2015ರಲ್ಲೇ ದೇಶದಲ್ಲಿ ಅತಿ ಹೆಚ್ಚು ಉಗ್ರ ದಾಳಿ: ವರದಿ

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿಗೆ ಕೇರಳದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಕೇರಳವನ್ನು ಸೋಮಾಲಿಯಾಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿಗೆ ಕೇರಳದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಕೇರಳವನ್ನು ಸೋಮಾಲಿಯಾಗೆ ಹೋಲಿಕೆ ಮಾಡಿದ್ದರು. ಇದಕ್ಕೆ ಮಲೆಯಾಳಿಗಳು ತೀವ್ರ ವಿರೋಧ ವ್ಯಕ್ತಪಡಿಸಿ, ಟ್ವಿಟರ್'ನಲ್ಲಿ #PoMoneModi (ನರಸಿಂಹಮ್ ಸಿನೆಮಾದ ಪೋ ಮೋಣೆ ದಿನೇಶ ಮಾದರಿಯಲ್ಲಿ) ಅಭಿಯಾನವನ್ನೇ ನಡೆಸಿ, ವಿಡಂಬನಾತ್ಮಕವಾಗಿ ಪ್ರತಿಕ್ರಿಯಿಸಿದ್ದರು. ಇದಕ್ಕೆ ಕೇರಳಿಗರು ಸಾವಿರಾರು ಟ್ವೀಟ್ - ರಿಟ್ವೀಟ್ 'ಗಳು ಪೋ ಮೋನೆ ಮೋದಿ ಅನ್ನುತ್ತ ಮೋದಿಯ ಮಾತುಗಳಿಗೆ ತಮ್ಮ ತಿರಸ್ಕಾರ ತೋರಿದ್ದರು.
ಇದೀಗ ಅರ್ಥಶಾಸ್ತ್ರ ಮತ್ತು ಶಾಂತಿ ಸಂಸ್ಥೆ ಪ್ರಕಟಿಸಿರುವ ಜಾಗತಿಕ ಭಯೋತ್ಪಾದನೆ ಸೂಚ್ಯಂಕದಲ್ಲಿ ಉಗ್ರ ದಾಳಿ ವಿಚಾರದಲ್ಲಿ ಸೋಮಾಲಿಯಾ ಮತ್ತು ಭಾರತಕ್ಕೆ ಒಂದು ಸಣ್ಣ ವ್ಯತ್ಯಾಸವಿರುವುದು ಬಹಿರಂಗವಾಗಿದೆ. ಅದು ಏನೆಂದರೆ, ಉಗ್ರ ಪಟ್ಟಿಯಲ್ಲಿ ಭಾರತ 7,484 ಅಂಕಗಳನ್ನು ಪಡೆದು 8ನೇ ಸ್ಥಾನದಲ್ಲಿದ್ದರೆ, ಸೋಮಾಲಿಯಾ 7,548 ಅಂಕಗಳನ್ನು ಪಡೆದು 7ನೇ ಸ್ಥಾನದಲ್ಲಿದೆ.
ಆದಾಗ್ಯೂ, ಈ ಹಿಂದಿನ ನಾಲ್ಕು ಅಥವಾ ಐದನೇ  ಜಾಗತಿಕ ಭಯೋತ್ಪಾದನೆ ಸೂಚ್ಯಂಕವನ್ನು ಗಮನಿಸಿದರೆ, ಭಾರತ ತಕ್ಕ ಮಟ್ಟಿನ ಸುಧಾರಣೆ ಕಂಡಿದೆ. ಆದರೆ, 2000ದಿಂದ 2015ರವರೆಗೆ ಹೋಲಿಕೆ ಮಾಡಿದರೆ, 2015ರಲ್ಲೇ ಅತಿ ಹೆಚ್ಚು ಉಗ್ರ ದಾಳಿಗಳು ನಡೆದಿವೆ ಎಂದು ಹೇಳಿದೆ. ಅಲ್ಲದೆ 2000ದಿಂದೀಚೆಗೆ ನಡೆದ ದಾಳಿಗಳಲ್ಲಿ ಎರಡನೇ ಅತಿ ಕಡಿಮೆ ಸಾವು ಸಂಭವಿಸಿವೆ ಮತ್ತು ಶೇ.80ರಷ್ಟು ದಾಳಿಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಸೂಚ್ಯಂಕ ತಿಳಿಸಿದೆ.
ಇದೇ ವೇಳೆ ಭಾರತದಲ್ಲಿ ನಡೆಯುವ ಭಯೋತ್ಪಾದನೆಯ ಸ್ವರೂಪ ವಿಭಿನ್ನ ಎಂದಿರುವ ಸೂಚ್ಯಂಕ, ಜನರನ್ನು ಹತ್ಯೆ ಮಾಡುವ ಬದಲು ರಾಜಕೀಯ ಮಾನ್ಯತೆಗಾಗಿ ಹೆಚ್ಚು ದಾಳಿ ನಡೆಯುತ್ತಿವೆ. ಉದಾಹರಣೆಗೆ, ಪೀಪಲ್ಸ್ ಲಿಬರೇಷನ್ ಆರ್ಮಿ ಸುಮಾರು 10 ದಾಳಿಗಳಲ್ಲಿ ನಡೆಸಿದೆ. ಆದರೆ ಈ ದಾಳಿಗಳಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ವಿವರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com