ಲಂಕಾ ನೌಕಾಪಡೆಯಿಂದ 12 ಮಂದಿ ಭಾರತೀಯ ಮೀನುಗಾರರ ಬಂಧನ

ಶ್ರೀಲಂಕಾ ಸಮುದ್ರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿದ್ದ ಆರೋಪ ಮೇಲೆ ಲಂಕಾ ನೌಕಾಪಡೆ 12 ಮಂದಿ ಭಾರತೀಯ ಮೀನುಗಾರರನ್ನು ಬಂಧಿಸಿದೆ...
ಲಂಕಾನೌಕಾಪಡೆಯಿಂದ ಭಾರತೀಯ ಮೀನುಗಾರರ ಬಂಧನ (ಸಂಗ್ರಹ ಚಿತ್ರ)
ಲಂಕಾನೌಕಾಪಡೆಯಿಂದ ಭಾರತೀಯ ಮೀನುಗಾರರ ಬಂಧನ (ಸಂಗ್ರಹ ಚಿತ್ರ)

ಚೆನ್ನೈ: ಶ್ರೀಲಂಕಾ ಸಮುದ್ರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿದ್ದ ಆರೋಪ ಮೇಲೆ ಲಂಕಾ ನೌಕಾಪಡೆ 12 ಮಂದಿ ಭಾರತೀಯ ಮೀನುಗಾರರನ್ನು ಬಂಧಿಸಿದೆ.

ತಮಿಳುನಾಡು ಮೂಲದ ಸುಮಾರು 12 ಮಂದಿ ಮೀನುಗಾರರನ್ನು ಸಮುದ್ರ ಗಡಿ ನಿಯಮ ಉಲ್ಲಂಘನೆ ಆರೋಪದಡಿ ಶ್ರೀಲಂಕಾ ನೌಕಾಪಡೆ ಮಂಗಳವಾರ ಬೆಳ್ಳಂಬೆಳಗ್ಗೆ ಬಂಧಿಸಿದೆ ಎಂದು  ತಿಳಿದುಬಂದಿದೆ. ಲಂಕಾದ ಕಚ್ಛಾತೀವು ಸಮುದ್ರ ಗಡಿಯಲ್ಲಿ 12 ಮಂದಿ ಮೀನುಗಾರರು ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿದ್ದರು ಎಂದು ಲಂಕಾ ನೌಕಾಪಡೆ ಆರೋಪಿಸಿದೆ.

ಮೂಲಗಳ ಪ್ರಕಾರ ಬಂಧಿತ 12 ಮಂದಿಯ ಪೈಕಿ 8 ಮಂದಿ ರಾಮೇಶ್ವರಂ ಪ್ರದೇಶಕ್ಕೆ ಸೇರಿದವರಾಗಿದ್ದು, ಉಳಿದ ಇಬ್ಬರು ಪುದುಕೋಟೈನಲ್ಲಿರುವ ಜಗಡಪಟ್ಟಿನಂ ಜಿಲ್ಲೆಗೆ ಸೇರಿದವರು ಎಂದು  ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಗೋಪಿನಾಥ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಪ್ರಸ್ತುತ ಮೀನುಗಾರಿ ನಡೆಸುತ್ತಿದ್ದ ಮೂರು ಬೋಟ್ ಗಳನ್ನು ಮತ್ತು ಅದರಲ್ಲಿದ್ದ  ಸಿಬ್ಬಂದಿಗಳನ್ನು ಬಂಧಿಸಿದ್ದು, ತಲೈಮನ್ನೂರಿಗೆ ಕೊಂಡೊಯ್ದು ಅಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವುದಾಗಿ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com