ಸೋರಿಕೆ ಜಗಜ್ಜಾಹಿರು ಮಾಡಿದವನಿಂದ ಆಸಿಸ್ ಸರ್ಕಾರಕ್ಕೆ "ಸ್ಕಾರ್ಪಿನ್" ದಾಖಲೆ ಹಸ್ತಾಂತರ!

ಭಾರತ ಸರ್ಕಾರವನ್ನೇ ಬೆಚ್ಚಿ ಬೀಳಿಸಿರುವ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆ ಮಾಹಿತಿ ಸೋರಿಕೆಯಾಗಿದೆ ಎಂದು ಇಡೀ ಜಗತ್ತಿಗೆ ತಿಳಿಸಿದ ಮಾಹಿತಿದಾರ ಇದೇ ಸೋಮವಾರ ಸ್ಕಾರ್ಪಿನ್ ದಾಖಲೆಗಳ್ಳುಳ್ಳ ಸಿಡಿಯನ್ನು ಆಸಿಸ್ ಸರ್ಕಾರಕ್ಕೆ ಹಸ್ತಾಂತರಿಸಲಿದ್ದಾನೆ.
ಸ್ಕಾರ್ಪಿನ್ ಜಲಾಂತರ್ಗಾಮಿ (ಸಂಗ್ರಹ ಚಿತ್ರ)
ಸ್ಕಾರ್ಪಿನ್ ಜಲಾಂತರ್ಗಾಮಿ (ಸಂಗ್ರಹ ಚಿತ್ರ)

ಸಿಡ್ನಿ: ಭಾರತ ಸರ್ಕಾರವನ್ನೇ ಬೆಚ್ಚಿ ಬೀಳಿಸಿರುವ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆ ಮಾಹಿತಿ ಸೋರಿಕೆಯಾಗಿದೆ ಎಂದು ಇಡೀ ಜಗತ್ತಿಗೆ ತಿಳಿಸಿದ ಮಾಹಿತಿದಾರ ಇದೇ ಸೋಮವಾರ  ಸ್ಕಾರ್ಪಿನ್ ದಾಖಲೆಗಳ್ಳುಳ್ಳ ಸಿಡಿಯನ್ನು ಆಸಿಸ್ ಸರ್ಕಾರಕ್ಕೆ ಹಸ್ತಾಂತರಿಸಲಿದ್ದಾನೆ.

ಸ್ಕ್ರಾಪಿನ್ ದಾಖಲೆ ಕುರಿತು ವರದಿ ಪ್ರಸಾರ ಮಾಡಿದ್ದ ದಿ ಆಸ್ಟ್ರೇಲಿಯನ್ ಪತ್ರಿಕೆ ಈ ಬಗ್ಗೆ ವರದಿ ಮಾಡಿದ್ದು, ಹೆಸರು ಹೇಳಲಿಚ್ಛಿಸದ ಮಾಹಿತಿದಾರ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆ ಕುರಿಂತೆ  ತನ್ನ ಬಳಿ ಇರುವ ಅಷ್ಟೂ ದಾಖಲೆಗಳ ಸಿಡಿಯನ್ನು ಸೋಮವಾರ ಆಸ್ಟ್ರೇಲಿಯಾ ಸರ್ಕಾರಕ್ಕೆ ನೀಡಲಿದ್ದಾನೆ ಎಂದು ಪತ್ರಿಕೆ ಹೇಳಿದೆ. ಪ್ರಮುಖ ವಿಚಾರವೆಂದರೆ ಆಸ್ಟ್ರೇಲಿಯಾದ ತನಿಖಾ  ಸಂಸ್ಥೆಗಳಿಗೂ ಈ ಮಾಹಿತಿದಾರ ಅಪರಿಚಿತನಾಗಿದ್ದು, ಭಾರತ ಮತ್ತು ಜಲಾಂತರ್ಗಾಮಿ ನೌಕೆ ನಿರ್ಮಿಸುತ್ತಿರುವ ಫ್ರಾನ್ ದೇಶಕ್ಕೂ ಕೂಡ ಈತನ ಬಗ್ಗೆ ಮಾಹಿತಿ ಇಲ್ಲ ಎಂದು ಪತ್ರಿಕೆ ತನ್ನ  ವರದಿಯಲ್ಲಿ ಹೇಳಿದೆ.

