ದೆಹಲಿಗೆ ತಟ್ಟಿದ ಹರಿಯಾಣ ಪ್ರತಿಭಟನೆ ಬಿಸಿ: ನೀರು ಪೂರೈಕೆ ಸಂಪೂರ್ಣ ಬಂದ್, ನಾಳೆ ಶಾಲೆಗಳಿಗೆ ರಜೆ ಘೋಷಣೆ

ಹರಿಯಾಣದಲ್ಲಿ ನಡೆಯುತ್ತಿರುವ ಜಾಟ್ ಸಮುದಾಯದ ಮೀಸಲಾತಿ ಹೋರಾಟದ ಬಿಸಿ ರಾಷ್ಟ್ರ ರಾಜಧಾನಿ ದೆಹಲಿಗೂ...
ಜಾಟ್ ಸಮುದಾಯದ ಮೀಸಲಾತಿ ಆಗ್ರಹಿಸಿ ಗುರ್ಗಾಂವ್ -ದೆಹಲಿ ರಸ್ತೆ ತಡೆದು ಮಹಿಳೆಯರು ಪ್ರತಿಭಟನೆ ನಡೆಸಿದರು
ಜಾಟ್ ಸಮುದಾಯದ ಮೀಸಲಾತಿ ಆಗ್ರಹಿಸಿ ಗುರ್ಗಾಂವ್ -ದೆಹಲಿ ರಸ್ತೆ ತಡೆದು ಮಹಿಳೆಯರು ಪ್ರತಿಭಟನೆ ನಡೆಸಿದರು
ನವದೆಹಲಿ: ಹರಿಯಾಣದಲ್ಲಿ ನಡೆಯುತ್ತಿರುವ ಜಾಟ್ ಸಮುದಾಯದ ಮೀಸಲಾತಿ ಹೋರಾಟದ ಬಿಸಿ ರಾಷ್ಟ್ರ ರಾಜಧಾನಿ ದೆಹಲಿಗೂ ತಟ್ಟಿದೆ.
ಹರಿಯಾಣದ ಮುನಾಕ್ ಕೆನಾಲ್ ಮೂಲಕ ದೆಹಲಿಗೆ ತಲುಪಬೇಕಿದ್ದ ನೀರು ಸರಬರಾಜಿಗೆ ಅಡ್ಡಿಯಾಗಿದ್ದು, ನಾಳೆಯಿಂದ ದೆಹಲಿಯಲ್ಲಿ ನೀರು ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಈ ಸಂಬಂಧ ಮಾಹಿತಿ ನೀಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಹರಿಯಾಣದಿಂದ ದೆಹಲಿಗೆ ಕುಡಿಯುವ ನೀರು ತಲುಪಿಲ್ಲ ಹಾಗಾಗಿ, ನಾಳೆಯಿಂದ ನೀರು ಪೂರೈಕೆ ಮಾಡಲು ಸಾಧ್ಯವಿಲ್ಲ. ಕೇವಲ ಆಸ್ಪತ್ರೆಗಳಿಗೆ, ಅಗ್ನಿಶಾಮಕ ದಳಕ್ಕೆ ಮಾತ್ರ ನೀರು ಪೂರೈಕೆ ಮಾಡಲಾಗುವುದು ಎಂದು ಹೇಳಿದ್ದಾರೆ.
ದೆಹಲಿಯ ಹಲವು ಪ್ರದೇಶಗಳಲ್ಲಿ ನೀರಿಗೆ ಭಾರಿ ಅಭಾವವಾದ ಹಿನ್ನಲೆಯಲ್ಲಿ ಹಿನ್ನಲೆಯಲ್ಲಿ ನಾಳೆ ಎಲ್ಲಾ ಶಾಲೆಗಳಿಗೆ ದೆಹಲಿ ಸರ್ಕಾರ ರಜೆ ಘೋಷಣೆ ಮಾಡಿದೆ. 
ದೆಹಲಿಯ ಜನರಿಗೆ ಪೂರೈಸಲು ಜನಮಂಡಳಿ ಬಳಿ ನೀರಿಲ್ಲ. ಭಾನುವಾರಕ್ಕೆ ನೀರು ಪೂರೈಸಬಹುದು. ಆದರೆ, ನಾಳೆಯಿಂದ ದೆಹಲಿಯಲ್ಲಿ ನೀರು ತೊಂದರೆ ಎದುರಿಸಬೇಕಾಗುತ್ತದೆ ಎಂದು ದೆಹಲಿ ಸಚಿವ ಕಪಿಲ್ ಮಿಶ್ರಾ ಹೇಳಿದ್ದಾರೆ. ಅಲ್ಲದೇ, ನೀರು ಅಭಾವ ಉಂಟಾದ ಹಿನ್ನಲೆಯಲ್ಲಿ ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com