ಭಾರತಕ್ಕೆ ಸವಾಲಾದ ಮತ್ತೊಬ್ಬ ಭಟ್ಕಳ ಉಗ್ರ

ಯಾಸಿನ್ ಭಟ್ಕಳ್, ರಿಯಾಜ್ ಭಟ್ಕಳ್ , ಅಬ್ದುಲ್ ಕರೀ೦ ತು೦ಡಾ ಮತ್ತಿತರ ಪ್ರಮುಖ ಉಗ್ರರನ್ನು ಬ೦ಧಿಸುವ ಮೂಲಕ ಇ೦ಡಿಯನ್ ಮುಜಾಹಿದೀನ್ ಭಯೋತ್ಪಾದನಾ ಸ೦ಘಟನೆಯ ಜಾಲವನ್ನು ಬಹುತೇಕ ನಾಶಪಡಿಸಿದ್ದ ಭಾರತದ ತನಿಖಾ ಸ೦ಸ್ಥೆಗಳಿಗೆ ಈಗ ಮತ್ತೊಬ್ಬ ಭಟ್ಕಳ ಉಗ್ರ ಸವಾಲಾಗಿ ಪರಿಣಮಿಸಿದ್ದಾನೆ...
ಉಗ್ರ ಶಫಿ ಅರ್ಮರ್ (ಸಂಗ್ರಹ ಚಿತ್ರ)
ಉಗ್ರ ಶಫಿ ಅರ್ಮರ್ (ಸಂಗ್ರಹ ಚಿತ್ರ)

ನವದೆಹಲಿ: ಯಾಸಿನ್ ಭಟ್ಕಳ್, ರಿಯಾಜ್ ಭಟ್ಕಳ್ , ಅಬ್ದುಲ್ ಕರೀ೦ ತು೦ಡಾ ಮತ್ತಿತರ ಪ್ರಮುಖ ಉಗ್ರರನ್ನು ಬ೦ಧಿಸುವ ಮೂಲಕ ಇ೦ಡಿಯನ್ ಮುಜಾಹಿದೀನ್ ಭಯೋತ್ಪಾದನಾ  ಸ೦ಘಟನೆಯ ಜಾಲವನ್ನು ಬಹುತೇಕ ನಾಶಪಡಿಸಿದ್ದ ಭಾರತದ ತನಿಖಾ ಸ೦ಸ್ಥೆಗಳಿಗೆ ಈಗ ಮತ್ತೊಬ್ಬ ಭಟ್ಕಳ ಉಗ್ರ ಸವಾಲಾಗಿ ಪರಿಣಮಿಸಿದ್ದಾನೆ.

ಜಗತ್ತಿಗೇ ಕಂಟಕವಾಗಿ ಮಾರ್ಪಟ್ಟಿರುವ ಐಸಿಸ್ ಉಗ್ರ ಸ೦ಘಟನೆಯೊ೦ದಿಗೆ ನಿಕಟ ಸ೦ಪಕ೯ದಲ್ಲಿರುವ ಅನ್ಸರ್ ಉತ್ ತೌಹಿದ್ ಫಿ ಹಿಲದ್ ಅಲ್ ಹಿ೦ದ್ (ಎಯುಟಿ)ನ ಮುಖ್ಯಸ್ಥ, ಭಟ್ಕಳ  ಮೂಲದ ಉಗ್ರ ಶಫಿ ಅರ್ಮರ್ ಭಾರತದಲ್ಲಿ ವಿಧ್ವ೦ಸಕ ಕೃತ್ಯಗಳನ್ನು ನಡೆಸಲು ಯೋಜನೆ ರೂಪಿಸಿದ್ದಾನೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಅರ್ಮರ್ ತನ್ನ ವಿಧ್ವಂಸಕ ಕೃತ್ಯಗಳನ್ನು  ಎಸಗಲು ಈಗಾಗಲೇ ಯುವಕರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದಾನೆ ಎ೦ದು ಗುಪ್ತಚರ ಮೂಲಗಳು ತಿಳಿಸಿವೆ.

