ಬಿಎಸ್‌ವೈಗೆ ಬಿಗ್ ರಿಲೀಫ್: ಮಾಜಿ ಸಿಎಂ ವಿರುದ್ಧದ 15 ಪ್ರಕರಣಗಳು ರದ್ದು

ಅಕ್ರಮ ಡಿ-ನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿದ್ದ 15 ಪ್ರಕರಣಗಳನ್ನು...
ಯಡಿಯೂರಪ್ಪ
ಯಡಿಯೂರಪ್ಪ
ಬೆಂಗಳೂರು: ಅಕ್ರಮ ಡಿ-ನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿದ್ದ 15 ಪ್ರಕರಣಗಳನ್ನು ಹೈಕೋರ್ಟ್ ಏಕ ಸದಸ್ಯ ಪೀಠ ಮಂಗಳವಾರ ರದ್ದುಗೊಳಿಸಿದೆ. ಇದರಿಂದ ಬಿಎಸ್‌ವೈಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಡಿನೋಟಿಫಿಕೇಷನ್‌ ಗೆ ಸಂಬಂಧಿಸಿದಂತೆ ಅವರ ವಿರುದ್ಧ  ಲೋಕಾಯುಕ್ತ ಪೊಲೀಸರು 15 ಎಫ್ಐಆರ್‍ಗಳನ್ನು  ದಾಖಲಿಸಿದ್ದರು. ಆದರೆ ಈ ಎಲ್ಲಾ  ಎಫ್ಐಆರ್‍ಗಳನ್ನು ರದ್ದುಗೊಳಿಸುವಂತೆ ಕೋರಿ ಯಡಿಯೂರಪ್ಪ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ರತ್ನಕಲಾ  ಅವರು, ಎಲ್ಲಾ ಪ್ರಕರಣಗಳನ್ನು ರದ್ದುಗೊಳಿಸಿ ಆದೇಶ ನೀಡಿದ್ದಾರೆ.
ಕಳೆದ ಡಿ.12ರಂದು ಬಿಎಸ್‍ವೈ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾ. ರತ್ನಕಲಾ ಅವರು, ತೀರ್ಪನ್ನು ಇಂದಿಗೆ ಕಾಯ್ದಿರಿಸಿದ್ದರು.
ಪ್ರಕರಣವೇನು?
ನಗರದ ಎಚ್‍ಆರ್ ಬಿಆರ್ ಲೇಔಟ್, ರಾಚೇನಹಳ್ಳಿ ಹಾಗೂ ಜೆಪಿನಗರ 8ನೇ ಹಂತ ಸೇರಿ ಹಲವೆಡೆ ಬಡಾವಣೆ ನಿರ್ಮಾಣಕ್ಕೆ ವಶಪಡಿಸಿಕೊಂಡಿದ್ದ ಜಮೀನನ್ನು ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ಅಕ್ರಮವಾಗಿ ಡಿ-ನೋಟಿಫೈ ಮಾಡಿದ್ದಾರೆ ಎಂಬುದಾಗಿ ಸಿಎಜಿ ವರದಿ ಉಲ್ಲೇಕಿಸಿದೆ ಎಂದು ಆರೋಪಿಸಿ ಜಯಕುಮಾರ್ ಹಿರಮೇಠ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಲೋಕಾ ಪೊಲೀಸರು ಯಡಿಯೂರಪ್ಪ ವಿರುದ್ಧ 2015ರ ಜೂನ್ ನಲ್ಲಿ 15 ಎಫ್ ಐಆರ್ ದಾಖಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com