ಈ ವರ್ಷ ಒಟ್ಟು ಐದು ಗ್ರಹಣ ಗೋಚರ: ಭಾರತದಲ್ಲಿ ಗೋಚರವಾಗುವುದು ಎರಡೇ

ಖಗೋಳ ಪ್ರಿಯರಿಗೆ ಸಂತೋಷ ತರುವ ಸುದ್ದಿಯೊಂದಿದೆ. 2016ನೇ ವರ್ಷದಲ್ಲಿ ನಭದಲ್ಲಿ ಅಪರೂಪದ ವಿದ್ಯಮಾನ ಸಂಭವಿಸಲಿದೆ...
ಗ್ರಹಣ
ಗ್ರಹಣ

ಇಂದೋರ್: ಖಗೋಳ ಪ್ರಿಯರಿಗೆ ಸಂತೋಷ ತರುವ ಸುದ್ದಿಯೊಂದಿದೆ. 2016ನೇ ವರ್ಷದಲ್ಲಿ ನಭದಲ್ಲಿ ಅಪರೂಪದ ವಿದ್ಯಮಾನ ಸಂಭವಿಸಲಿದೆ. ಈ ವರ್ಷ ಬರೋಬ್ಬರಿ ಐದು ಗ್ರಹಣಗಳು ಸಂಭವಿಸಲಿವೆ. ಭಾರತದಲ್ಲಿ ಗೋಚರಿಸುವುದು ಮಾತ್ರ ಎರಡೇ ಗ್ರಹಣಗಳು.

ಮಾರ್ಚ್ 9ರಂದು ಘಟಿಸಲಿರುವ ಸಂಪೂರ್ಣ ಸೂರ್ಯಗ್ರಹಣದೊಂದಿಗೆ ಈ ಗ್ರಹಣಗಳ ಸರಣಿ ಆರಂಭವಾಗಲಿದೆ. ಆದರೆ, ಈ ಸೂರ್ಯ ಗ್ರಹಣ ಗೋಚರಿಸುವುದು ಈಶಾನ್ಯ ಭಾರತದಲ್ಲಿ ಮಾತ್ರ. ಅದೂ ಭಾಗಶಃ ಎಂದು ಜೀವಾಜಿ ಅಬ್ಸರ್ ವೇಟರಿ ಸಂಸ್ಥೆಯ ಮುಖ್ಯಸ್ಥ ಡಾ. ರಾಜೇಂದ್ರ ಪ್ರಕಾಶ್ ಗುಪ್ತ ಹೇಳಿದ್ದಾರೆ.

ಇದರ ಜೆಗೆ ಮಾರ್ಚ್ 23 ರಂದು ನಡೆಯುವ ಚಂದ್ರ ಗ್ರಹಣ ಭಾರತದಲ್ಲಿ ಕಾಣಸಿಗಲಿದೆ. ಇವೆರಡನ್ನು ಹೊರತುಪಡಿಸಿ ಈ ವರ್ಷ ನಡೆಯುವ ಇತರ ಗ್ರಹಣ ಭಾರತದಲ್ಲಿ ಗೋಚರಿಸದು. ಇನ್ನು ಆಗಸ್ಟ್ 18ರಂದು ಭಾಗಶಃ ಚಂದ್ರ ಗ್ರಹಣ ಮತ್ತು ಸೆ.1ರಂದು ವಲಯಾಕಾರ ಸೂರ್ಯಗ್ರಹಣ ನಡೆಯುತ್ತದೆಯಾದರೂ, ಅದೂ ಭಾರತದಲ್ಲಿ ಕಾಣಿಸದು. ಸೆ.16ರಂದು ಭಾಗಶಃ ಚಂದ್ರಗ್ರಹಣ ನಡೆಯಲಿದ್ದು, ಅದು ದೇಶಾದ್ಯಂತ ಗೋಚರಿಸಲಿದೆ ಎಂದು ಖಗೋಳ ತಜ್ಞರು ಹೇಳಿದ್ದಾರೆ.

ಕಳೆದ ವರ್ಷ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸಿದ್ದವು. ಅದರಲ್ಲಿ ಎರಡು ಸಂಪೂರ್ಣ ಚಂದ್ರ ಗ್ರಹಣವಾಗಿದ್ದರೆ. ಒಂದು ಸಂಪೂರ್ಣ ಸೂರ್ಯ ಗ್ರಹಣವಾಗಿತ್ತು. ಮತ್ತೊಂದು ಭಾಗಶಃ ಸೂರ್ಯಗ್ರಹಣವಾಗಿತ್ತು ಎಂದು ಖಗೋಳ ಶಾಸ್ತ್ರಜ್ಞ ಡಾ. ಗುಪ್ತಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com