ಪ್ರಸ್ತುತ ಭಾರತದೊಂದಿಗೆ ಜಲಾಂತರ್ಗಾಮಿ ನೌಕೆ ನಿರ್ಮಾಣದಲ್ಲಿ ಸಹಯೋಗ ಹೊಂದಿರುವ ಆಸ್ಟ್ರೇಲಿಯಾದ ಭವಿಷ್ಯದ ಜಲಾಂತರ್ಗಾಮಿ ಸಹಯೋಗಿ ದೇಶ ಫ್ರಾನ್ಸ್ ಗೆ ದಾಖಲೆಗಳ ಗೌಪ್ಯತೆ  ರಕ್ಷಿಸುವ ಸಾಮರ್ಥ್ಯವಿಲ್ಲ ಎಂದು ಹೇಳುವುದು ಮಾಹಿತಿದಾರನ ಉದ್ದೇಶವಾಗಿದ್ದು, ಇದೇ ಕಾರಣಕ್ಕೆ ಭಾರತದ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆಯ ಮಾಹಿತಿ ಸೋರಿಕೆಯನ್ನು ಬಹಿರಂಗ  ಪಡಿಸಿದ್ದಾನೆ ಎಂದು ಪತ್ರಿಕೆ ವರದಿ ಮಾಡಿದೆ.

ಅಂತೆಯೇ ಪ್ರಸ್ತುತ ಮಾಹಿತಿ ಸೋರಿಕೆ ಸಂಬಂಧ ವರದಿ ನೀಡಿರುವ ಮಾಹಿತಿದಾರ ಭಾರತ ದೇಶದ ನಿದರ್ಶನದಿಂದಾಗಿಯಾದರೂ ಆಸ್ಟ್ರೇಲಿಯಾ ಫ್ರಾನ್ಸ್ ನಿಂದ ದೂರವುಳಿಯಬೇಕು ಎಂದು  ಆಶಿಸಿದ್ದಾನೆ. ಅಲ್ಲದೆ ತನ್ನ ಭವಿಷ್ಯದ ಜಲಂತರ್ಗಾಮಿ ನಿರ್ಮಾಣ ಯೋಜನೆಯನ್ನು ಬೇರೊಂದು ಹಾಗೂ ಗೌಪ್ಯತೆಯನ್ನು ಸಮರ್ಥವಾಗಿ ರಕ್ಷಿಸಬಲ್ಲ ರಾಷ್ಟ್ರದೊಂದಿಗೆ ಮಾಡಿಕೊಳ್ಳಬೇಕು ಅಥವಾ   ಡಿಸಿಎನ್ಎಸ್ ಸಂಸ್ಥೆ ತನ್ನ ದಾಖಲೆ ಗೌಪ್ಯತೆ ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾನೆ.

ಭಾರತದಂತೆಯೇ ಆಸ್ಟ್ರೇಲಿಯಾ ಸರ್ಕಾರ ಕೂಡ ಪ್ರಸ್ತುತ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆ ನಿರ್ಮಾಣ ಮಾಡುತ್ತಿರುವ ಫ್ರಾನ್ಸ್ ಮೂಲದ ಡಿಸಿಎನ್ ಎಸ್ ಸಂಸ್ಥೆಯೊಂದಿಗೆ ಜಲಾಂತರ್ಗಾಮಿ  ನಿರ್ಮಾಣಕ್ಕಾಗಿ 50 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಯೋಜನೆ ಮುಂದಿನ ವರ್ಷದಿಂದ ಆರಂಭವಾಗುವ ಸಾಧ್ಯತೆಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com