ ಮಧ್ಯದ ಅಂಗಡಿ ಓಪನ್ ಮಾಡಲು ಅನುಮತಿ ನೀಡಲಾಗಿದೆ. ಅಲ್ಲದೆ ಅವರು ಸುಶಿಕ್ಷಿತರಾಗಿದ್ದು, ಗಲಾಟೆ ಮಾಡಿ ಯಾರಿಗೂ ತೊಂದರೆ ಕೊಡುವುದಿಲ್ಲ. ಆದರೆ ಎರಡನೇ ವರ್ಗಕ್ಕೆ ಸೇರಿದ ಹಳ್ಳಿಯ ಕುಡಿಕರು ಕುಡಿದು, ಹಾದಿ ಬೀದಿಯಲ್ಲಿ ಬೀಳುತ್ತಾರೆ ಎಂದು ವಿವಾತಾದ್ಮಕ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ರಾಜ್ಯದ ಇತರೆ ಜಿಲ್ಲೆಯಲ್ಲಿ ರಾತ್ರಿ ಒಂದು ಗಂಟೆವರೆಗೂ ಮಧ್ಯದ ಅಂಗಡಿ ಓಪನ್ ಮಾಡಲು ಅವಕಾಶ ನೀಡಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಹೊಸ ಬಾರ್ ಲೈಸನ್ಸ್ ನೀಡುವ ಹಾಗೂ ಪಾನ ನಿಷೇಧ ಜಾರಿ ಮಾಡುವ ಕುರಿತು ಯಾವುದೇ ಪ್ರಸ್ತಾವನೆ ಇಲ್ಲ ಎಂದು ತಿಳಿಸಿದರು.
ಮದ್ಯದ ಅಂಗಡಿಯಲ್ಲಿ ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಮಧ್ಯ ಮಾರಾಟ ಮಾಡಲಾಗುತ್ತಿದೆ. ಹೆಚ್ಚಿನ ದರದಲ್ಲಿ ಮದ್ಯ ಮಾರಾಟ ಮಾಡುವುದನ್ನು ತಪ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಮದ್ಯದ ಅಂಗಡಿಯಲ್ಲಿ ದರ ಪಟ್ಟಿ ಕಡ್ಡಾಯಗೊಳಿಸಲಾಗುತ್ತಿದೆ ಎಂದು ಹೇಳಿದರು.
ಅಬಕಾರಿ ಅಧಿಕಾರಿಗಳಿಗೆ ಯಾವುದೇ ಟಾರ್ಗೆಟ್ ನೀಡುವ ಪ್ರಶ್ನೆಯೇ ಇಲ್ಲ. ಅಂದಾಜು ಲೆಕ್ಕಚಾರದ ಆಧಾರದ ಮೇಲೆ ಅವರಿಗೆ ಟಾರ್ಗೆಟ್ ನೀಡಲಾಗುತ್ತದೆ ಎಂದು ಎಚ್‌.ವೈ.ಮೇಟಿ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com