ಯಾರು ಈ ಅರ್ಮರ್..?
ಅಬ್ದುಲ್ ಖಾದಿರ್ ಸುಲ್ತಾನ್ ಅರ್ಮರ್ ಹಾಗೂ ಶಫಿ ಅರ್ಮರ್ ಮೂಲತಃ ಭಟ್ಕಳ ಮೂಲದ ಸಹೋದರರಾಗಿದ್ದಾರೆ. ಜಿಹಾದ್ ಹೋರಾಟದತ್ತ ಆಕಷಿ೯ತರಾಗಿ ಇವರು ಪಾಕಿಸ್ತಾನ ಹಾಗೂ  ಅಫ಼್ಘಾನಿಸ್ತಾನಕ್ಕೆ ತೆರಳಿದ್ದರು. ಈ ಹಿಂದೆ ಯಾಸಿನ್ ಭಟ್ಕಳ್ ನೇತೃತ್ವದ ಇ೦ಡಿಯನ್ ಮುಜಾಹಿದೀನ್ ಸೇರಿದ್ದ ಇವರು, ನ೦ತರ ಅಲ್‍ಖೈದಾ ಉಗ್ರ ಸ೦ಘಟನೆಯೊ೦ದಿಗೆ  ಗುರುತಿಸಿಕೊ೦ಡಿದ್ದರು. 2013ರಲ್ಲಿ ತಮ್ಮದೇ ಉಗ್ರ ಸ೦ಘಟನೆ ಎಯುಟಿ ಅಸ್ತಿತ್ವಕ್ಕೆ ತ೦ದು ಐಸಿಸ್ ಸ್ನೇಹ ಸ೦ಪಾದಿಸಿದ್ದರು. 2015 ಮಾರ್ಚ್ ನಲ್ಲಿ ಸಿರಿಯಾದಲ್ಲಿ ಐಸಿಸ್ ಪರ  ಹೋರಾಡುತ್ತಿದ್ದಾಗ ಅಮೆರಿಕ ಮಿತ್ರ ಪಡೆಗಳ ಡ್ರೋನ್ ದಾಳಿಯಲ್ಲಿ ಶಫಿ ಸಹೋದರ ಉಗ್ರ ಸುಲ್ತಾನ್ ಅರ್ಮರ್ ಸಾವನ್ನಪ್ಪಿದ್ದ. ಈಗ ಶಫಿ ಅರ್ಮರ್ ಎಯುಟಿ ಉಗ್ರ ಸ೦ಘಟನೆ ನೇತೃತ್ವ  ವಹಿಸಿಕೊ೦ಡಿದ್ದು, ಭಾರತದಲ್ಲಿ ಐಸಿಸ್ ಜಾಲ ವಿಸ್ತರಿಸಲು ಯತ್ನಿಸುತ್ತಿದ್ದಾನೆ ಎನ್ನಲಾಗುತ್ತಿದೆ.

ಮೊದಲ ಬಾರಿಗೆ ಶಫಿ ಅರ್ಮರ್ ಹೆಸರು ಬಲವಾಗಿ ಕೇಳಿಬಂದಿದ್ದು, 15 ತಿಂಗಳ ಹಿಂದೆ ಮಧ್ಯ ಪ್ರದೇಶದಲ್ಲಿ. ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪ ಮೇಲೆ ರಾಜಸ್ತಾನದಲ್ಲಿ  ಸುಮಾರು 5 ಯುವಕರ ತಂಡವನ್ನು ಭಯೋತ್ಪಾದನಾ ನಿಗ್ರಹ ದಳ ಬಂಧಿಸಿತ್ತು. ಈ ವೇಳೆ ತನಿಖೆ ನಡೆಸಿದ್ದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಯಲು ಮಾಡಿದ್ದೇ ಈ ಶಫಿ ಅರ್ಮರ್  ನ ಹೆಸರನ್ನು. ಬಂಧಿತ ಐವರು ಉಗ್ರರನ್ನು ನೇಮಕ ಮಾಡಿಕೊಂಡಿದ್ದೇ ಈ ಶಫಿ ಅರ್ಮರ್ ಎಂದು ತನಿಖೆ ವೇಳೆ ತಿಳಿದುಬಂದಿತ್ತು. ಕೇವಲ ರಾಜಸ್ತಾನ ಮಾತ್ರವಲ್ಲದೇ ಮಧ್ಯಪ್ರದೇಶ  ಸೇರಿದಂತೆ ಹಲವು ರಾಜ್ಯಗಳಲ್ಲಿ ಶಫಿ ಅರ್ಮರ್ ಯುವಕರನ್ನು ಉಗ್ರ ಸಂಘಟನೆಗೆ ನೇಮಕಾತಿ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.

ಶಫಿ ಅರ್ಮರ್ ಮೇಲೆ ಹದ್ದಿನ ಕಣ್ಣಿಟ್ಟಿರುವ ಗುಪ್ತಚರ ಇಲಾಖೆ
ಇನ್ನು ಇಸಿಸ್ ಉಗ್ರ ಸಂಘಟನೆಯ ಸ್ನೇಹ ಸಂಪಾದಿಸಿರುವ ಶಫಿ ಅರ್ಮರ್ ಮೇಲೆ ಇದೀಗ ಕೇಂದ್ರ ಗುಪ್ತಚರ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಆತನ ಚಲನವಲನಗಳನ್ನು ಸೂಕ್ಷ್ಮವಾಗಿ  ಗಮನಿಸುತ್ತಿದೆ. ಪ್ರಸ್ತುತ ಶಫಿ ಅರ್ಮರ್ ಎಲ್ಲಿದ್ದಾನೆ.. ಯಾವ ದೇಶದಲ್ಲಿ ಅಡಗಿಕೊಂಡಿದ್ದಾನೆ ಎಂಬುದು ಈಗಲೂ ಕಗ್ಗಂಟಾಗಿಯೇ ಉಳಿದಿದ್ದು, ಕಳೆದ ಐದು ವರ್ಷಗಳಿಂದ ಗುಪ್ತಚರ ಇಲಾಖೆಯ  ಅಧಿಕಾರಿಗಳು ಈತನ ಹಿಂದೆ ಬಿದ್ದಿದ್ದಾರೆ. ಈತನಿಗಾಗಿ ಪಾಕಿಸ್ತಾನ, ಆಫ್ಘಾನಿಸ್ತಾನ, ಸೌದಿ ಅರೇಬಿಯಾ ಮತ್ತು ಒಮನ್ ದೇಶಗಳಲ್ಲಿ ಈತನನ್ನು ಕಂಡುಹಿಡಿಯಲು ಜಾಲ ಹೆಣೆಯಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com