ಇನ್ವೆಸ್ಟ್ ಕರ್ನಾಟಕ-2016: ಇಂದಿನಿಂದ 3 ದಿನಗಳ ಕಾಲ ಹೂಡಿಕೆದಾರರ ಸಮಾವೇಶ; ರು.2.50 ಲಕ್ಷ ಕೋಟಿಗೂ ಹೆಚ್ಚು ನಿರೀಕ್ಷೆ

ಇನ್ವೆಸ್ಟ್ ಕರ್ನಾಟಕಕ್ಕಾಗಿ ಶೃಂಗಾರಗೊಂಡಿರುವ ಬೆಂಗಳೂರು ನಗರ ಜಾಗತಿಕ ಉದ್ಯಮಿಗಳು, ಉದ್ಯಮಗಳ ನೀತಿ...
ಇನ್ವೆಸ್ಟ್ ಕರ್ನಾಟಕ-2016 ಸಮಾವೇಶಕ್ಕೆ ವೇದಿಕೆ ಸಜ್ಜು
ಇನ್ವೆಸ್ಟ್ ಕರ್ನಾಟಕ-2016 ಸಮಾವೇಶಕ್ಕೆ ವೇದಿಕೆ ಸಜ್ಜು
ಬೆಂಗಳೂರು: ಇನ್ವೆಸ್ಟ್ ಕರ್ನಾಟಕಕ್ಕಾಗಿ ಶೃಂಗಾರಗೊಂಡಿರುವ ಬೆಂಗಳೂರು ನಗರ ಜಾಗತಿಕ ಉದ್ಯಮಿಗಳು, ಉದ್ಯಮಗಳ ನೀತಿ ನಿರೂಪಕರು ಜೊತೆಗೆ ಸಾವಿರಾರು ಪ್ರತಿನಿಧಿಗಳ ಸ್ವಾಗತಕ್ಕೆ ಸಜ್ಜಾಗಿದೆ.
ಅರಮನೆ ಮೈದಾನಕ್ಕೆ ಪ್ರವೇಶಿಸಲು ವಿವಿಧೆಡೆಗಳಲ್ಲಿ ಪ್ರತ್ಯೇಕ ಪ್ರವೇಶ ದ್ವಾರಗಳೂ ನಿರ್ಮಾಣಗೊಂಡಿದ್ದು ಖಡ್ಡಾಯವಾಗಿ ಪಾಸ್ ಹೊಂದಿರುವ ಪ್ರತಿನಿಧಿಗಳು ಅತಿಥಿಗಳು ಮತ್ತವರ ವಾಹನಗಳಿಗೆ ಮಾತ್ರ ಅರಮನೆ ಮೈದಾನದೊಳಕ್ಕೆ ಪ್ರವೇಶಿಸಲು ಅವಕಾಶವಿದೆ. ನಗರದ ವಿವಿಧ ತಾರಾ ಹೊಟೇಲ್ ಗಳಲ್ಲಿ ಪ್ರತಿನಿಧಿಗಳು ಗಣ್ಯರಿಗಾಗಿ ರೂಂಗಳನ್ನು ಬುಕ್ ಮಾಡಲಾಗಿದ್ದು ವಿಶೇಷ ಖಾದ್ಯಗಳನ್ನು ಸಿದ್ಧಪಡಿಸಲಾಗುತ್ತಿದೆ. 
ಮೂರು ದಿನಗಳ ಕಾಲ ಈ ಸಮಾವೇಶ ನಡೆಯಲಿದ್ದು, ರತನ್ ಟಾಟಾ, ನಾರಾಯಣಮೂರ್ತಿ, ಕುಮಾರಮಂಗಲಂ ಬಿಲ್ರಾ, ಅಜೀಂಪ್ರೇಮ್ ಜಿ, ಅನಿಲ್ ಅಂಬಾನಿ, ಕಿರಣ್ ಮಜುಂದಾರ್ ಶಾ, ಸಜ್ಜನ್ ಜಿಂದಾಲ್ ಭಾಗವಹಿಸುವರು. ಭದ್ರತೆಗಾಗಿ 1500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 
ಯಾದಗಿರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ವಿಜಯಪುರ ಮತ್ತಿತರ ಜಿಲ್ಲೆಗಳಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಗೆ ಈ ಬಾರಿ ಪ್ರೋತ್ಸಾಹ ನೀಡಲಾಗುತ್ತಿದೆ. 
ಜಪಾನ್, ಜರ್ಮನಿ, ದಕ್ಷಿಣ ಕೊರಿಯಾ, ಇಟಲಿ, ಬ್ರಿಟನ್, ಫ್ರಾನ್ಸ್ ಪಾಲುದಾರ ರಾಷ್ಟ್ರಗಳಾಗಿವೆ. ಇನ್ನು ಹೂಡಿಕೆದಾರರ ಸಮಾವೇಶದಿಂದ ರು.2.50ಲಕ್ಷಕ್ಕೂ ಹೆಚ್ಚು ಕೋಟಿಗಳಷ್ಟು ಬಂಡವಾಳ ಹೂಡಿಕೆಯಾಗಿಲಿದೆ ಎಂದು ರಾಜ್ಯ ಸರ್ಕಾರ ನಿರೀಕ್ಷಿಸಿದೆ. ಅಲ್ಲದೇ, ಸಮಾವೇಶದ ಸಂದರ್ಭದಲ್ಲಿ ಹಲವಾರು ಬೃಹತ್ ಯೋಜನೆಗಳು ಪ್ರಕಟಗೊಳ್ಳುವ ನಿರೀಕ್ಷೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com