ಹಳಿಗೆ ಮರಳಿದ ಭಾರತ-ಪಾಕಿಸ್ತಾನ ರೈಲು ಸೇವೆ

ಹರ್ಯಾಣದಲ್ಲಿ ಜಾಟ್ ಸಮುದಾಯ ನಡೆಸುತ್ತಿದ್ದ ಪ್ರತಿಭಟನೆಗಳಿಂದಾಗಿ ತಾತ್ಕಾಲಿಕವಾಗಿ ರದ್ದಾಗಿದ್ದ ಭಾರತ-ಪಾಕಿಸ್ತಾನ ಸಂಜೌತ ಎಕ್ಸ್ಪ್ರೆಸ್ ಸೇವೆಯನ್ನು ಗುರುವಾರದಿಂದ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಾಹೋರ್: ಹರ್ಯಾಣದಲ್ಲಿ ಜಾಟ್ ಸಮುದಾಯ ನಡೆಸುತ್ತಿದ್ದ ಪ್ರತಿಭಟನೆಗಳಿಂದಾಗಿ ತಾತ್ಕಾಲಿಕವಾಗಿ ರದ್ದಾಗಿದ್ದ ಭಾರತ-ಪಾಕಿಸ್ತಾನ ಸಂಜೌತ ಎಕ್ಸ್ಪ್ರೆಸ್ ಸೇವೆಯನ್ನು ಗುರುವಾರದಿಂದ ಪುನರಾರಂಭಿಸಲಾಗಿದೆ.

೫೦೦ ಜನ ಪ್ರಯಾಣಿಕರ ಸಾಮರ್ಥ್ಯದ ರೈಲು ದೆಹಲಿಯಿಂದ ಲಾಹೋರ್ ಗೆ ತೆರಳುತ್ತದೆ. ಗುರುವಾರ ಬೆಳಗ್ಗೆ ರೈಲು ದೆಹಲಿಂದ ಪಾಕಿಸ್ತಾನಕ್ಕೆ ಹೊರಟಿದೆ ಎಂದು ದುನಿಯಾ ನ್ಯೂಸ್ ವರದಿ ಮಾಡಿದೆ.

ಜಾಟ್ ಪ್ರತಿಭಟನೆಯಿಂದ ಭಾರತ ಪಾಕಿಸ್ತಾನದ ನಡುವೆ ಬಸ್ ಸೇವೆಯನ್ನು ಕೂಡ ರದ್ದುಪಡಿಸಲಾಗಿತ್ತು, ಆದರೆ ಸೇವೆಯನ್ನು ಬುಧವಾರ ಮತ್ತೆ ಆರಂಭಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com