ಸಿಬಿಐ ಅಧಿಕಾರಿಗಳೆಂದು ಸುಳ್ಳು ಹೇಳಿ ಮುಥೂಟ್ ಫೈನಾನ್ಸ್ ನಿಂದ ೪೬ ಕೆಜಿ ಚಿನ್ನ ಲೂಟಿ

ಸಿಬಿಐ ಅಧಿಕಾರಿಗಳು ಎಂದು ಹೇಳಿಕೊಂಡು ಬಂದ ನಾಲ್ವರು, ಹೈದರಾಬಾದ್ ಮುಥೂಟ್ ಫೈನಾನ್ಸ್ ನಿಂದ ಬುಧವಾರ ೪೬ ಕೆಜಿ ಚಿನ್ನ ಲೂಟಿ ಮಾಡಿದ್ದಾರೆ ಎಂದು ನಗರ ಪೊಲೀಸರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಹೈದರಾಬಾದ್: ಸಿಬಿಐ ಅಧಿಕಾರಿಗಳು ಎಂದು ಹೇಳಿಕೊಂಡು ಬಂದ ನಾಲ್ವರು, ಹೈದರಾಬಾದ್ ಮುಥೂಟ್ ಫೈನಾನ್ಸ್ ನಿಂದ ಬುಧವಾರ ೪೬ ಕೆಜಿ ಚಿನ್ನ ಲೂಟಿ ಮಾಡಿದ್ದಾರೆ ಎಂದು ನಗರ ಪೊಲೀಸರು ಹೇಳಿದ್ದಾರೆ. 
ರಾಮಚಂದ್ರಪುರಮ್ ಮುಥೂಟ್ ಫೈನಾನ್ಸ್ ಕಚೇರಿಯಲ್ಲಿ ಆಯುಧಗಳಿಂದ ಸಿಬ್ಬಂದಿಯನ್ನು ಹೆದರಿಸಿ ೧೨ ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ದರೋಡೆಕಾರರು ಪರಾರಿಯಾಗಿದ್ದಾರೆ. 
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಸಿಬಿಐ ಅಧಿಕಾರಿಗಳೆಂದು ಹೇಳಿಕೊಂಡು ಬಂದ ನಾಲ್ವರು, ದಾಖಲೆಗಳನ್ನು ಪರಿಶೀಲಿಸಿ, ಲಾಕರ್ ಗಳನ್ನು ತಪಾಸಣೆ ಮಾಡುವುದಾಗಿ ಹೇಳಿದ್ದಾರೆ. ಹಿರಿಯ ಅಧಿಕಾರಿಗಳ ಅನುಮತಿ ಇಲ್ಲದೆ ಲಾಕರ್ ಗಳನ್ನೂ ತೋರಿಸುವ ಅನುಮತಿ ತಮಗೆ ಇಲ್ಲವೆಂದು ಸಿಬ್ಬಂದಿ ತಿಳಿಸಿದಾಗ, ಸಿಬಿಐ ಅಧಿಕಾರಿಗಳ ಆದೇಶವನ್ನು ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳುವುದಾಗಿ ಈ ಅನಧಿಕೃತ ವ್ಯಕ್ತಿಗಳು ಬೆದರಿಕೆ ಹಾಕಿದ್ದಾರೆ. 
ಲಾಕರ್ ಗಳನ್ನು ತೆರೆದಾಗ, ದರೋಡೆಕೋರರು ಚಿನ್ನಾಭರಣಗಳನ್ನು ತಮ್ಮ ಚೀಲಗಳಿಗೆ ತುಂಬಿಸಿಕೊಂಡಿದ್ದಾರೆ. ಇದಕ್ಕೆ ಸಿಬ್ಬಂದಿಗಳು ವಿರೋಧ ವ್ಯಕ್ತಪಡಿಸಿದಾಗ, ಅವುರಲ್ಲಿ ಒಬ್ಬ ರಿವಾಲ್ವರ್ ತೆಗೆದು ಸಿಬ್ಬಂದಿಯನ್ನು ಬೆದರಿಸಿ ಶೌಚಾಲಯದಲ್ಲಿ ಕೂಡಿಹಾಕಿದ್ದಾರೆ. 
ಸಿಸಿಟಿವಿ ಕ್ಯಾಮರಾದಿಂದ ದಾಖಲಾಗಿದ್ದ ದೃಶ್ಯಗಳನ್ನು ಒಳಗೊಂಡಿದ್ದ ಕಂಪ್ಯೂಟರ್ ಹಾರ್ಡ್ ಡಿಸ್ಕ್ ಕೂಡ ದರೋಡೆಕೋರರು ಕೊಂಡೊಯ್ದಿದ್ದಾರೆ. 
ಕಾರ್ ಹತ್ತಿ ನಾಪತ್ತೆಯಾದ ಈ ದರೋಡೆಕಾರರನ್ನು ಪತ್ತೆಹಚ್ಚಲು ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಇದಕ್ಕಾಗಿ ಐದು ತಂಡಗಳನ್ನು ರಚಿಸಲಾಗಿದೆ ಎಂದು ಸೈದರಾಬಾದ್ ಪೊಲೀಸ್ ಕಮಿಷನರ್ ಸಂದೀಪ್ ಶಾಂಡಿಲ್ಯ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com