ಬಿಡಿಎ ಹಾಗೂ ಖಾಸಗಿ ಸಂಸ್ಥೆಗಳಿಂದ ಬೆಂಗಳೂರಿನಲ್ಲಿ 10 ಸಾವಿರ ಎಕರೆ ಒತ್ತುವರಿ: ಕೋಳಿವಾಡ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ), ಸರ್ಕಾರಿ ಅಧಿಕಾರಿಗಳು ಹಾಗೂ ಖಾಸಗಿ ಸಂಸ್ಥೆಗಳು ಬೆಂಗಳೂರಿನಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ...
ಕೆಬಿ ಕೋಳಿವಾಡ
ಕೆಬಿ ಕೋಳಿವಾಡ
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ), ಸರ್ಕಾರಿ ಅಧಿಕಾರಿಗಳು ಹಾಗೂ ಖಾಸಗಿ ಸಂಸ್ಥೆಗಳು ಬೆಂಗಳೂರಿನಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಕೆರೆ ಜಾಗವನ್ನು ಒತ್ತುವರಿ ಮಾಡಿದ್ದಾರೆ ಎಂದು ಕೆರೆ ಒತ್ತುವರಿ ತೆರವು ಹಾಗೂ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆಬಿ ಕೋಳಿವಾಡ ಶುಕ್ರವಾರ ಹೇಳಿದ್ದಾರೆ. 
ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೋಳಿವಾಡ್, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಒಟ್ಟು 1545 ಕೆರೆಗಳಿದ್ದವು. ಇದರಲ್ಲಿ ಸರ್ಕಾರ 1243 ಕಡೆಗಳಲ್ಲಿ 1032 ಎಕರೆ ಜಾಗ ಒತ್ತುವರಿ ಮಾಡಿಕೊಂಡಿದೆ. ಖಾಸಗಿಯವರು 5162 ಎಕರೆ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ. 11595 ಜನ ಖಾಸಗಿಯಾಗಿ ಸುಮಾರು 7,185 ಎಕರೆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ಅಲ್ಲದೆ ಅವರಿಗೆಲ್ಲ ಒತ್ತುವರಿ ತೆರವುಗೊಳಿಸುವಂತೆ ನೋಟಿಸ್ ನೀಡಲಾಗಿದೆ ಎಂದರು.
ಬಿಡಿಎ, ಪಿಡ್ಲ್ಯೂಡಿ, ಶಿಕ್ಷಣ ಇಲಾಖೆ, ಬಿಬಿಎಂಪಿ ಕೆರೆ ಒತ್ತುವರಿ ಮಾಡಿವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಒತ್ತುವರಿ ಮಾಡಿಕೊಂಡಿದ್ದು, ಆ ಜಾಗವನ್ನು ಈಗ ಅವರು ಮಾರಿದ್ದಾರೆ ಎಂದು ಕೋಳಿವಾಡ ತಿಳಿಸಿದರು.
ಕೆರೆ ಒತ್ತುವರಿಗೆ ಸಂಬಂಧಿಸಿದಂತೆ ಸದ್ಯಕ್ಕೆ ಸರ್ಕಾರಕ್ಕೆ ಯಾವುದೇ ವರದಿ ಕೊಡುತ್ತಿಲ್ಲ. ಒತ್ತುವರಿಯಲ್ಲಿ ಸರ್ಕಾರಿ ಅಧಿಕಾರಿಗಳ ಕೈವಾಡವಿದೆ. ತಪ್ಪಿತಸ್ಥ ಅಧಿಕಾರಿಗಳನ್ನು ಜೈಲಿಗೆ ಅಟ್ಟಬೇಕು ಎಂದರು. ಸಮಿತಿಗೆ ಕೇವಲ ವರದಿ ಸಲ್ಲಿಸುವ ಅಧಿಕಾರ ಮಾತ್ರ ಇದೆ. ತೆರವುಗೊಳಿಸುವ ಅಧಿಕಾರ ಸಮಿತಿಗಿಲ್ಲ ಎಂದು ಹೇಳಿದರು.
ಒತ್ತುವರಿ ಮಾಡಿಕೊಂಡ ಪ್ರತಿಷ್ಠಿತ ಕಂಪನಿ
ಶೋಭಾ ಡೆವಲಪರ್ಸ್ 
ಬ್ರಿಗೇಡ್ ಗ್ರೂಫ್ ಆಫ್ ಕಂಪನೀಸ್ 
ವಂದನಾ ಸಾಗರ್ ಅಪಾರ್ಟ್ ಮೆಂಟ್ಸ್
ಒಬೆರಾಯ್ ಗ್ರೂಪ್
ವಾಲ್ ಮಾರ್ಟ್ ಗ್ರೂಪ್
ಗ್ರೀನ್ ವುಡ್  ಗ್ರೂಪ್
ಪುಷ್ಪಂ ಗ್ರೂಪ್
ಶ್ರೀರಾಮ ಅಪಾರ್ಟ್ ಮೆಂಟ್ಸ್ 
ಬಿಆರ್ ವ್ಯಾಲ್ಯೂ ಪಾರ್ಕ್
ಲೇಕ್ ವೀವ್ ಅಪಾರ್ಟ್ ಮೆಂಟ್
ಮಹಾಲಕ್ಷ್ಮಿ ಅಪಾರ್ಟ್ ಮೆಂಟ್ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com