ಡಿಎಚ್ ಶಂಕರಮೂರ್ತಿ
ಪ್ರಧಾನ ಸುದ್ದಿ
ಸಭಾಪತಿ ಡಿಎಚ್ ಶಂಕರಮೂರ್ತಿಗೆ ರಾಜ್ಯಪಾಲ ಹುದ್ದೆ?
ರಾಜ್ಯ ವಿಧಾನಪರಿಷತ್ ಸಭಾಪತಿ ಡಿ.ಎಚ್ ಶಂಕರಮೂರ್ತಿ ಅವರಿಗೆ ರಾಜ್ಯಪಾಲ ಹುದ್ದೆ ಸಿಗುವ ಸಾಧ್ಯತೆ ಖಚಿತವಾಗಿದೆ...
ಬೆಂಗಳೂರು: ರಾಜ್ಯ ವಿಧಾನಪರಿಷತ್ ಸಭಾಪತಿ ಡಿ.ಎಚ್ ಶಂಕರಮೂರ್ತಿ ಅವರಿಗೆ ರಾಜ್ಯಪಾಲ ಹುದ್ದೆ ಸಿಗುವ ಸಾಧ್ಯತೆ ಖಚಿತವಾಗಿದೆ.
ತಮಿಳುನಾಡು ಅಥವಾ ತೆಲಂಗಾಣ ರಾಜ್ಯಕ್ಕೆ ಶಂಕರಮೂರ್ತಿ ಅವರನ್ನು ರಾಜ್ಯಪಾಲರಾಗಿ ನೇಮಿಸಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ. ದೆಹಲಿಗೆ ತೆರಳಿದ್ದ ಶಂಕರಮೂರ್ತಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನು ಭೇಟಿ ಮಾಡಿ ರಾಜ್ಯಪಾಲ ಹುದ್ದೆಯ ಬೇಡಿಕೆ ಇಟ್ಟಿದ್ದರು. ಇದಕ್ಕೆ ಹೈಕಮಾಂಡ್ ಸಮ್ಮತಿಸಿದೆ ಎನ್ನಲಾಗಿದೆ.
ತಮಿಳುನಾಡಿನ ರಾಜ್ಯಪಾಲರಾಗಿರುವ ಕೆ ರೋಸಯ್ಯ ಅವರು ಈ ತಿಂಗಳ 31ರಂದು ನಿವೃತ್ತಿಯಾಗಲಿದ್ದು, ಶಂಕರಮೂರ್ತಿ ಅವರನ್ನು ತಮಿಳುನಾಡಿನ ರಾಜ್ಯಪಾಲರಾಗಿ ಇಲ್ಲವೆ ಹೊಸದಾಗಿ ರಚನೆಯಾಗಿರುವ ತೆಲಂಗಾಣ ರಾಜ್ಯದ ರಾಜ್ಯಪಾಲರಾಗಿ ನೇಮಕ ಮಾಡುವ ಸಾಧ್ಯತೆಗಳು ಹೆಚ್ಚಿವೆ ಎಂದು ಪಕ್ಷದ ಮೂಲಗಳು ಹೇಳಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