ಪಾಕ್ ಪರ ಹೇಳಿಕೆಯಲ್ಲಿ ತಪ್ಪಿಲ್ಲ: ರಮ್ಯಾ ಬೆನ್ನಿಗೆ ನಿಂತ ದಿನೇಶ್ ಗುಂಡೂರಾವ್

ಪಾಕಿಸ್ತಾನ ಪರವಾಗಿ ರಮ್ಯಾ ಅವರು ನೀಡಿರುವ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು...
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್
Updated on

ಬೆಂಗಳೂರು: ಪಾಕಿಸ್ತಾನ ಪರವಾಗಿ ರಮ್ಯಾ ಅವರು ನೀಡಿರುವ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮಂಗಳವಾರ ಹೇಳಿದ್ದಾರೆ.

ಪಾಕಿಸ್ತಾನ ಪರವಾಗಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಅವರು, ಬಿಜೆಪಿಗೆ ಸೇರಿದ ಅನಧಿಕೃತ ಜನರು ರಾಷ್ಟ್ರೀಯತೆಯನ್ನಿಡಿದು ರಾಜಕೀಯವಾಡಲು ಯತ್ನಿಸುತ್ತಿದ್ದಾರೆ. ಇದು ನಿಜಕ್ಕೂ ದುರಾದೃಷ್ಟಕರವಾದದ್ದು. ರಮ್ಯಾ ಅವರ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ.

ಕೆಲಸದ ನಿಮಿತ್ತ ಪಾಕಿಸ್ತಾನಕ್ಕೆ ಹೋದಾಗ ಅಲ್ಲಿನ ಜನರು ರಮ್ಯಾ ಅವರೊಂದಿಗೆ ಉತ್ತಮವಾಗಿ ನಡೆದುಕೊಂಡಿದ್ದಾರೆ. ರಮ್ಯಾ ಅವರು ಪಾಕಿಸ್ತಾನಕ್ಕೆ ಹೋಗಿದ್ದರ ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ ಅಷ್ಟೇ. ಪಾಕಿಸ್ತಾನ ಜೊತೆಗೆ ನಾವು ಕ್ರಿಕೆಟ್ ಆಡುತ್ತೇವೆ. ಎರಡೂ ದೇಶಗಳ ಸಂಸ್ಕೃತಿ ವಿನಿಮಯ ಮಾಡಿಕೊಂಡರೆ ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ದ್ವಿಮುಖ ಧೋರಣೆ ಕುರಿತಂತೆ ಬಿಜೆಪಿಗೆ ಕೆಲ ಪ್ರಶ್ನೆಗಳನ್ನು ಹಾಕಿರುವ ಅವರು, ಅಡ್ವಾಣಿಯವರು ಪಾಕಿಸ್ತಾನಕ್ಕೆ ಹೋಗಿ ಬಂದಿದ್ದಾರೆ, ಅವರು ರಾಷ್ಟ್ರೀಯವಾದಿಗಳಾಗಲು ಹೇಗೆ ಸಾಧ್ಯ? ಇದೀಗ ರಮ್ಯಾ ಅವರು ಪಾಕಿಸ್ತಾನದವರು ಒಳ್ಳೆಯವರು ಎಂದಾಕ್ಷಣ ಅವರನ್ನು ರಾಷ್ಟ್ರದ್ರೋಹಿ ಎಂದು ಹೇಳುತ್ತಿದ್ದಾರೆ.

ಯಾರು ಅವರ ಭಾಷೆಯಲ್ಲಿ ಮಾತನಾಡುವುದಿಲ್ಲವೋ ಅಂತಹವರ ಮೇಲೆ ರಾಷ್ಟ್ರ ವಿರೋಧಿ ಬಣ್ಣ ಬಳೆಯಲು ಬಿಜೆಪಿ ಯತ್ನಿಸುತ್ತಿದೆ. ಈ ರೀತಿಯ ಬೆಳವಣಿಗೆಗಳು ದೇಶದ ಜನತೆ ಉಸಿರು ಹಿಡಿದು ಜೀವನ ನಡೆಯುವಂತೆ ಮಾಡುತ್ತದೆ.

ಕಳೆದ ಡಿಸೆಂಬರ್ ತಿಂಗಳಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಾಕಿಸ್ತಾನಕ್ಕೆ ಹೋಗಿ ನವಾಜ್ ಶರೀಫ್ ಅವರ ಹುಟ್ಟುಹಬ್ಬವನ್ನು ಆಚರಿಸಿ ಬಂದಿದ್ದರು. ಆದರೆ, ಮೋದಿ ಅವರನ್ನು ದೇಶ ವಿರೋಧಿ ಎಂದು ಯಾರೊಬ್ಬರೂ ಕರೆಯಲಿಲ್ಲ. ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಲಿಲ್ಲ. ರಮ್ಯಾ ಕುರಿತು ತಮ್ಮ ಧೋರಣೆ ಸರಿ ಎಂದಿದ್ದೇ ಆದರೆ, ಮೋದಿಯವನ್ನು ದೇಶವಿರೋಧಿ ಎಂದು ಕರೆಯಬೇಕು. ಅವರ ವಿರುದ್ಧವೂ ದೇಶ ದ್ರೋಹ ಪ್ರಕರಣ ದಾಖಲಾಗಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com