ಮೊದಲೇ 18 ತಿಂಗಳು ಜೈಲಿನಲ್ಲಿ ಕಳೆದಿದ್ದರಿಂದ 42 ತಿಂಗಳು ಶಿಕ್ಷೆ ಅನುಭವಿಸಬೇಕಿತ್ತು. ಆದರೆ, ಶಿಕ್ಷೆ ಕಡಿತದ ನಿರ್ಧಾರದಿಂದಾಗಿ ಫೆಬ್ರುವರಿ ಅಂತ್ಯದ ವೇಳೆಗೆ ದತ್ ಅವರು ಬಿಡುಗಡೆಯಾಗಲಿದ್ದಾರೆ. ಇದೇ ಲೆಕ್ಕಾಚಾರ ಪಕ್ಕಾ ಆದರೆ, ದತ್ ಅವರು 42 ತಿಂಗಳ ಪೈಕಿ 33 ತಿಂಗಳ 25 ದಿನ ಶಿಕ್ಷೆ ಅನುಭವಿಸದಂತಾಗುತ್ತದೆ. ಈ ಅವಧಿಯಲ್ಲಿ ತಲಾ ಎರಡು ಬಾರಿ ಪರೋಲ್ ಹಾಗೂ ಫರ್ಲೋ ರಜೆ ಮೇಲೆ ದತ್ ಅವರು ಜೈಲಿನಿಂದ ಹೊರಗಿದ್ದರು ಎಂಬುದು ವಿಶೇಷ. 2013ರ ಮೇ ತಿಂಗಳಲ್ಲಿ ದತ್ ಮತ್ತೆ ಜೈಲು ಸೇರಿದ್ದರು.